Advertisement

ಹಸಿವು ಮುಕ್ತ ಸಮಾಜಕ್ಕಾಗಿ ಶ್ರಮಿಸಿ: ಹಾಲಪ್ಪ

03:28 PM Apr 17, 2020 | Naveen |

ರಿಪ್ಪನ್‌ಪೇಟೆ: ಲಾಕ್‌ಡೌನ್‌ ವಿಸ್ತರಿಸಲಾಗಿದ್ದು, ಜನರ ನೈಜ ಸಮಸ್ಯೆಗಳು ಹೆಚ್ಚಬಹುದು. ಹೀಗಾಗಿ ಹಸಿವು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ದಿನಗಳಲ್ಲಿ ಪರಿಹಾರ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

Advertisement

ಹರತಾಳು ಗ್ರಾಮದ ತಮ್ಮ ಮನೆಯಲ್ಲಿ ಪತ್ರಿಕೆ ವಿತರಕರಿಗೆ ದಿನಸಿ ಆಹಾರದ ಕಿಟ್‌ ವಿತರಿಸಿ ಮಾತನಾಡಿದರು. ಒಂದು ಬೃಹತ್‌ ರಾಷ್ಟ್ರದ ವ್ಯವಸ್ಥೆಯನ್ನು ಹತೋಟಿಗೆ ತಂದು ಆಹಾರ ಭದ್ರತೆ ಒದಗಿಸುವುದು ಸಾಮಾನ್ಯ ವಿಷಯವಲ್ಲ. ಪ್ರಧಾನಿ ಮೋದಿ ಅವರ ಮನವಿಯನ್ನು ಜನಸಾಮಾನ್ಯರಾದಿಯಾಗಿ ಎಲ್ಲಾ ವರ್ಗದ ಜನರು ಪಾಲಿಸಿದ್ದಾರೆ. ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಂಡಿರುವ ವಿವಿಧ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ಮಾಧ್ಯಮ ಮಿತ್ರರ ಕಾರ್ಯ ಶ್ಲಾಘನೀಯ ಎಂದರು.

ಗರಂ ಆದ ಶಾಸಕ: ನಂತರ ಶಾಸಕರು ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಅಧಿ ಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಬಿಜೆಪಿ ಹಿರಿಯ ಮುಖಂಡ ಆರ್‌.ಟಿ. ಗೋಪಾಲ್‌ ಮಾತನಾಡಿ, ವಿಎಸ್‌ಎಸ್‌ಎಸ್‌ಎನ್‌ ಪಡಿತರ ವಿತರಣಾ ಕೇಂದ್ರದಲ್ಲಿ ದಾಸ್ತಾನು ಕೊರತೆಯಿದೆ. ಆದರೆ, ಇನ್ನೆರಡು ಕೇಂದ್ರಗಳಲ್ಲಿ ಪಡಿತರದಾರರಿಂದ ಹಣ ವಸೂಲು ಮಾಡುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು. ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಡಿತರ ಸರಿಯಾಗಿ ವಿತರಿಸದ ಅಂಗಡಿ ಪರಿಶೀಲಿಸಿ ವರದಿ ನೀಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸುವೆ ಎಂದರು. ತಾ.ಪಂ. ಅಧ್ಯಕ್ಷ ಆಲುವಳ್ಳಿ ವೀರೇಶ, ಜಿ.ಪಂ. ಸದಸ್ಯ ಸುರೇಶ ಸ್ವಾಮೀರಾವ್‌, ಉಪತಹಶೀಲ್ದಾರ್‌ ಪ್ರದೀಪ, ಪಿಡಿಒ ಚಂದ್ರಶೇಖರ, ಶಾರದಮ್ಮ, ಉಪಾಧ್ಯಕ್ಷ ಕೃಷ್ಣೋಜಿರಾವ್‌ ಇನ್ನಿತರರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next