Advertisement
ಆದರೆ ಸಾಮಾನ್ಯ ಜನರಿಗೆ ಎಲೆಕ್ಟ್ರಿಕ್ ಕಾರು ಖರೀದಿ ದುಬಾರಿಯಾಗಿದೆ. ಪ್ರಸ್ತುತ ದೇಶದಲ್ಲಿ ಹೆಚ್ಚು ಬೇಡಿಕೆ ಇರುವ ಟಾಟಾ ನೆಕ್ಸಾನ್ ಇವಿ ಎಕ್ಸ್ ಶೋರೂಂ ಬೆಲೆ14 ಲಕ್ಷ ರೂ. ಗಳಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಖರೀದಿಸುವುದು ಕಷ್ಟವಾದರೆ ಈಗ ಇರುವ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನೇ ಎಲೆಕ್ಟ್ರಿಕ್ ಕಾರು ಆಗಿ ಪರಿವರ್ತಿಸಬಹುದು.
ಇಂಧನ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳ ನ್ನಾಗಿ ಪರಿವರ್ತಿಸುವ ಹೆಚ್ಚಿನ ಕಂಪೆನಿಗಳು ಹೈದರಾಬಾದ್‌ನಲ್ಲಿವೆ. ಇವುಗಳಲ್ಲಿ ಎಟ್ರಿಯೊ, ನಾರ್ತ್‌ವೇಮ್‌ಗಳು ಮುಖ್ಯವಾದವುಗಳು. ವ್ಯಾಗನರ್, ಆಲ್ಟೋ, ಡಿಸೈರ್, ಐ10, ಸ್ಪಾರ್ಕ್ ಹಾಗೂ ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಪರಿವರ್ತಿಸಬಹುದು. ಕಾರುಗಳಲ್ಲಿ ಬಳಸುವ ವಿದ್ಯುತ್ ಕಿಟ್ ಬಹುತೇಕ ಒಂದೇ ಆಗಿರುತ್ತವೆ.
Advertisement
ಕಾರಿನಲ್ಲಿ ಏನೆಲ್ಲ ಬದಲಾವಣೆ?ಇಂಧನ ಕಾರುಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದಾಗ ಹಳೆಯ ಯಾಂತ್ರಿಕ ಭಾಗಗಳನ್ನು ಬದಲಾಯಿಸಲಾಗುತ್ತದೆ. ಇದರಲ್ಲಿ ಎಂಜಿನ್, ಟ್ಯಾಂಕ್, ಎಂಜಿನ್‌ಗೆ ವಿದ್ಯುತ್ ನೀಡುವ ಕೇಬಲ್ ಸೇರಿದಂತೆ ಎಸಿ ಸಂಪರ್ಕವನ್ನೂ ಬದಲಾಯಿಸಲಾಗುತ್ತದೆ. ಈ ಕಾರ್ಯಗಳಿಗೆ ಕನಿಷ್ಠ 7 ದಿನಗಳು ಬೇಕಾಗುತ್ತವೆ. ಕಾರಿನ ಮಾದರಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇಂಧನ ಟ್ಯಾಂಕ್ ತೆಗೆದ ಸ್ಥಳದಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತದೆ. ಉಳಿತಾಯ ಹೇಗೆ?: ಇಂಧನ ಕಾರನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಸುಮಾರು 5 ಲಕ್ಷ ರೂ. ಖರ್ಚಾದರೆ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಿದಲ್ಲಿ 75 ಕಿ.ಮೀ. ದೂರ ಓಡಿಸಬಹುದಾಗಿದೆ. ಸುಮಾರು 4 ವರ್ಷ 8 ತಿಂಗಳುಗಳಲ್ಲಿ ನೀವು ಖರ್ಚು ಮಾಡಿರುವ ಹಣ ಹಿಂಪಡೆಯಬಹುದು. ಕಾರಿನಲ್ಲಿ ಪ್ರತೀ ದಿನ 50 ಕಿ.