Advertisement
ಜನವರಿ-2023
ಚೆನ್ನೈನ ರೇಸಿಂಗ್ ಟ್ರ್ಯಾಕ್ ಒಂದರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತದ ಖ್ಯಾತ ಕಾರ್ ರೇಸರ್ ಕೆ.ಇ. ಕುಮಾರ್ (59) ದಾರುಣ ಸಾವನ್ನಪ್ಪಿದ್ದರು.
ಅನಾರೋಗ್ಯದಿಂದ ವಡೋದರ ಆಸ್ಪತ್ರೆಗೆ ದಾಖಲಾಗಿದ್ದ ಹಿಮಾಚಲ ಪ್ರದೇಶದ ಕ್ರಿಕೆಟಿಗ ಸಿದ್ಧಾರ್ಥ್ಶ ರ್ಮ (28) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನ ಹೊಂದಿದ್ದರು.
Related Articles
Advertisement
ಫೆಬ್ರವರಿ-2023
ಫುಟ್‌ಬಾಲ್ ಲೆಜೆಂಡ್ ತುಳಸಿದಾಸ್ ನಿಧನ(16/02/2023)ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಮತ್ತು ಒಲಿಂಪಿಯನ್ ತುಳಸಿದಾಸ್ ಬಲರಾಮ್ (87) ದೀರ್ಘಕಾಲದ ಅನಾರೋಗ್ಯದ ಬಳಿಕ ನಿಧನ ಹೊಂದಿದ್ದರು. 1950 ಮತ್ತು 60ರ ದಶಕದ ಸಮೃದ್ಧ ಭಾರತೀಯ ಫುಟ್‌ಬಾಲ್‌ನ ‘ಹೋಲಿ ಟ್ರಿನಿಟಿ’ ಭಾಗವಾಗಿದ್ದ ಅವರು ಉತ್ತರಪಾರದ ಹೂಗ್ಲಿ ನದಿಯ ದಡದಲ್ಲಿರುವ ಫ್ಲ್ಯಾಟ್‌ನಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದರು.
ಅರ್ಜುನ ಪ್ರಶಸ್ತಿ ವಿಜೇತರಾಗಿದ್ದ ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ
ನೀಡಿ ಗಮನ ಸೆಳೆದಿದ್ದರು. ಆಗಸ್ಟ್- 2023 2007ರ ಟಿ20 ವಿಶ್ವ ಕಪ್ ವಿಜೇತ ತಂಡದ
ಮ್ಯಾನೇಜರ್ ಸುನಿಲ್‌ದೇವ್ ನಿಧನ(03/08/2023)
ದಿಲ್ಲಿ ಡಿಡಿಸಿಎ ಮಾಜಿ ಕಾರ್ಯದರ್ಶಿ ಸುನಿಲ್ ದೇವ್ (75) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನ ಹೊಂದಿದ್ದರು. 70ರ ದಶಕದಿಂದ 2015ರ ವರೆಗೆ ಡಿಡಿಸಿಎಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಕ್ರೀಡಾ ಆಡಳಿತಾಧಿಕಾರಿಯಾಗಿ ಭಾರತೀಯ ಕ್ರಿಕೆಟ್ ಮಂಡಳಿಯ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನ 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆದ್ದಾಗ ಅವರು ತಂಡದ ಮ್ಯಾನೇಜರ್ ಆಗಿರುವುದು ಅವರ ಬಾಳ್ವೆಯ ಮಹೋನ್ನತ ಕ್ಷಣವಾಗಿತ್ತು.
ಪಾಕಿಸ್ಥಾನ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಮಾಜಿ ಚೇರ್ಮನ್ ಇಜಾಸ್ ಬಟ್ ಅವರು ಲಾಹೋರ್‌ನಲ್ಲಿ ನಿಧನ ಹೊಂದಿದ್ದರು. ಪಾಕಿಸ್ಥಾನ ಪರ ಅವರು ಎಂಟು ಟೆಸ್ಟ್ ಆಡಿದ್ದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿದ್ದ ಅವರು 1959ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕರಾಚಿಯಲ್ಲಿ ನಡೆದ ಟೆಸ್ಟ್ ನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆಗೈದಿದ್ದರು.
ಭಾರತ ಫುಟ್ ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬರಾದ ಮೊಹಮ್ಮದ್ ಹಬೀಬ್ ನಿಧನ ಹೊಂದಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, 1970ರ ದಶಕದಲ್ಲಿ ತಮ್ಮ ಮಿಂಚಿನ ಕಾಲ್ಚಳಕದಿಂದ ಹೆಸರಾಗಿದ್ದರು.
ಪೀಲೆ ಆಡುತ್ತಿದ್ದ ಪ್ರತಿಷ್ಠಿತ ನ್ಯೂಯಾರ್ಕ್ ಕಾಸ್ಮೋಸ್ ವಿರುದ್ಧ ಮೋಹನ್ ಬಗಾನ್ ಪರ ಆಡಿದ್ದ ಹಬೀಬ್ ಗೋಲು ಬಾರಿಸಿದ್ದರು. 1970ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ತಂಡ ಕಂಚು ಗೆಲ್ಲಲು ನೆರವಾಗಿದ್ದರು. ಹೈದರಾಬಾದ್‌ನಲ್ಲಿ ಹುಟ್ಟಿದ ಅವರು, ಹೈದರಾಬಾದ್‌ನಲ್ಲೇ ಕೊನೆಯುಸಿರೆಳೆದಿದ್ದಾರೆ. ಸೆಪ್ಟೆಂಬರ್- 2023 ಕ್ಯಾನ್ಸರ್‌ಗೆ ಶರಣಾದ ಹೀತ್ ಸ್ಟ್ರೀಕ್(03/09/2023)
ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ಚಾಂಪಿಯನ್ ಆಲ್‌ರೌಂಡರ್ ಹೀತ್ ಹಿಲ್ಟನ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತು ಇಹಲೋಕ ತೊರೆದ್ದರು.
ನವೆಂಬರ್-2023 14/11/2023
ಸಹರಾ ಸುಬ್ರತಾ ರಾಯ್ ನಿಧನ
ಸಹರಾ ಇಂಡಿಯಾದ ಮಾಲಕ ಸುಬ್ರತಾ ರಾಯ್ (75)ಅನಾರೋಗ್ಯದಿಂದಾಗಿ ಮಂಗಳವಾರ ನಿಧನ ಹೊಂದಿದ್ದರು.
ಅವರು, ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.