Advertisement

ಖಾಸಗಿತನದ ಹಕ್ಕು: ಇಂದು ಸುಪ್ರೀಂ ತೀರ್ಪು ಸಾಧ್ಯತೆ

07:40 AM Aug 24, 2017 | |

ಹೊಸದಿಲ್ಲಿ: ಸಂವಿಧಾನದ ಅಡಿ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಣಿಗಣಿಸಬೇಕೇ ಎಂಬ ಬಹುಚರ್ಚಿತ ವಿಷಯದ ಕುರಿತ  ಸುಪ್ರೀಂ ಕೋರ್ಟ್‌ ತೀರ್ಪು ಗುರುವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.

Advertisement

ಈ ಚರ್ಚೆಯ ಸಂಬಂಧ ಹಲವಾರು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಕಾರಣ, ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ನೇತೃತ್ವದ 9 ಸದಸ್ಯರ ಪೀಠ ಆ.2ರಂದೇ ನೀಡಬೇಕಿದ್ದ ಈ ತೀರ್ಪನ್ನು ಕಾಯ್ದಿರಿಸಿತ್ತು. ಸರಕಾರದ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸರಕಾರ ಆಧಾರ್‌ ಕಾರ್ಡನ್ನು ಕಡ್ಡಾಯ ಮಾಡಿರುವುದರಿಂದ ಜನರ ಖಾಸಗಿ ಮಾಹಿತಿಗಳು ಬಹಿರಂಗವಾಗುತ್ತಿವೆ ಎಂದು ಅರ್ಜಿದಾರರೊಬ್ಬರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next