ಮುಂಬೈ: ಆಸೀಸ್ ಪ್ರವಾಸದಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣ ರಿಷಭ್ ಪಂತ್ ಅವರಿಗೆ ಐಸಿಸಿ ಜನವರಿ ತಿಂಗಳ ಅತ್ಯುತ್ತಮ ಆಟಗಾರ ಪ್ರಶಸ್ತಿ ನೀಡಿದೆ.
ಐಸಿಸಿ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಆರಂಭಿಸಿದೆ. ಚೊಚ್ಚಲ ಪ್ರಶಸ್ತಿಗೆ ಭಾರತದ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ವಾಷಿಂಗ್ಟನ್ ಸುಂದರ್ ಹೋರಾಟದ ನಡೆವೆಯೂ 241 ರನ್ ಹಿನ್ನಡೆ ಅನುಭವಿಸಿದ ಟೀಂ ಇಂಡಿಯಾ!
ಆಸೀಸ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಪಂತ್ ಮಿಂಚಿದ್ದರು. ಸಿಡ್ನಿ ಪಂದ್ಯದಲ್ಲಿ 97 ರನ್ ಬಾರಿಸಿ ತಂಡದ ಸೋಲನ್ನು ತಪ್ಪಿಸಿದ್ದರು. ಬ್ರಿಸ್ಬೇನ್ ಪಂದ್ಯದಲ್ಲಿ 328 ರನ್ ಗುರಿ ಬೆನ್ನತ್ತಿದ್ದಾಗ ಅಜೇಯ 89 ರನ್ ಬಾರಿಸಿ ತಂಡಕ್ಕೆ ಅಭೂತಪೂರ್ವ ಜಯ ದೊರಕಿಸಿದ್ದರು. ಇದರೊಂದಿಗೆ ಭಾರತ ಆಸೀಸ್ ಸರಣಿ ಗೆಲುವು ಕಂಡಿತ್ತು.
ಈ ಪ್ರಶಸ್ತಿ ಪೈಪೋಟಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಐರ್ಲೆಂಡ್ ನ ಪೌಲ್ ಸ್ಟರ್ಲಿಂಗ್ ಅವರು ಪಂತ್ ಜೊತೆಗೆ ಸ್ಪರ್ಧಿಗಳಾಗಿದ್ದರು. ಕೊನೆಗೂ ಇವರಿಬ್ಬರನ್ನೂ ಹಿಂದಿಕ್ಕಿ ಪಂತ್ ಚೊಚ್ಚಲ ಪ್ರಶಸ್ತಿ ಪಡೆದಿದ್ದಾರೆ.