ಮೀ. ಪ್ರಯಾಣಿಸಿದರೆ ತಗಲುವ ವೆಚ್ಚದ ಬಗ್ಗೆ ಹೇಳುವುದಾದರೆ ಎಲೆಕ್ಟ್ರಿಕ್ ಕಾರು ಸಂಪೂರ್ಣ ಜಾರ್ಜ್ ಮಾಡಲು 6 ಗಂಟೆ ಅಂದರೆ ಸುಮಾರು 7 ಯುನಿಟ್ ವಿದ್ಯುತ್ ಖರ್ಚಾಗುತ್ತದೆ. ಒಂದು ಯುನಿಟ್ ವಿದ್ಯುತ್ ಬೆಲೆ 8 ರೂ. ಒಂದು ಬಾರಿ ಜಾರ್ಜ್‌ಗೆ ಸುಮಾರು 56 ರೂ. ವೆಚ್ಚವಾಗುತ್ತದೆ. ಅಂದರೆ 56 ರೂ. ಗೆ ಎಲೆಕ್ಟ್ರಿಕ್ ವಾಹನದಲ್ಲಿ ಸುಮಾರು 75 ಕಿ.ಮೀ. ಹೋಗಬಹುದು. ಎರಡು ದಿನಗಳ ಚಾರ್ಜಿಂಗ್‌ನಲ್ಲಿ ಮೂರು ದಿನಗಳವರೆಗೆ ಕಾರು ಓಡಿಸಬಹುದು. ತಿಂಗಳಲ್ಲಿ 20 ಬಾರಿ ಜಾರ್ಜ್ ಮಾಡಿದರೆ 140 ಯುನಿಟ್ ಖರ್ಚಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಸುಮಾರು 1,120 ರೂ. ವರ್ಷಕ್ಕೆ ಸುಮಾರು 13,440 ರೂ. ಆಗುತ್ತದೆ. ಇನ್ನು ಒಂದು ಲೀಟರ್ ಪೆಟ್ರೋಲ್ ಕಾರು ನಗರದಲ್ಲಿ 15 ಕಿ.ಮೀ. ಮೈಲೇಜ್ ನೀಡುತ್ತದೆ. 1 ಲೀಟರ್ ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ 101 ರೂ. ಇದೆ. 50 ಕಿ.ಮೀ. ಓಡಲು ದಿನಕ್ಕೆ 3.33 ಲೀಟರ್ ಪೆಟ್ರೋಲ್ ಬೇಕು. ಅಂದರೆ 336 ರೂ. ಗಳು. ತಿಂಗಳಿಗೆ 10,090 ರೂ. ಅಂದರೆ ವರ್ಷದಲ್ಲಿ 1,21,078 ರೂ. ಪೆಟ್ರೋಲಿಗೆ ಖರ್ಚು ಮಾಡಬೇಕಾಗುತ್ತದೆ. ಪೆಟ್ರೋಲ್ ಕಾರಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರು ವಾರ್ಷಿಕವಾಗಿ ಸುಮಾರು 1,07,638 ರೂ. ಉಳಿಸುತ್ತದೆ. ಅಂದರೆ ಸುಮಾರು 4 ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ ಸಂಪೂರ್ಣ ವೆಚ್ಚ ಹಿಂಪಡೆಯಬಹುದು. ಎಲೆಕ್ಟ್ರಿಕ್ ಕಾರು ಓಡಿಸಲು ಕಿ.ಮೀ. ಗೆ 74 ಪೈಸೆ ಖರ್ಚಾಗುತ್ತದೆ. ಕಂಪೆನಿಯು ಇದಕ್ಕೆ 5 ವರ್ಷಗಳ ವಾರಂಟಿಯನ್ನೂ ನೀಡುತ್ತದೆ. ಹೀಗಾಗಿ ಕಾರಿನಲ್ಲಿ ಬಳಸುವ ಕಿಟ್‌ಗೆ ಹೆಚ್ಚುವರಿ ಖರ್ಚು ಮಾಡಬೇಕಿಲ್ಲ. 5 ವರ್ಷಗಳ ಅನಂತರ ಬ್ಯಾಟರಿ ಬದಲಾಯಿಸಬೇಕು. ಇಂಧನ ಕಾರುಗಳಿಗೆ ವಾರ್ಷಿಕ ಸೇವಾ ವೆಚ್ಚವನ್ನೂ ಪಾವತಿಸಬೇಕು. ಇದರ ಜತೆಗೆ ಕಿಟ್ ಮತ್ತು ಇತರ ಭಾಗಗಳಿಗೆ ಸರಕಾರದಿಂದ ಅನುಮೋದನೆಗೊಂಡ ಪ್ರಮಾಣ ಪತ್ರವನ್ನು ಆರ್‌ಟಿಒದಿಂದ ಪಡೆಯಬೇಕಾಗುತ್ತದೆ.