Advertisement

ಬಾಪೋಜಿ ಸೇವಾ ಕೇಂದ್ರಗಳಲ್ಲಿನ ಸೇವೆಗಳ ಪರಿಷ್ಕರಣೆ

06:30 AM Nov 19, 2018 | |

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ “ಬಾಪೂಜಿ ಸೇವಾ ಕೇಂದ್ರ’ಗಳ ಮೂಲಕ ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ 43 ಸೇವೆಗಳನ್ನು ಪರಿಷ್ಕರಿಸಲಾಗಿದ್ದು, ಸೇವೆಗಳ ಸಂಖ್ಯೆಯನ್ನು 25ಕ್ಕೆ ಇಳಿಸಿ ಸುತ್ತೋಲೆ ಹೊರಡಿಸಲಾಗಿದೆ.

Advertisement

ಒಟ್ಟು 43 ಸೇವೆಗಳಲ್ಲಿ ಕಟ್ಟಡ ಸಂಬಂಧಿತ 10, ವ್ಯಾಪಾರ ಪರವಾನಿಗೆ ಸಂಬಂಧಿತ 5, ಫ‌ಲಾನುಭವಿ ಸಂಬಂಧಿತ 14, ನಿರ್ವಹಣೆ ಸಂಬಂಧಿತ 3 ತೆರಿಗೆ ಪಾವತಿ ಸಂಬಂಧಿತ 5 ಹಾಗೂ ಇತರ 6 ಸೇವೆಗಳನ್ನು ಇಲ್ಲಿವರೆಗೆ ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿತ್ತು. ಈಗ ಅವುಗಳನ್ನು 25ಕ್ಕೆ ಪರಿಷ್ಕರಿಸಲಾಗಿದ್ದು, 18 ಸೇವೆಗಳನ್ನು ಕೈಬಿಡಲಾಗಿದೆ. ಈ ಪರಿಷ್ಕರಣೆಯಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಬದಲಿಗೆ ಪದೇ ಪದೇ ಎದುರಾಗುತ್ತಿದ್ದ ಕೆಲವೊಂದು ಗೊಂದಲಗಳು ದೂರವಾಗಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಗ್ರಾಮೀಣ ಜನತೆಗೆ ಅವರ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗೆ ಅವಶ್ಯಕವಾಗಿರುವ ವಿವಿಧ ಇಲಾಖೆಗಳ ದಾಖಲೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಕಂದಾಯ ಇಲಾಖೆಗೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯನ್ನು ಒಗ್ಗೂಡಿಸಿ ಸಾರ್ವಜನಿಕ ಸೇವೆಗಳನ್ನು ಗ್ರಾಮ ಪಂಚಾಯಿತಿಗಳಲ್ಲಿಯೇ ಆನ್‌ಲೈನ್‌ ಮುಖಾಂತರ ಒದಗಿಸುವ ಉದ್ದೇಶದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 43, ಕಂದಾಯ ಇಲಾಖೆ 40, ವಿವಿಧ ಇಲಾಖೆಗಳ 17 ಸೇರಿ ಒಟ್ಟು 100 ಸೇವೆಗಳನ್ನು ಒದಗಿಸಲಾಗುತ್ತಿತ್ತು. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಸೇವೆಗಳನ್ನು ಪರಿಷ್ಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next