Advertisement

ಲಾಲು, ರಾಹುಲ್‌ ಇದ್ದದ್ದಕ್ಕೆ ಶತಮಾನೋತ್ಸವ ಬಹಿಷ್ಕರಿಸಿದ ಬಿಜೆಪಿ

03:45 AM Apr 18, 2017 | Team Udayavani |

ಪಟ್ನಾ: ಚಂಪಾರಣ್‌ ಸತ್ಯಾಗ್ರಹಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಬಿಹಾರ ರಾಜಧಾನಿ ಪಟ್ನಾದಲ್ಲಿ ಆಯೋಜಿ ಸಲಾಗಿದ್ದ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಕೊನೆಯ ಹಂತದಲ್ಲಿ ಬಹಿಷ್ಕಾರ ಹಾಕಿದ್ದಾರೆ. ಮೇವು ಹಗರಣದಲ್ಲಿ ಆರೋಪಕ್ಕೆ ಗುರಿಯಾಗಿ ಶಿಕ್ಷೆಗೀಡಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಜತೆಗೆ ವೇದಿಕೆಯಲ್ಲಿ ಕುಳಿತುಕೊಂಡಿದ್ದೇ ನಾಯಕರ ಕೋಪಕ್ಕೆ ಕಾರಣ. ಗಮನಾರ್ಹ ಅಂಶವೆಂದರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೂಡ ಇದ್ದರು. 

Advertisement

ಬೆಳವಣಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ “ಶಿಕ್ಷೆಗೆ ಗುರಿಯಾಗಿರುವ ನಾಯಕರೊಬ್ಬರನ್ನು ಮಹಾತ್ಮಾ ಗಾಂಧಿ ಬ್ರಿಟೀಷರ ವಿರುದ್ಧ ನಾಗರಿಕ ಅಸಹಕಾರ ಚಳವಳಿಗೆ ಕರೆ ನೀಡಿ 100 ವರ್ಷ ತುಂಬಿದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದೆಷ್ಟು ಸರಿ,’ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ನ್ಯಾಷನಲ್‌ ಹೆರಾಲ್ಡ್‌ ಕಂಪನಿಯ ಆಸ್ತಿ ದುರುಪಯೋಗ ಮಾಡಿಕೊಂಡ ಆರೋಪದ ಬಗ್ಗೆ ವಿಚಾರಣೆಯಾಗುತ್ತಿದೆ. ಹೀಗಿದ್ದರೂ ಅವರನ್ನು ಆಹ್ವಾನಿಸಲಾಗಿದೆ ಎಂದು ದೂರಿದರು.  ಮತ್ತೂಬ್ಬ ಬಿಜೆಪಿ ನಾಯಕ ಮಂಗಲ್‌ ಪಾಂಡೆ ಮಾತನಾಡಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಬೇಕಾಗಿತ್ತು. ಅಂತಿಮ ಕ್ಷಣದಲ್ಲಿ ಅವರೂ ಹಿಂದೆ ಸರಿದರು ಎಂದಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ “ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿ ಸದೇ ಇರುವವರು ಮತ್ತು ನಾಥೂರಾಮ್‌ ಗೋಡ್ಸೆಗೆ ಬೆಂಬಲ ನೀಡುವವರು ಈಗ ಬಹಿಷ್ಕಾರದ ಪಾಠ ಹೇಳುತ್ತಿದ್ದಾರೆ,’ ಎಂದು ಲೇವಡಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ ಬಿಜೆಪಿ ನಾಯಕರನ್ನು ಛೇಡಿಸಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ “ಕಾರ್ಯಕ್ರಮಕ್ಕೆ ಬಂದವರು, ಬಾರದೇ ಇರುವವರಿಗೂ ಧನ್ಯವಾದ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next