Advertisement
ಹೌದು. ಕೋವಿಡ್‌ಗಿಂತೂ 100 ಪಟ್ಟು ಹೆಚ್ಚು ಮಾರಣಾಂತಿಕ ವಾಗಬಲ್ಲ ಹಕ್ಕಿ ಜ್ವರ (ಎಚ್5ಎನ್1)ಸಾಂಕ್ರಾಮಿಕ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಂಶೋಧಕರು ಈ ಹಕ್ಕಿ ಜ್ವರದ ಕುರಿತು ನೀಡಿರುವ ಮಾಹಿತಿಯನ್ನು ಆಧರಿಸಿ ಇಂಗ್ಲೆಂಡ್ ಮೂಲದ “ಡೈಲಿ ಮೇಲ್’ ವರದಿ ಮಾಡಿದೆ. ಎಚ್5ಎನ್1 ತಳಿಯು ಈಗ ಗಂಭೀರ ಹಂತಕ್ಕೆ ತಲುಪಿದ್ದು, ಯಾವುದೇ ಹಂತದಲ್ಲಿ ಅದು ಸಾಂಕ್ರಾಮಿಕವಾಗಿ ಪರಿವರ್ತಿತವಾಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
Related Articles
Advertisement
ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?
ವಿಶ್ವ ಆರೋಗ್ಯ ಸಂಸ್ಥೆ ಯ ಪ್ರಕಾರ, 2003ರಲ್ಲಿ ಎಚ್5ಎನ್1 ಹಕ್ಕಿ ಜ್ವರ ತಗಲಿದ ಪ್ರತೀ 100 ಜನರ ಪೈಕಿ 52 ಮಂದಿ ಮೃತಪಟ್ಟಿದ್ದಾರೆ. 887ರ ಪ್ರಕರಣಗಳಲ್ಲಿ 462 ಮಂದಿ ಸಾವಿಗೀಡಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಸಕ್ತ ಕೋವಿಡ್‌ನ ಮರಣ ಪ್ರಮಾಣವು ಶೇ.0.1ರಷ್ಟಿದೆ. ಕೋವಿಡ್ ತೀವ್ರಗತಿಯಲ್ಲಿದ್ದಾಗ ಮರಣ ಪ್ರಮಾಣ ಶೇ.20ರಷ್ಟಿತ್ತು
ಏನಿದು ಹಕ್ಕಿ ಜ್ವರ?
ಎಚ್5ಎನ್1 ಹಕ್ಕಿ ಜ್ವರ ಗುಂಪಿಗೆ ಸೇರಿದ ವೈರಸ್. ಈ ಸೋಂಕು ಕೋಳಿಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಹಕ್ಕಿಗಳಲ್ಲಿ ಕಾಣಿಸಿ ಕೊಳ್ಳುವ ಈ ಸೋಂಕು, ಮಾನವರು ಸೇರಿದಂತೆ ಪ್ರಾಣಿಗಳಿಗೂ ತಗಲ ಬಹುದು. ಹಕ್ಕಿಯೇತರ ಜೀವಿಗಳಿಗೆ ಈ ಸೋಂಕು ತಗಲಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಇದು ತೀರಾ ಅಷ್ಟೇನೂ ಅಪಾಯಕಾರಿಯೂ ಆಗಿರುವುದಿಲ್ಲ. ಎಚ್5ಎನ್1 ಚೀನದಲ್ಲಿ 1996ರಲ್ಲಿ ಮೊದಲಿಗೆ ಕಾಣಿಸಿಕೊಂಡಿತು. ಮಾರನೇ ವರ್ಷವೇ ಹಾಂಕಾಂಗ್‌ನಲ್ಲಿ ಮಾನವರಿಗೆ ಸೋಂಕು ತಗಲಿದ 16 ಪ್ರಕರಣಗಳು ಪತ್ತೆಯಾದವು ಮತ್ತು 6 ರೋಗಿಗಳು ಮೃತಪಟ್ಟರು.