Advertisement

ಮಳೆಗಾಲದಲ್ಲಿ ಸವಾರರು ಜಾಗೃತರಾಗಿರುವುದು ಅಗತ್ಯ

10:32 PM May 18, 2020 | Sriram |

ಉಡುಪಿ: ಮಳೆಗಾಲ ವಾಹನ ಸವಾರರ ಪಾಲಿಗೆ ಸವಾಲಿನ ದಿನಗಳು. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತೂ ಎಷ್ಟು ಎಚ್ಚರ ವಹಿಸಿದರು ಸಾಲದು. ರಸ್ತೆ ಮೇಲೆ ಚೆಲ್ಲುವ ತೈಲಾಂಶ ಈ ಅವಧಿಯಲ್ಲಿ ಅಪಘಾತಗಳಿಗೆ ಆಹ್ವಾನ ನೀಡುತ್ತವೆ.

Advertisement

ರಾ.ಹೆ. ಸಹಿತ ಎಲ್ಲ ರಸ್ತೆಗಳಲ್ಲಿ ಮಳೆಗಾಲದ ಆರಂಭದಲ್ಲಿ ತೈಲಾಂಶ ಚೆಲ್ಲಿ ವಾಹನ ಸಂಚಾರದ ವೇಳೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ವಾಹನಗಳು ಸಂಚರಿಸುವ ವೇಳೆ ಘನ ವಾಹನಗಳಿಂದ ಸೋರಿಕೆಯಾದ ತೈಲಾಂಶ ಡಾಮರು ರಸ್ತೆ ಮೇಲೆ ಚೆಲ್ಲಿರುತ್ತವೆ. ಅದರಿಂದ ತೊಂದರೆಗಳು ಆಗುತ್ತವೆ
ಮಳೆಗಾಲ ಆರಂಭದ ದಿನಗಳಲ್ಲಿ ಒದ್ದೆ ನೆಲದಲ್ಲಿ ತೈಲಾಂಶಗಳು ಸೇರಿ ವಾಹನಗಳು ಬ್ರೇಕ್‌ ಹಾಕಿದಾಗ ಒಮ್ಮೆಗೆ ಸ್ಕಿಡ್ಡಾಗಿ ಉರುಳುವುದು, ಜಾರುವುದು ಇತ್ಯಾದಿ ಘಟನೆಗಳು ನಡೆಯುತ್ತವೆ. ಮಳೆಗಾಲದ ಆರಂಭಿಕ ಹಂತದಲ್ಲಿ ದ್ವಿಚಕ್ರ ವಾಹನ ಸವಾರರು ಭಾರಿ ಎಚ್ಚರ ವಹಿಸಬೇಕಾಗುತ್ತದೆ.

ಸವಾರರ ನಿರ್ಲಕ್ಷ್ಯ
ಬೈಕ್‌ ಸವಾರರು ಮಳೆಗಾಲದಲ್ಲಿ ವೇಗ ನಿಯಂತ್ರಣ, ಮೊಬೈಲ್‌ ಬಳಕೆ, ತಿರುವಿನ ಜಾಗದಲ್ಲಿ ಓವರ್‌ ಟೇಕ್‌ ಬಗ್ಗೆ ಗಮನವಿರಿಸಬೇಕು. ಹೆಲ್ಮೆಟ್‌ ಬಳಕೆ ಕಡ್ಡಾಯ. ಇವೆಲ್ಲವೂ ಸುರಕ್ಷತೆ ದೃಷ್ಟಿಯಿಂದ ಬಹುಮುಖ್ಯ. ಸವಾರರ ನಿರ್ಲಕ್ಷ್ಯವೇ ಹಲವು ಅಪಘಾತ ಘಟನೆಗೆ ಕಾರಣವಾಗುತ್ತದೆ. ಆರಂಭದಲ್ಲೆ ಈ ಬಗ್ಗೆ ಎಚ್ಚರವಹಿಸುವುದು ಪ್ರಾಮುಖ್ಯವಾಗಿದೆ.

ಶೀಘ್ರ ಅರಿವು ಮೂಡಿಸುತ್ತೇವೆ
ಮಳೆಗಾಲದಲ್ಲಿ ರಸ್ತೆ ಮೇಲೆ ವಾಹನ ಸವಾರರು ಸಂಚರಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಸವೆದ ಟಯರುಗಳ ಬದಲಿ ಬಟನ್‌ ಟಯರು ವಾಹನಗಳಿಗೆ ಬಳಸುವುದು ಉತ್ತಮ. ದ್ವಿಚಕ್ರ ವಾಹನ ಸವಾರರು ಸ್ವಯಂ ಜಾಗೃತೆ ವಹಿಸಿಕೊಳ್ಳುವ ಮೂಲಕ ಎಚ್ಚರ ವಹಿಸಬೇಕು. ಮಳೆಗಾಲದಲ್ಲಿ ವಾಹನ ಸವಾರರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ವಾಹನ ಚಾಲಕರಿಗೆ ಮಾಹಿತಿಗಳನ್ನು ನೀಡುತ್ತ ಬಂದಿದ್ದೇವೆ. ಕೋವಿಡ್‌ 19 ನಡುವೆಯೂ ಈ ಮಳೆಗಾಲದ ಪೂರ್ವದಲ್ಲಿ ವಾಹನ ಸವಾ
ರರು ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಚಾಲಕರಿಗೆ ಶೀಘ್ರ ಅರಿವು ಮೂಡಿಸುತ್ತೇವೆ.
-ಶಕ್ತಿವೇಲು.,ಉಡುಪಿ ನಗರ ಸಬ್‌ಇನ್ಸ್‌ ಪೆಕ್ಟರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next