Advertisement

ಈಚೆಗೆ ಕಾಂಗ್ರೆಸ್ ಸೇರಿದ ಮಾಜಿ ಸಚಿವ Revu Naik Belamagi ಗೆ ಕಾಂಗ್ರೆಸ್ ಟಿಕೆಟ್

03:32 PM Apr 15, 2023 | Team Udayavani |

ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಯ ಎಲ್ಲಒಂಭತ್ತು ಕ್ಷೇತ್ರಗಳ ಟಿಕೆಟ್ ಅಂತಿಮವಾಗಿದ್ದು, ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ ಈಚೆಗೆ ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ರೇವು ನಾಯಕ‌ ಬೆಳಮಗಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ.

Advertisement

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಈಚೆಗೆ ಅಂದರೆ ಒಂದುವರೆ ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದರು. ಮೊದಲ ಪಟ್ಟಿಯಲ್ಲೇ ಜಿಲ್ಲೆಯ ಒಂಭತ್ತು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಹಾಗೂ ಎರಡನೇ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಅಂತಿಮಗೊಳಿಸಿ ಕಲಬುರಗಿ ಗ್ರಾಮೀಣ ಕ್ಷೇತ್ರವೊಂದೇ ಕೈ ಬಿಡಲಾಗಿತ್ತು. ಈಗ ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದೆ.

ಟಿಕೆಟ್ ಗಾಗಿ ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿವಗಂತ ಜಿ.‌ರಾಮಕೃಷ್ಣ ಪುತ್ರ ವಿಜಯಕುಮಾರ ರಾಮಕೃಷ್ಣ ಗೆ ಟಿಕೆಟ್ ನೀಡಲಾಗಿತ್ತು. ಆಗ ವಿಜಯಕುಮಾರ ರಾಮಕೃಷ್ಣ ಹಾಗೂ ರೇವು ನಾಯಕ‌ ಬೆಳಮಗಿ ಪರಾಭವಗೊಂಡಿದ್ದರು.‌‌ ಆಗ ಬಿಜೆಪಿಯ ಬಸವರಾಜ ಮತ್ತಿಮಡು ಗೆಲುವು ಸಾಧಿಸಿದರು. ‌1994ರಿಂದ 2008ರ ವರೆಗೆ ಸತತ ನಾಲ್ಕು ಸಲ ಬಿಜೆಪಿಯಿಂದ ಗೆದ್ದಿರುವ ಬೆಳಮಗಿ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸೇರಿ ಒಟ್ಟಾರೆ ಏಳು ವರ್ಷ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜಿಲ್ಲೆಯ ಎಲ್ಲ ಒಂಭತ್ತು ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಬಿಜೆಪಿಗಿಂತ ಮುಂಚೆಯೇ ಕಾಂಗ್ರೆಸ್ ಪ್ರಕಟಿಸಿದ್ದು, ಈ ಮೂಲಕ ಚುನಾವಣಾ ಕಹಳೆ ಮೊಳಗಿಸಲಾಗಿದೆ.

ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಈಗ ನಾಲ್ಕರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದು, ಇದನ್ನು ಡಬಲ್ ಮಾಡುವ ಸಂಕಲ್ಪ ಕಾಂಗ್ರೆಸ್ ಹೊಂದಿದೆ.‌

Advertisement

ಜೇವರ್ಗಿಯಿಂದ ಡಾ.‌ಅಜಯಸಿಂಗ್, ಚಿತ್ತಾಪುರ ದಿಂದ ಪ್ರಿಯಾಂಕ್ ಖರ್ಗೆ, ಸೇಡಂ ಕ್ಷೇತ್ರದಿಂದ ಡಾ. ಶರಣ ಪ್ರಕಾಶ ಪಾಟೀಲ್, ಆಳಂದದಲ್ಲಿ ಬಿ.ಆರ್.‌ಪಾಟೀಲ್, ಅಫಜಲಪುರ ದಲ್ಲಿ ಎಂ.ವೈ ಪಾಟೀಲ್, ಕಲಬುರಗಿ ದಕ್ಷಿಣದಲ್ಲಿ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಉತ್ತರ ದಲ್ಲಿ ಖನೀಜಾ ಫಾತೀಮಾ, ಚಿಂಚೋಳಿಯಲ್ಲಿ ಸುಭಾಷ ರಾಠೋಡ ಈಗಾಗಲೇ ಟಿಕೆಟ್ ನೀಡಲಾಗಿದ್ದರೆ ಅಂತೀಮವಾಗಿ ರೇವು ನಾಯಕ ಬೆಳಮಗಿಗೆ ಟಿಕೆಟ್ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next