Advertisement
2019ರ ಜನವರಿ ತಿಂಗಳಿಂದ, ಡಿಸೆಂಬರ್ ಅಂತ್ಯದವರೆಗೂ ದೇಶ, ವಿದೇಶ, ಜಿಲ್ಲೆ, ಹೊರಜಿಲ್ಲೆ ಸೇರಿದಂತೆ 73,73,627 ಜನರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದರು.
Related Articles
Advertisement
ಜೂನ್ ತಿಂಗಳಲ್ಲಿ ಲಾಕ್‌ಡೌನ್ ಸ್ವಲ್ಪಪಟ್ಟಿಗೆ ಸಡಿಲಿಕೆ ಕಂಡ ಬೆನ್ನಲ್ಲೇ ಪ್ರವಾಸೋದ್ಯಮಕ್ಕೆ ವಿ ಧಿಸಲಾಗಿದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದರಿಂದ 45,818 ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಜುಲೈ ತಿಂಗಳಲ್ಲಿ 15,105 ಪ್ರವಾಸಿಗರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದರು. ಆಗಸ್ಟ್ ತಿಂಗಳಲ್ಲಿ ಇನಷ್ಟು ಚೇತರಿಕೆ ಪ್ರವಾಸೋದ್ಯಮ ಕಂಡಿದೆ. 1,20,488 ಜನರು ಭೇಟಿ ನೀಡಿದ್ದಾರೆ. ಸೆಪ್ಟೆಂಬರ್‌ತಿಂಗಳಲ್ಲಿ 1,94,944 ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ರಾಜ್ಯ, ಹೊರರಾಜ್ಯ ಸೇರಿದಂತೆ 5,10,844 ಜನರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ:ಬಾಳು ಋಣದ ರತ್ನದ ಗಣಿ
ನವೆಂಬರ್ ತಿಂಗಳಲ್ಲಿ 3,48,705 ಜನ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದು, ವರ್ಷಾತ್ಯಂದ ಡಿಸೆಂಬರ್ ತಿಂಗಳಲ್ಲಿ 4,36,348 ಪ್ರವಾಸಿಗರು ಭೇಟಿ ನೀಡಿದ್ದಾರೆ. ಸದ್ಯ ನೂತನ ವರ್ಷದ ಆರಂಭದಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ವಾರದಿಂದ ವಾರಕ್ಕೆ ಏರಿಕೆ ಕಂಡು ಬರುತ್ತಿದ್ದು, ಕೋವಿಡ್ ಸೋಂಕಿನಿಂದ ಏಪ್ರಿಲ್ ತಿಂಗಳಿಂದ ಮಡುಗಟ್ಟಿದ್ದ ಪ್ರವಾಸೋದ್ಯಮ ನಿಧಾನ ಗತಿಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದೆ. ಪ್ರವಾಸೋದ್ಯಮವನ್ನು ಅವಲಂಬಿಸಿಕೊಂಡಿರುವ ಉದ್ಯಮಗಳು ಚೇತರಿಕೆಯತ್ತಾ ಮುಖ ಮಾಡಿದ್ದು, ಜಿಲ್ಲೆಯ ಜನತೆಯಲ್ಲಿ ಸಂತಸ ತಂದಿದೆ.
ಜಿಲ್ಲೆಯಲ್ಲಿ ಸುಮಾರು 450ಕ್ಕೂ ಹೋಂ ಸ್ಟೇಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ರಿಜಿಸ್ಟರ್ ಆಗಿವೆ. ಉಳಿದಂತೆ 90 ಹೋಂ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ರಿಜಿಸ್ಟರ್ ಹೊಂದಿಲ್ಲ. ಹೋಂ ಸ್ಟೇ ರಿಜಿಸ್ಟ್‌ರ್‌ಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅರ್ಜಿಗಳ ಪರಿಶೀಲನೆ ನಂತರ ಪ್ರವಾಸೋದ್ಯಮ ಇಲಾಖೆಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. 90 ಹೋಂ ಸ್ಟೇಗಳು ಈ ಪ್ರಮಾಣಪತ್ರವನ್ನು ಹೊಂದಿಲ್ಲವೆಂದು ತಿಳಿದು ಬಂದಿದೆ.