Advertisement

ಲಾಕ್‌ಡೌನ್ ಉಲ್ಲಂಘನೆ : ದಂಡ ತೆತ್ತು, ಕ್ಷಮೆ ಯಾಚಿಸಿದ ರಿಷಿ ಸುನಕ್

09:24 PM Apr 13, 2022 | Team Udayavani |

ಲಂಡನ್: ಯುಕೆ ಚಾನ್ಸೆಲರ್ ರಿಷಿ ಸುನಕ್ ಅವರು ಜೂನ್ 2020 ರಲ್ಲಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿ ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಕಾಟ್ಲೆಂಡ್ ಯಾರ್ಡ್ ವಿಧಿಸಿದ ದಂಡವನ್ನು ತೆತ್ತು ಕ್ಷಮೆ ಯಾಚಿಸಿದ್ದಾರೆ.

Advertisement

ಮಂಗಳವಾರ ಸಂಜೆ ನೀಡಿದ ಹೇಳಿಕೆಯಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ, ಭಾರತೀಯ ಮೂಲದ ರಿಷಿ ಸುನಕ್ ಕ್ಷಮೆಯಾಚಿಸಿದ್ದು, ಪ್ರಧಾನ ಮಂತ್ರಿ ಜಾನ್ಸನ್ ಅವರ ಕ್ಷಮೆಯಾಚನೆಯ ನಂತರ ಮತ್ತು ತಾನೂ ಕೂಡ ತಮ್ಮ ಪಾಲಿನ ದಂಡವನ್ನು ಪಾವತಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.

2020-2021ರ ಅವಧಿಯಲ್ಲಿ ಕೋವಿಡ್  ಕಾನೂನನ್ನು ಉಲ್ಲಂಘಿಸಿ ವೈಟ್‌ಹಾಲ್‌ನಲ್ಲಿರುವ ಡೌನಿಂಗ್ ಸ್ಟ್ರೀಟ್ ಮತ್ತು ಇತರ ಯುಕೆ ಸರ್ಕಾರಿ ಕಚೇರಿಗಳಲ್ಲಿ ಸುಮಾರು 12 ಪಾರ್ಟಿಗಳನ್ನು ನಡೆಸಲಾಗುತ್ತಿರುವ ಪಾರ್ಟಿಗೇಟ್ ಹಗರಣ ಎಂದು ಕರೆಯಲ್ಪಡುವ, ಆಪರೇಷನ್ ಹಿಲ್‌ಮ್ಯಾನ್‌ನ ಭಾಗವಾಗಿ ಪೊಲೀಸ್ ತನಿಖೆಯಲ್ಲಿದೆ.

“ಜೂನ್ 19 ರಂದು ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಸಭೆಗೆ ಸಂಬಂಧಿಸಿದಂತೆ ನಾನು ಮೆಟ್ರೋಪಾಲಿಟನ್ ಪೊಲೀಸರಿಂದ ನಿಗದಿತ ದಂಡದ ನೋಟಿಸ್ ಸ್ವೀಕರಿಸಿದ್ದೇನೆ ಎಂದು ನಾನು ಖಚಿತಪಡಿಸುತ್ತೇನೆ” ಎಂದು ಸುನಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next