Advertisement

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

10:51 PM Sep 18, 2024 | Team Udayavani |

ಹೊಸದಿಲ್ಲಿ: ಆಸ್ಟ್ರೇಲಿಯದ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಅವರ ಐಪಿಎಲ್‌ ಫ್ರಾಂಚೈಸಿ ಬದಲಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಪಂಜಾಬ್‌ ಕಿಂಗ್ಸ್‌ಗೆ ಬಂದಿದ್ದಾರೆ. ಅವರು ಪಂಜಾಬ್‌ ತಂಡದ ಪ್ರಧಾನ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದು, ತಮ್ಮದೇ ದೇಶದ ಟ್ರೇವರ್‌ ಬೈಲಿಸ್‌ ಸ್ಥಾನವನ್ನು ತುಂಬಲಿದ್ದಾರೆ.

Advertisement

ರಿಕಿ ಪಾಂಟಿಂಗ್‌ ಕಳೆದ 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮೆಂಟರ್‌ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. 2020ರಲ್ಲಿ ಫೈನಲ್‌ ತಲುಪಿದ್ದಷ್ಟೇ ಡೆಲ್ಲಿ ಸಾಧನೆ ಆಗಿತ್ತು. ಇದಕ್ಕೂ ಮುನ್ನ ಪಾಂಟಿಂಗ್‌ ಮುಂಬೈ ತಂಡದ ಕೋಚ್‌ ಆಗಿದ್ದರು. “ರಿಕಿ ಪಾಂಟಿಂಗ್‌ ಮಂಗಳವಾರ ಪಂಜಾಬ್‌ ಕಿಂಗ್ಸ್‌ ತಂಡದ ಕೋಚ್‌ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದು 4 ವರ್ಷಗಳ ಒಡಂಬಡಿಕೆ ಆಗಿರುತ್ತದೆ’ ಎಂಬುದಾಗಿ ಐಪಿಎಲ್‌ ಮೂಲವೊಂದು ಹೇಳಿದೆ.

ಪಂಜಾಬ್‌ ಈವರೆಗೆ ಐಪಿಎಲ್‌ ಚಾಂಪಿಯನ್‌ ಆಗಿಲ್ಲ. ಕಳೆದ 7 ವರ್ಷಗಳಲ್ಲಿ ಟಾಪ್‌-5 ಸ್ಥಾನದಲ್ಲೂ ಕಾಣಿಸಿಕೊಂಡಿಲ್ಲ. 2024ರ ಐಪಿಎಲ್‌ನಲ್ಲಿ ಅದು 9ನೇ ಸ್ಥಾನಕ್ಕೆ ಕುಸಿದಿತ್ತು. ವಿಶ್ವಕಪ್‌ ವಿಜೇತ ತಂಡದ ಕಪ್ತಾನನಾಗಿರುವ ರಿಕಿ ಪಾಂಟಿಂಗ್‌ ಪಂಜಾಬ್‌ ತಂಡದ ಹಣೆಬರಹವನ್ನು ಬದಲಿಸಬಲ್ಲರೇ ಎಂಬುದು ಫ್ರಾಂಚೈಸಿ ಮಾಲಕರ ನಿರೀಕ್ಷೆ.

ಇದನ್ನೂ ಓದಿ: Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Advertisement

Udayavani is now on Telegram. Click here to join our channel and stay updated with the latest news.

Next