ನವದೆಹಲಿ: ಸಮುದಾಳದಲ್ಲಿ ರೈಲು ಪ್ರಯಾಣ ಹೇಗಿರುತ್ತದೆ ಅಂದರೆ ನಮ್ಮ ದೇಶದ ಹೆಚ್ಚಿನವರಿಗೆ ಗೊತ್ತಿರಲಾರದು. ಈಗಾಗಲೇ ಘೋಷಣೆಯಾಗಿರುವ ಮುಂಬೈ- ಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯ ಅನ್ವಯ ಪುಣೆಯಿಂದ ಏಳು ಕಿಮೀ ದೂರದ ವರೆಗೆ ಸಮುದ್ರದಾಳದಲ್ಲಿ ರೈಲು ಮಾರ್ಗದ ಕಾಮಗಾರಿ ಆರಂಭವಾಗಲಿದೆ. ಅದಕ್ಕಾಗಿ ಮಣ್ಣು ಮತ್ತು ಬಂಡೆಯ ಪರೀಕ್ಷೆಗಾಗಿ ಅಗೆತ ಆರಂಭವಾಗಿದೆ.
ಸಮುದ್ರದ ಮೇಲ್ಮೆ„ನಿಂದ 70 ಮೀಟರ್ ಆಳದಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಕಾಮಗಾರಿ ಪೂರ್ತಿಯಾದ ಬಳಿಕ ಅದು ದೇಶದ ಮೊದಲ ಸಮುದ್ರದಾಳದ ರೈಲು ಮಾರ್ಗ ಎಂಬ ಹೆಗ್ಗಳಿಕೆಯೂ ಅದಕ್ಕೆ ಬರಲಿದೆ. ಬಳಿಕ ಗಂಟೆಗೆ 350 ಕಿಮೀ ವೇಗಲ್ಲಿ ರೈಲು ಸಂಚರಿಸಲಿದೆ.
ಇದೇ ಮಾದರಿಯ ಪರೀಕ್ಷೆ ಠಾಣೆಯಿಂದ ವಿರಾರ್ ವರೆಗಿನ 21 ಕಿಮೀ ಭೂಗತ ರೈಲು ಮಾರ್ಗಕ್ಕೂ ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಅಂಶವನ್ನು ಬಹಿರಂಗ ಮಾಡಿದ್ದಾರೆ.
ನೆಲದ ಆಳದಲ್ಲಿ ಯಾವ ರೀತಿ ಸುರಂಗ ಮಾರ್ಗ ನಿರ್ಮಿಸಬಹುದು ಎಂಬುದನ್ನು ಅಧ್ಯಯನ ನಡೆಸಲು ಮಣ್ಣು ಮತ್ತು ಬಂಡೆ ಪರೀಕ್ಷೆ ಸಾಗಿದೆ ಎಂದು ಹೇಳಿದ್ದಾರೆ. ಸುರಂಗ ಮಾರ್ಗದ ಮೂಲಕ ಪ್ರಾಕೃತಿಕ ಸಂಪತ್ತು ರಕ್ಷಿಸಬಹುದು ಎನ್ನುವುದು ರೈಲ್ವೆ ಸಚಿಧಿವಾಲಯ ಅಧಿಕಾರಿ ವಾದ.
ಯೋಜನೆ ಬಗ್ಗೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ)ಕಾರ್ಯಸಾಧ್ಯ ಅಧ್ಯಯನ ನಡೆಸಿದೆ. ಒಟ್ಟು 508 ಕಿಮೀ ಯೋಜನೆ ಇದಾಗಿದೆ. ಜಮೀನು ವಶಪಡಿಸಿಕೊಳ್ಳುವುದು, ಅದರಿಂದ ಉಂಟಾಗುವ ನ್ಯಾಯಾಂಗ ಸಮರ ಮತ್ತು ಇತರ ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲು ರೈಲ್ವೆ ಇಲಾಖೆ ಎತ್ತರಿಸಿದ ಮಾರ್ಗ (ಇಲವೇಟೆಡ್) ದಲ್ಲಿ ಯೋಜನೆ ಅನುಷ್ಠಾಕ್ಕೆ ಮುಂದಾಗಿದೆ. ಯೋಜನೆಗೆ ಒಟ್ಟು 97, 636 ಕೋಟಿ ರೂ. ವೆಚ್ಚವಾಗಲಿದೆ. ಜೈಕಾವೇ ಅದಕ್ಕೆ ಶೇ.81ರಷ್ಟು ಪ್ರಮಾಣದಲ್ಲಿ ನೆರವು ನೀಡಲಿದೆ. ಸದ್ಯ ಯೋಜನೆ ಸಮೀಕ್ಷೆಯ ಹಂತದಲ್ಲಿದೆ. ಅಂತಿಮ ವರದಿಯಲ್ಲಿ ಎಲ್ಲಿ ಪಿಲ್ಲರ್‌ಗಳನ್ನು ಹಾಕಬೇಕು ಎಂಬಿತ್ಯಾದಿ ವಿಚಾರಗಳು ಅಂತಿಮವಾಗಲಿವೆ. ಸದ್ಯ ಮುಂಬೈ-ಅಹಮದಾಬಾದ್ ನಡುವೆ ಏಳು ಗಂಟೆಗಳ ಪ್ರಯಾಣ ಇದೆ. 2018ರಲ್ಲಿ ಕಾಮಗಾರಿ ಆರಂಭವಾಗಿ 2023ಕ್ಕೆ ಮುಕ್ತಾಯವಾದ ಬಳಿಕ ಪ್ರಯಾಣ 2 ಗಂಟೆಗೆ ಇಳಿಯಲಿದೆ.