Advertisement

ರೈತರ ಮನಗೆಲ್ಲಲು ಮುಂದಾದ ರಾಜ್ಯ ಸರಕಾರ: ಕ್ರಾಂತಿಕಾರಿ ಬದಲಾವಣೆ ಎಂದ ಸಿಎಂ

03:26 PM Mar 12, 2022 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ಗುಂಗಿರಲಹಳ್ಳಿಯ ಗ್ರಾಮದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕಂದಾಯ ದಾಖಲೆಗಳು ರೈತರ ‌ಮನೆ ಬಾಗಿಲಿಗೆ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಗ್ರಾಮದ ಹನುಮಪ್ಪ ದೊಡ್ಡಪ್ಪಯ್ಯ ಅವರಿಗೆ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ವಿತರಿಸಿದರು.

Advertisement

ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವು ಸರ್ಕಾರದ ಜವಾಬ್ದಾರಿ

ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, 70 ವರ್ಷ ಕಳೆದರು ಬಡವರ ಹೆಸರಿನಲ್ಲಿ ರಾಜಕಾರಣ ಮಾಡಿದರು ಓಟು ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಹೊರತು ಜನಗಳಿಗೆ ಹಕ್ಕು ನೀಡಿಲ್ಲವೆಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನ ಮಂತ್ರಿ ನರೇಂದ್ರ‌ಮೋದಿ ಅವರು ರೈತರ ಬೆವರಿಗೆ ಬೆಲೆ ಸಿಗಬೇಕೆಂಬುದು ನಮ್ಮ ಸಂಕಲ್ಪ ಅಧಿಕಾರವಹಿಸಿಕೊಂಡ ಮೂರು ಗಂಟೆಯೊಳಗೆ ರೈತರ ಮಕ್ಕಳಿಗೆ‌ ವಿದ್ಯಾನಿಧಿಯನ್ನು ಜಾರಿಗೊಳಿಸಿದ್ದೇನೆ ಎಂದರು.

ಮಾಸಾಶನ ಹೆಚ್ಚಳ ಮಾಡಿದ್ದರಿಂದ ರಾಜ್ಯದ 50  ಲಕ್ಷ ಕುಟುಂಬಗಳಿಗೆ ಸಹಾಯವಾಗಿದೆ ಎಂದ ಅವರು ನಾನು ಮಾಡಿರುವುದು ಬಡವರ ಕಾಳಜಿ ಅಲ್ಲವೋ ಎಂಬುದು ತಾವು ನಿರ್ಧಿರಿಸಬೇಕು ಎಂದರು.

Advertisement

ಗರೀಬಿ ಹಠಾವೋ? ಎಂಬ ಘೋಷಣೆ ಮಾಡಿದರು ಹೊರತು ಗರೀಬಿ ಹಠಾವೋ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಮುಖ್ಯಮಂತ್ರಿಗಳು ರಾಜಕಾರಣದಲ್ಲಿ ಎರಡು ಮುಖಗಳಿವೆ ಒಂದು ಪವರ್ ಪಾಲಿಟಿಕ್ಸ್ ಮತ್ತೊಂದು ಪೀಪಲ್ ಪಾಲಿಟಿಕ್ಸ್ ನಾವು ಪೀಪಲ್ ಪಾಲಿಟಿಕ್ಸ್ ಮಾಡುತ್ತೇವೆ ಹೊರತು ಅಧಿಕಾರದ ದಾಹವಿಲ್ಲ ಆದರೆ ಆವರಿಗೆ(ಕಾಂಗ್ರೆಸ್) ಅಧಿಕಾರವೇ ಕೇಂದ್ರ ಬಿಂದು ಜನಸೇವೆಗೆ ಮಾಡಲು ಅವರಿಗೆ ಆಸಕ್ತಿಯಿಲ್ಲ ಎಂದು ದೂರಿದ ಅವರು ನಾವು ಜನಸೇವೆ ಮಾಡಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಹೊಂದಿದ್ದೇವೆ ಅಧಿಕಾರ ದಾಹಕ್ಕಾಗಿ ರಾಜಕಾರಣ ಮಾಡುವುದು ಬಿಜೆಪಿ ಪಕ್ಷದ ಜಾಯಮಾನವಲ್ಲ ಜನಸೇವೆಯೇ ಬಿಜೆಪಿ ಪಕ್ಷದ ಮುಖ್ಯ ಉದ್ದೇಶ ಎಂದರು.

ಕಂದಾಯ ಇಲಾಖೆಯಲ್ಲಿ‌ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದಾರೆ 5  ಕೋಟಿ ಜನರಿಗೆ ದಾಖಲೆಯನ್ನು‌ ಮುಟ್ಟಿಸುವಂತಹ ಕೆಲಸ ಮಾಡಿದ್ದೇವೆ ಸರ್ಕಾರವೇ ನಿಮ್ಮ‌ ಬಾಗಿಲಿಗೆ ಬಂದಿದೆ‌ ಎಂದರು.

