ಬೆಳ್ತಂಗಡಿ: ಭೂಮಿಯ ಫಲವತ್ತತೆ ವೃದ್ಧಿಸುವ ಸಲುವಾಗಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೈತಬಂಧು ಅಭಿಯಾನ ಪರಿಚಯಿಸಿದೆ. ಬೆಳ್ತಂಗಡಿ ತಾಲೂಕಿನ 75 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. 75ನೇ ಸ್ವಾತಂತ್ರೊéàತ್ಸವ ಆಚರಣೆಯಂದು ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಆ.15ರಿಂದ ಅಕ್ಟೋಬರ್ 15ರವರೆಗೆ ಅಭಿಯಾನ ನಡೆಯಲಿದ್ದು, ಪ್ರತೀ ಗ್ರಾ.ಪಂ.ಗಳಲ್ಲಿ 25ಮಂದಿ ಪಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಬೆಳ್ತಂಗಡಿ ತಾಲೂಕಿನಲ್ಲಿ ಪಡಂಗಡಿ ಗ್ರಾ.ಪಂ.-5, ನಡ ಗ್ರಾ.ಪಂ., ಮಾಲಾಡಿ, ಲಾೖಲ, ಉಜಿರೆ, ಚಾರ್ಮಾಡಿ, ಮಡಂತ್ಯಾರು, ಬಂದಾರು ಗ್ರಾ.ಪಂ.ಗಳಿಂದ ಅರ್ಜಿ ಸಲ್ಲಿಸಿದ ತಲಾ 10 ಮಂದಿಯಂತೆ 75 ಮಂದಿ ಫಲಾನುಭವಿಗಳನ್ನು ಆಯ್ಕೆಮಾಡಲಾಗಿದೆ.
ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಫಲಾನುಭವಿಗಳಿಗೆ ತರಬೇತಿ ನೀಡಲು ತೋಟಗಾರಿಕೆ ಇಲಾಖೆ ಮದ್ದಡ್ಕದಲ್ಲಿ ಮಾದರಿ ತೊಟ್ಟಿ ನಿರ್ಮಿಸಿ ಪ್ರಾತ್ಯಕ್ಷಿಕೆ ನೀಡಲಿದೆ. ಗ್ರಾ.ಪಂ. ಮಟ್ಟದಲ್ಲಿ ಕನಿಷ್ಠ 25 ತೊಟ್ಟಿ ಅನುಷ್ಠಾನದ ಗುರಿ ನೀಡಲಾಗಿದೆ. ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಎರೆಹುಳು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ರೈತ ಮಿತ್ರ ಎರೆಹುಳು ಗೊಬ್ಬರ ಉತ್ಪಾದನೆಯಿಂದ ಶೇ. 25-30 ವೆಚ್ಚ ಕಡಿಮೆ ಜತೆಗೆ ಎರೆಹುಳು ಗೊಬ್ಬರ ಸತತ ಬಳಕೆಯಿಂದ ಮಣ್ಣಿನಲ್ಲಿರುವ ಹಾನಿಕಾರಕ ಲವಣಗಳ ಪ್ರಮಾಣ ಕಡಿಮೆ ಸೇರಿದಂತೆ ಭೂಮಿಯ ಫಲವತ್ತತೆ ಕಾಪಾಡುವ ಸಲುವಾಗಿ ರೈತಬಂಧು ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಎರೆಹುಳು ತೊಟ್ಟಿ ಮಾದರಿ 1
ಅಂದಾಜು ಮೊತ್ತ 27 ಸಾವಿರ
ಕೂಲಿ ಮೊತ್ತ 5,873
ಸಾಮಗ್ರಿ ಮೊತ್ತ 18,000
ಉದ್ದ 18 ಅಡಿ
ಅಗಲ 9 ಅಡಿ
ಎತ್ತರ 4 ಅಡಿ
ಮಾದರಿ: 2
ಅಂದಾಜು 21 ಸಾವಿರ
ಕೂಲಿ 4,891
ಸಾಮಗ್ರಿ 15,000
ಉದ್ದ 12 ಅಡಿ
ಅಗಲ 9 ಅಡಿ
ಎತ್ತರ 4 ಅಡಿ