Advertisement

ಬ್ರಿಟನ್‌ ಪ್ರಧಾನಿಯಾಗಿ ರಿಷಿ ಸುನಕ್; ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹಿರಿಮೆ

06:47 PM Oct 24, 2022 | Team Udayavani |

ಲಂಡನ್ : ರಿಷಿ ಸುನಕ್ ಅವರು ಮುಂದಿನ ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರ ಸ್ಪರ್ಧಿಯಾಗಿದ್ದ ಪೆನ್ನಿ ಮೊರ್ಡಾಂಟ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

Advertisement

ಕನ್ಸರ್ವೇಟಿವ್‌ ಪಕ್ಷದ ಏಕೈಕ ಪ್ರತಿಸ್ಪರ್ಧಿ ಅಭ್ಯರ್ಥಿ ಪೆನ್ನಿ ಮೊರ್ಡಾಂಟ್ ಸ್ಪರ್ಧೆಯಿಂದ ಹೊರಗುಳಿದ ನಂತರ ಸೋಮವಾರ ರಿಷಿ ಸುನಕ್ ಅವರು ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಬ್ರಿಟನ್ ನ ಮಾಜಿ ಸಚಿವ 42 ರ ಹರೆಯದ ರಿಷಿ ಸುನಕ್ ಅವರು ಇನ್ಫೋಸಿಸ್‌ ಸಂಸ್ಥಾಪಕ ಡಾ.ಎನ್‌.ಆರ್‌.ನಾರಾಯಣಮೂರ್ತಿಯವರ ಅಳಿಯ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಸುನಕ್ “ನಮ್ಮ ಯುಕೆ ಅದ್ಭುತ ದೇಶ. ಅಂಥ ದೇಶಕ್ಕೆ ಈಗ ವಿತ್ತೀಯ ಬಿಕ್ಕಟ್ಟು ಕಾಡುತ್ತಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕನ್ಸರ್ವೇಟಿವ್‌ ಪಕ್ಷದ ನಾಯಕನ ಹುದ್ದೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ನಿಮ್ಮ ಮುಂದಿನ ಪ್ರಧಾನಿಯಾಗಲು ಬಯಸುತ್ತೇನೆ. ನಮ್ಮ ದೇಶದ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ಜತೆಗೆ ಪಕ್ಷವನ್ನೂ ಬಲಪಡಿಸುತ್ತೇನೆ, ಸದೃಢ ದೇಶ ನಿರ್ಮಾಣದ ಬಯಕೆ ಹೊಂದಿದ್ದೇನೆ’ ಎಂದು ಭಾನುವಾರ ಟ್ವೀಟ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next