Advertisement
ಇಟಲಿಯಲ್ಲಿ ಜಿ7 ಶೃಂಗ ಸಭೆ ಆರಂಭಕ್ಕೂ ಮುನ್ನ ವಿವಿಧ ದೇಶದ ನಾಯಕರನ್ನು ಇಟಲಿ ಪ್ರಧಾನಿ ಮೆಲೋನಿ ಸ್ವಾಗತಿಸುತ್ತಿದ್ದರು. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಆಗಮಿಸಿದ ಕೂಡಲೇ ಇಬ್ಬರು ಮುತ್ತು ನೀಡಿಕೊಂಡು ಆಲಂಗಿಸಿಕೊಂಡಿದ್ದಾರೆ. ಈ ವೇಳೆ ಮೆಲೋನಿ ಅವರಿಗೆ ಮುಜುಗರವಾಗಿರಬಹುದೆಂದು ಕಲ್ಪಿಸಿಕೊಂಡ ನೆಟ್ಟಿಗರು ಎಕ್ಸ್‌ನಲ್ಲಿ ವ್ಯಂಗವಾಗಿ ಟ್ವೀಟ್ ಮಾಡಿದ್ದಾರೆ. ಸದ್ಯ ಇಬ್ಬರು ನಾಯಕರು ಮುತ್ತು ನೀಡಿದ ಹಾಗೂ ಆಲಂಗಿಸಿದ ವೀಡಿಯೋ ಜಾಲತಾಣಗಲ್ಲಿ ಭಾರೀ ವೈರಲ್ ಆಗುತ್ತಿದೆ.
ಬರಿ: ಇಟಲಿಯ ಜಿ7 ಶೃಂಗದಲ್ಲಿ ಭಾಗಿಯಾದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಕೆಲವು ವಿಚಿತ್ರ ನಡವಳಿಕೆ ವೀಡಿಯೋ ಗಳು ವೈರಲ್ ಆಗಿದ್ದು, ಬೈಡೆನ್‌ರನ್ನು ಇಟಲಿ ಪ್ರಧಾನಿ ಮೆಲೊನಿ ಜತೆಗೆ ಮಾತು ಕತೆ ನಡೆಸಿ ವೇದಿಕೆ ಯಿಂದ ತೆರಳು ವಾಗ ಅವರಿಗೆ ಸೆಲ್ಯೂಟ್ ಮಾಡಿ ದ್ದಾರೆ. ಇನ್ನೊಂದು ವೀಡಿಯೋದಲ್ಲಿ, ಫೋಟೋಗೆಂದು ನಿಂತಿದ್ದ ನಾಯಕರ ಗುಂಪಿನಿಂದ ದೂರ ಸರಿದ ಬೈಡೆನ್ ಯಾರೂ ಇಲ್ಲದ ದಿಕ್ಕಿಗೆ ಕೈತೋರುತ್ತಾ ತಂಬ್ಸ್ ಅಪ್ ಮಾಡಿದ್ದಾರೆ. ಮೆಲೋನಿ ಬಂದು ಅವರನ್ನು ಎಚ್ಚರಿಸಿ ನಾಯಕರ ಗುಂಪಿನ ಬಳಿ ಕರೆದೊಯ್ದಿದ್ದಾರೆ.
Related Articles
ಇಟಲಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸ್ವಾಗತಿಸಿದರು. ಇಬ್ಬರೂ ಪ್ರಧಾನಿಗಳು ಪರಸ್ಪರ ನಮಸ್ಕಾರ ಮಾಡುವ ಮೂಲಕ ಶುಭ ಕೋರಿದರು.
Advertisement