ಮುಂಬೈ: ರೋಹಿತ್ ಶರ್ಮಾ ಅವರು ಟೀಂ ಇಂಡಿಯಾದ ಮುಂದಿನ ಟೆಸ್ಟ್ ನಾಯಕನಾದರೆ ಸೂಕ್ತ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ, ಲೆಜೆಂಡರಿ ಕ್ರಿಕೆಟರ್ ರಿಕಿ ಪಾಂಟಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದಾಗ ನಾನು ತಂಡದಲ್ಲಿದ್ದೆ. ನಾನು ಆಗ ಫಾರ್ಮ್ ನಲ್ಲಿರಲಿಲ್ಲ. ಹೀಗಾಗಿ ಯಶಸ್ವಿಯಾಗಿ ತಂಡ ಮುನ್ನಡೆಸುವ ಅಂತಾರಾಷ್ಟ್ರೀಯ ಮಟ್ಟದ ನಾಯಕನ ಅವಶ್ಯಕತೆಯಿತ್ತು. ಮುಂಬೈ ಫ್ರಾಂಚೈಸಿ ನಾಯಕತ್ವದ ಬಗ್ಗೆ ನನ್ನಲ್ಲೂ ಕೇಳಿದ್ದರು. ರೇಸ್ ನಲ್ಲಿ ನಾಲ್ಕೈದು ಹೆಸರಿತ್ತು. ನಂತರ ರೋಹಿತ್ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಪಾಂಟಿಂಗ್ ಹೇಳಿದ್ದಾರೆ.
ಟೆಸ್ಟ್ ನಾಯಕತ್ವದ ಕುರಿತು ಬಿಸಿಸಿಐ ಸೂಕ್ತ ನಿರ್ಧಾರ ಪ್ರಕಟಿಸುತ್ತದೆ. ಅವರು ಮೂರು ಮಾದರಿಗೆ ಒಬ್ಬನೇ ನಾಯಕ ಅಥವಾ ಇಬ್ಬರು ನಾಯಕರ ಪದ್ದತಿಗೆ ಮೊರೆ ಹೋಗುತ್ತಾರೋ ನೋಡಬೇಕು ಎಂದು ಪಾಂಟಿಂಗ್ ಹೇಳಿದರು.
ಇದನ್ನೂ ಓದಿ:ವಿಶ್ವಸಂಸ್ಥೆ ಭೂಪಟ… ಜಮ್ಮು-ಕಾಶ್ಮೀರ ಪಾಕ್ ಮತ್ತು ಚೀನಾ ಭಾಗವಂತೆ!ಪ್ರಧಾನಿಗೆ ಸೇನ್ ಪತ್ರ
ಟೆಸ್ಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ನಾಯಕತ್ವ ತೊರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅಂತ್ಯವಾದ ಬೆನ್ನಲ್ಲೇ ವಿರಾಟ್ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಇದೀಗ ಬಿಸಿಸಿಐ ಮುಂದಿನ ನಾಯಕನ ಹುಡುಕಾಟದಲ್ಲಿದೆ.