Advertisement
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿದ್ದು, ಯೋಜನೆಯ ಮೂಲ ಅಂದಾಜು ಪಟ್ಟಿಯಲ್ಲಿದ್ದ 188.73 ಕೋಟಿ ರೂ.ಗಳನ್ನು ಅದನ್ನು 209.13 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ರಾಜ್ಯದ ಪಾಲು ಕೂಡ ಏರಿಕೆಯಾಗಿದ್ದು, 21.13 ಕೋಟಿಯಿಂದ 41.53 ಕೋಟಿ ರೂ.ಗೆ ಹೆಚ್ಚಳವಾಗಿದೆ.
Related Articles
Advertisement
ಬಂದರುಗಳ ಆಧುನೀಕರಣಇದಲ್ಲದೆ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂ ಮೀನುಗಾರಿಕೆ ಬಂದರು ಮತ್ತು ಮೀನುಗಾರಿಕೆ ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣೆ ಹೂಳೆತ್ತುವಿಕೆ ಕಾಮಗಾರಿಗಳನ್ನು ಒಟ್ಟು 84.57 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಇದೇ ವೇಳೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೆಟಿಟಿಪಿ ನಿಯಮಗಳನ್ವಯ ಪ್ರಸ್ತಾಪಿತ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಒಟ್ಟು ಯೋಜನಾ ವೆಚ್ಚ 84.57 ಕೋಟಿ ರೂ. ಇದ್ದು, ಮೀನುಗಾರರ ಹಿತದೃಷ್ಟಿಯಿಂದ ಮಲ್ಪೆ, ಗಂಗೊಳ್ಳಿ ಮತ್ತು ಮಂಗಳೂರು ಬಂದರುಗಳ ಆಧುನೀಕರಣ ಹಾಗೂ ಆಮದಳ್ಳಿ, ಹಾರವಾಡ ಮತ್ತು ಬೇಲೆಕೇರಿ ಹಾಗೂ ತದಡಿ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಈ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರದ ಪಾಲು 34.19 ಕೋಟಿ ರೂ., ಕೇಂದ್ರದ ಪಾಲು 50.38 ಕೋಟಿ ರೂ. ಆಗಿದೆ ಎಂದು ಎಚ್.ಕೆ. ಪಾಟೀಲ ಮಾಹಿತಿ ನೀಡಿದರು. ಮಲ್ಪೆ, ಗಂಗೋಳ್ಳಿ ಮತ್ತು ಮಂಗಳೂರಿನಂತಹ ಪ್ರಮುಖ ಬಂದರುಗಳನ್ನು ನಿರ್ಮಿಸಿ ಅನೇಕ ವರ್ಷಗಳಾಗಿವೆ. ಈ ಮೂರು ಬಂದರುಗಳನ್ನು ನವೀಕರಿಸಿ ಅಭಿವೃದ್ಧಿಪಡಿಸುವ ನಿಟ್ಟಿನಿಂದ ಆಧುನೀಕರಣ ಕಾಮಗಾರಿ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆಮದಳ್ಳಿ, ಹಾರವಾಡ ಮತ್ತು ಬೇಲಿಕೇರಿ ಹಾಗೂ ತದಡಿ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಒಟ್ಟಾರೆ ಮತ್ಸé ಸಂಪದ ಯೋಜನೆ ಅಡಿ ರಾಜ್ಯದಲ್ಲಿ 11 ಮೀನುಗಾರಿಕೆ ಬಂದರು ಮತ್ತು 15 ಮೀನುಗಾರಿಕೆ ಇಳಿದಾಣಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.