ಶ್ರೀನಗರ: ಜಮ್ಮು – ಕಾಶ್ಮೀರದಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಹತ್ತು ಉಗ್ರರನ್ನು ಭದ್ರತಾ ಪಡೆಗಳು ಸಂಹಾರ ಮಾಡಿವೆ. ಹೀಗಾಗಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಗೆ ಹೊಂದಿ ಕೊಂಡಂತೆ ಇರುವ ಪ್ರದೇಶಗಳಲ್ಲಿ ಸ್ಥಳೀಯರನ್ನು ವಿವಿಧ ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗಿದೆ.
ಈ ವರ್ಷದ ಆರಂಭದಲ್ಲಿ ಉಗ್ರರ ಒಳನುಸುಳುವಿಕೆ ಮತ್ತು ಗುಂಡಿನ ಚಕಮಕಿ ಒಂದು ಹಂತಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.
ಕಳೆದ ತಿಂಗಳ ಕೊನೆಯ ವಾರದಲ್ಲಿ ಪೊಲೀಸ್ ಅಧಿಕಾರಿ, ವಲಸೆ ಕಾರ್ಮಿಕರನ್ನು ಗುರಿಯಾಗಿ ಇರಿಸಿ ಕೊಂಡು ಉಗ್ರರು ದಾಳಿ ನಡೆಸಿ ಮೂವರನ್ನು ಕೊಂದಿದ್ದರು. ಪಾಕಿಸ್ಥಾನ ಮೂಲದ ಲಷ್ಕರ್-ಎ-ತಯ್ಯಬಾ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳು ಇತ್ತೀಚೆಗೆ ಸ್ಥಳೀಯ ಯುವ ಕರನ್ನು ಮರುಳುಗೊಳಿಸಿ ವಿಧ್ವಂಸಕ ಕೃತ್ಯ ಗಳನ್ನು ನಡೆಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಳಿಸುತ್ತಿವೆ.
ಹೊಸತಾಗಿ ನೇಮಕಗೊಂಡ ಜಮ್ಮು – ಕಾಶ್ಮೀರದ ಡಿಜಿಪಿ ಆರ್.ಆರ್.ಸ್ವೆನ್ ಅವರು ಅಧಿಕಾರಿಗಳ ಜತೆಗೆ ಸರಣಿ ಸಭೆಗಳನ್ನು ನಡೆಸಿ, ಪ್ರತೀ ನೇಮಕವನ್ನೂ ಗಂಭೀರವಾಗಿ ಪರಿಗಣಿ ಸಬೇಕು ಎಂದು ಸೂಚನೆ ನೀಡಿದ್ದಾರೆ. ಹೈಬ್ರಿಡ್ ನೆಲೆಯಲ್ಲಿ ಕೆಲಸ ಮಾಡುವವರ ವಿರುದ್ಧವೂ ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.