Advertisement

ಕೋವಿಡ್ 19 ಬೆನ್ನಲ್ಲೇ ಚೀನಾದಲ್ಲಿ ಬಬೂನಿಕ್ ಪ್ಲೇಗ್ ಆತಂಕ; ಮುಂಗುಸಿ ಮಾಂಸ ಸೇವನೆ ನಿಷೇಧ

11:45 AM Jul 06, 2020 | Nagendra Trasi |

ಬೀಜಿಂಗ್:ಮಾರಣಾಂತಿಕ ಕೋವಿಡ್ 19 ಸೋಂಕು ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿ ನಂತರ ವಿಶ್ವಾದ್ಯಂತ ಹಬ್ಬುವ ಮೂಲಕ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಏನನ್ಮಧ್ಯೆ ಚೀನಾದಲ್ಲಿ ಬಬೂನಿಕ್ (ಗಡ್ಡೆ) ಪ್ಲೇಗ್ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

ಮಂಗೋಲಿಯಾದ ಬೇಯಾನ್ನೂರ್ ಪ್ರದೇಶದಲ್ಲಿ ಪ್ಲೇಗ್ ತಡೆ ಹಾಗೂ ನಿಯಂತ್ರಣದ ಬಗ್ಗೆ ಮೂರನೇ ಹಂತದ ಎಚ್ಚರಿಕೆ ಘೋಷಿಸಲಾಗಿದೆ ಎಂದು ಸ್ಥಳೀಯ ದೈನಿಕ ಅಂತರ್ಜಾಲ ತಾಣಗಳು ವರದಿ ಮಾಡಿದೆ.

ಈ ಶಂಕಿತ ಬಯೋನಿಕ್ ಪ್ಲೇಗ್ ಪ್ರಕರಣ ಶನಿವಾರ ಬೇಯಾನ್ನೂರ್ ಆಸ್ಪತ್ರೆಯಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು 2020ರ ಅಂತ್ಯದವರೆಗೂ ಎಚ್ಚರಿಕೆಯಲ್ಲಿ ಇರಬೇಕು ಎಂದು ಘೋಷಿಸಿದ್ದಾರೆ.

ಪಶ್ಚಿಮ ಮಂಗೋಲಿಯಾದ ಪ್ರಾಂತ್ಯದಲ್ಲಿನ ಇಬ್ಬರಿಗೆ ಶಂಕಿತ ಬಬೂನಿಕ್ ಪ್ಲೇಕ್ ತಗುಲಿರುವುದಾಗಿ ಸರ್ಕಾರಿ ಸ್ವಾಮಿತ್ವದ ಕ್ಸಿನ್ ಹುವಾ ನ್ಯೂಸ್ ವರದಿ ಮಾಡಿದೆ. 27ವರ್ಷದ ನಿವಾಸಿ ಹಾಗೂ ಆತನ 17 ವರ್ಷದ ಸಹೋದರನಲ್ಲಿ ಸೋಂಕು ದೃಢಪಟ್ಟಿದ್ದು, ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಗೂಸಿ ಮಾಂಸ ಸೇವನೆಗೆ ನಿಷೇಧ:
ಈ ಇಬ್ಬರು ಸಹೋದರರು ಮುಂಗೂಸಿ ಮಾಂಸ ಸೇವನೆ ಮಾಡಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದು, ಜನರು ಮುಂಗೂಸಿ ಮಾಂಸ ತಿನ್ನದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ಹೇಳಿದೆ. ಇವರಿಬ್ಬರ ಸಂಪರ್ಕದಲ್ಲಿದ್ದ 146 ಮಂದಿಯನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬಬೂನಿಕ್ ಪ್ಲೇಗ್
ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು ರೋಗವಾಗಿದೆ. ಇದು ಮುಂಗೂಸಿಯ ಮೈಮೇಲೆ ವಾಸಿಸುವ ಚಿಗಟೆಯಿಂದ ಹರಡುತ್ತದೆ. ಒಂದು ವೇಳೆ ಸಕಾಲಕ್ಕೆ ಚಿಕಿತ್ಸೆ ನೀಡದೇ ಹೋದರೆ ಆರೋಗ್ಯವಂತ ವ್ಯಕ್ತಿ ಕೂಡಾ 24ಗಂಟೆಯಲ್ಲಿ ಸಾಯಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಕಳೆದ ವರ್ಷ ಹಸಿ ಮುಂಗೂಸಿ ಮಾಂಸ ತಿಂದಿದ್ದ ಪಶ್ಚಿಮ ಮಂಗೋಲಿಯನ್ ಪ್ರಾಂತ್ಯದ ಗಂಡ, ಹೆಂಡತಿ ಬಬೂಲಿಕ್ ಪ್ಲೇಗ್ ಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next