Advertisement

ಶತಕ ವಂಚಿತರಾದ ರಿಷಭ್ ಪಂತ್; ಮೊಹಾಲಿಯಲ್ಲಿ ಬೃಹತ್ ಮೊತ್ತದತ್ತ ಭಾರತ

04:59 PM Mar 04, 2022 | Team Udayavani |

ಮೊಹಾಲಿ: ಮಾಜಿ ನಾಯಕ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯವೆಂಬ ಕಾರಣದಿಂದ ವಿಶೇಷ ಆಕರ್ಷಣೆ ಹೊಂದಿರುವ ಮೊಹಾಲಿ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ನಡೆಸಿ ಮಿಂಚಿದರು. ಆದರೆ ಕೇವಲ ನಾಲ್ಕು ರನ್ ಗಳಿಂದ ಶತಕ ವಂಚಿತರಾದರು.

Advertisement

ತಮ್ಮ ಎಂದಿನ ನಿರ್ಭೀತ ಶೈಲಿಯಲ್ಲಿ ಬ್ಯಾಟ್ ಬೀಸಿದ ಪಂತ್ ಕೇವಲ 97 ಎಸೆತಗಳಲ್ಲಿ 96 ರನ್ ಗಳಿಸಿದರು. ನಾಲ್ಕು ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಪಂತ್ ಬಾರಿಸಿದರು. ಶತಕದ ಸಮೀಪ ಬಂದಿದ್ದ ಪಂತ್ ಲಂಕಾದ ಸುರಂಗ ಲಕ್ಮಲ್ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಅನುಭವಿಸಿದರು.

ಇದನ್ನೂ ಓದಿ:INDvsSL: ಸೆಂಚುರಿ ಟೆಸ್ಟ್ ನಲ್ಲೂ ದಾಖಲೆ ಬರೆದ ವಿರಾಟ್ ಕೊಹ್ಲಿ

ಭಾರತ ಉತ್ತಮ ಮೊತ್ತ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ದಿನದಾಟದಲ್ಲಿ ಉತ್ತಮ ರನ್ ಕಲೆಹಾಕಿದೆ. ದಿನದಾಟದ ಅಂತ್ಯಕ್ಕೆ ತಂಡ ಆರು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದೆ.

ಟೀಂ ಇಂಡಿಯಾ ಪರ ಪ್ರತಿಯೊಬ್ಬ ಬ್ಯಾಟರ್ ಕೂಡಾ ಉತ್ತಮ ಆರಂಭ ಪಡೆದರು. ಮೊದಲ ವಿಕೆಟ್ 29 ರನ್ ಗಳಿಸಿದ್ದ ರೋಹಿತ್ ರೂಪದಲ್ಲಿ ಬಿತ್ತು. ಮಯಾಂಕ್ ಅಗರ್ವಾಲ್ 33, ಪೂಜಾರ ಸ್ಥಾನಕ್ಕೆ ಬಂದ ಹನುಮ ವಿಹಾರಿ 58 ರನ್ ಗಳಿಸಿದರು.

Advertisement

ನೂರನೇ ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ 45 ರನ್ ಗಳಿಸಿದ್ದ ವೇಳೆ ಬೌಲ್ಡ್ ಆದರು. ಅಯ್ಯರ್ 27 ರನ್ ಗಳಿಸಿದರು. ಕೊನೆಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ 45 ರನ್ ಮತ್ತು ಅಶ್ವಿನ್ 10 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಲಂಕಾ ಪರ ಸ್ಪಿನ್ನರ್ ಲಸಿತ್ ಎಂಬುಲ್ಡೇನಿಯಾ ಎರಡು ವಿಕೆಟ್ ಪಡೆದರೆ, ಲಕ್ಮಲ್, ವಿಶ್ವ ಫರ್ನಾಂಡೋ, ಲಹಿರು ಕುಮಾರ ಮತ್ತು ಧನಂಜಯ ಡಿಸಿಲ್ವ ತಲಾ ಒಂದು ವಿಕೆಟ್ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next