ಹಾಲು ಉತ್ಪಾದಕರಿಗೆ ಧನ ಸಹಾಯ‌ ನೀಡಲು ದೇಶದ ಮೊದಲ ಬಾರಿಗೆ ಬ್ಯಾಂಕ್ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಹಾವೇರಿ,ಕಲ್ಬುರ್ಗಿಯ ಜೊತೆಗೆ ಶಿಡ್ಲಘಟ್ಟ ತಾಲೂಕಿನಲ್ಲಿ ೩೦ ಕೋಟಿ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ‌ಗೂಡಿನ ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿ ಬರಿ‌ ಭಾಷಣ ಮಾಡುವುದಿಲ್ಲ ಅನುಷ್ಠಾನಕ್ಕೆ ತರುತ್ತೇನೆ ಎಂದು‌‌ ಭರವಸೆ ನೀಡಿದರು.

೮ ಹಳ್ಳಿಗಳನ್ನು ಗುರುತಿಸಿ ಎತ್ತಿನಹೊಳೆಯ ನೀರುವ ತರುವ ಕೆಲಸವನ್ನು ಮಾಡಿದ್ದೇನೆ ಅದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಈ ಭೂತಾಯಿಗೆ ಹಸಿರು ಸೀರೆ ತೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದರು.

ನಮ್ಮ ನಾಯಕರು ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಮ್ಮ‌ ಸಚಿವ ಸಂಪುಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಲ್ಯಾಂಡ್‌ ಮಾಫೀಯಾವನ್ನು ಬಗ್ಗು ಬಡಿಯುತ್ತೇವೆ ಹಿಂದಿನ ಕಾಂಗ್ರೆಸ್ ಸರ್ಕಾರ ಮೃದು ಧೋರಣೆಯನ್ನು ಅನುಸರಿಸಿದೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಅಲೆದಾಡಿಸುವ ವ್ಯವಸ್ಥೆ ಕೊನೆ

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದ 224  ವಿಧಾನಸಭಾ ಕ್ಷೇತ್ರದಲ್ಲಿ 55  ಲಕ್ಷ ರೈತರಿಗೆ5  ಕೋಟಿ ರೂಗಳ ದಾಖಲೆಗಳನ್ನು ವಿತರಿಸಲಾಗುತ್ತದೆ ಎಂದರು.

ಕಂದಾಯ ಇಲಾಖೆಯನ್ನು ‌ಜನಸ್ನೇಹಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನು ಅಲೆದಾಡಿಸುವ ವ್ಯವಸ್ಥೆಯನ್ನು ಕೊನೆಗಾಣಿಸಲು ಕಂದಾಯ ದಾಖಲೆಗಳು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಆದ್ಯತೆ ನೀಡಿದ್ದೇವೆ ಜಮೀನಿಗಳ ಸರ್ವೇ ಕಾರ್ಯವನ್ನು ಸುಸೂತ್ರವಾಗಿ ನಡೆಸಲು 3 ಸಾವಿರ ಭೂಮಾಪಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ ಮಾರ್ಚ್ 31  ರೊಗೆ ನೊಂದಣಿ ಮಾಡಿಸಿದರೆ ಶೇ.10% ನೊಂದಣಿ ಶುಲ್ಕ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ರೈತರ ಬೆಳೆ ನಷ್ಟ ಪರಿಹಾರವನ್ನು ನೀಡಲು ಸಿಎಂ ೧೧೩೫ ಕೋಟಿ ರೂಗಳನ್ನು‌ ಮೀಸಲಿಟ್ಟಿದ್ದಾರೆ ರೈತರ ಮತ್ತು ಬಡವರಿಗೆ ಸಂವಿಧಾನತ್ಮಕ ದಾಖಲೆ ಪಡೆಯುವುದು ಹಕ್ಕು ಅದನ್ನು ಅನುಷ್ಠಾನಗೊಳಿಸಿದ್ದೇವೆ ಎಂದರು.

ಆರೋಗ್ಯ ಸಚಿವ ಡಾ.ಸುಧಾಕರ್, ಪೌರಾಡಳಿತ ಎಂಟಿಬಿ ನಾಗರಾಜ್, ಕಂದಾಯ ಇಲಾಖೆಯ ಪ್ರಧಾನ‌ಕಾರ್ಯದರ್ಶಿ ತುಷಾರ ಗಿರಿನಾಥ, ಜಿಲ್ಲಾಧಿಕಾರಿ ಆರ್ ಲತಾ,ಜಿಪಂ ಸಿಇಓ ಪಿ.ಶವಶಂಕರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next