Advertisement

ಏಕಾಏಕಿ ವೇದಿಕೆಯಿಂದ ಹೊರನಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ !

09:10 PM Nov 08, 2022 | Team Udayavani |

ಲಂಡನ್‌: ಈಜಿಪ್ಟ್ ನ ಶರ್ಮ್-ಎಲ್‌-ಶೇಖ್‌ ನಗರದಲ್ಲಿ ನಡೆಯುತ್ತಿರುವ ಹವಾಮಾನ ಶೃಂಗಸಭೆಯ ವೇದಿಕೆಯಿಂದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಏಕಾಏಕಿ ತಮ್ಮ ಸಹಾಯಕರೊಂದಿಗೆ ಹೊರನಡೆದರು. ಇದರಿಂದ ಅಲ್ಲಿ ನರೆದಿದ್ದ ಪ್ರೇಕ್ಷಕರು ದಿಗ್ಭ್ರಮೆಗೆ ಒಳಗಾದರು.

Advertisement

“ಹವಾಮಾನ ಶೃಂಗಸಭೆಯ ನೇಪಥ್ಯದಲ್ಲಿ ಅರಣ್ಯ ಸಹಭಾಗಿತ್ವ ಕುರಿತು ಕಾರ್ಯಕ್ರಮ ನಡೆಯುತಿತ್ತು. ಈ ವೇಳೆ ರಿಷಿ ಸುನಕ್‌ ವೇದಿಕೆಯಲ್ಲಿದ್ದರು. ಅವರ ಬಳಿಗೆ ಬಂದ ಸಹಾಯಕನೊಬ್ಬ ಅವರ ಕಿವಿಯಲ್ಲಿ ಕೆಲ ಕಾಲ ಏನೋ ಹೇಳಿದ. ಆದರೂ ಸಭೆಯಲ್ಲೇ ಉಳಿಯಲು ಸುನಕ್‌ ತೀರ್ಮಾನಿಸಿದರು. ಆದರೆ ನಂತರ ಮತ್ತೊಬ್ಬ ಸಹಾಯಕ ಬಂದು ಸಭೆಯಿಂದ ಹೊರಡಲೇಬೇಕು ಎಂದು ಹೇಳಿದ.


ನಂತರ ಕೂಡಲೇ ಅವರು ಸಭೆಯಿಂದ ಹೊರನಡೆದರು. ಆಗ ಅವರ ಸಹಾಯಕರು ಕೂಡ ಅವರೊಂದಿಗೆ ಹೊರಟರು,’ ಎಂದು ಬ್ರಿಟನ್‌ ಮೂಲದ ಕಾರ್ಬನ್‌ ಬ್ರಿಫ್ ನಿರ್ದೇಶಕ ಲಿಯೊ ಹಿಕ್ಮನ್‌ ಟ್ವೀಟ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next