Advertisement

ICAI ನಿಂದ CA ಕೋರ್ಸ್‌ಗಳ ಪರಿಷ್ಕರಣೆ

11:49 PM Jun 30, 2023 | Team Udayavani |

ದಿನದಿನವೂ ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಲೆಕ್ಕ ಪತ್ರ ನಿರ್ವಹಣೆ ಮತ್ತು ಲೆಕ್ಕ ಪರಿಶೋಧನ ವಿಧಾನಗಳೂ ಬಹಳಷ್ಟು ಬದಲಾಗಿವೆ. ಈ ಹಿನ್ನೆಲೆ ಯಲ್ಲಿ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ (ICAI), ಚಾರ್ಟರ್ಡ್‌ ಅಕೌಂಟೆಂಟ್‌ಗಳಿಗೆ ಶಿಕ್ಷಣ ಮತ್ತು ತರಬೇತಿಯ ಹೊಸ ಯೋಜನೆಯನ್ನು ಪರಿಚ ಯಿಸಿದೆ. ಈ ಪರಿಷ್ಕೃತ ಯೋಜನೆಯಲ್ಲಿ ಸಿಎ ಕೋರ್ಸ್‌ನ ಎಲ್ಲ 3 ಹಂತಗಳಲ್ಲಿ ಮತ್ತು 3 ವರ್ಷದ ಪ್ರಾಯೋಗಿಕ ತರಬೇತಿ ಅವಧಿಯಲ್ಲಿ ಬದಲಾವಣೆ ಮಾಡಿದೆ. ಜುಲೈ 1ರಂದು ಇದು ಜಾರಿಯಾಗಲಿದ್ದು 2024ರ ಪರೀಕ್ಷೆಗಳಿಗೆ ಅನ್ವಯವಾಗಲಿದೆ.

Advertisement

ಐಸಿಎಐ ಹೊಸ ಯೋಜನೆ, ಸಿಎ ಫೌಂಡೇಶನ್‌ ಕೋರ್ಸ್‌, ಸಿಎ ಇಂಟರ್‌ ಕೋರ್ಸ್‌ ಮತ್ತು ಸಿಎ ಫೈನಲ್‌ ಕೋರ್ಸ್‌ ಹೀಗೆ ಮೂರು ಹಂತಗಳನ್ನು ಒಳಗೊಂಡಿರಲಿದೆ.

1) ಸಿಎ ಫೌಂಡೇಶನ್‌ ಪರೀಕ್ಷೆ: ವಿದ್ಯಾರ್ಥಿಗಳು 10 ನೇ ತರಗತಿಯನ್ನು ಪೂರ್ಣಗೊಳಿಸಿದ ಅನಂತರ ನೋಂದಾಯಿಸಿಕೊಳ್ಳಬಹುದು ಮತ್ತು ಸಿಎ ಫೌಂಡೇಶನ್‌ನ ನೋಂದಣಿ ನಾಲ್ಕು ವರ್ಷ ಗಳವರೆಗೆ ಮಾನ್ಯವಾಗಿರುತ್ತದೆ. 4 ವರ್ಷಗಳ ಬಳಿಕ ವಿದ್ಯಾರ್ಥಿಗಳು ತಮ್ಮ ನೋಂದಣಿಯನ್ನು ನವೀಕ ರಿಸಲು ಸಾಧ್ಯವಾಗುವುದಿಲ್ಲ. ಈಗ ಅಭ್ಯರ್ಥಿಗಳು ಸಿಎ ಫೌಂಡೇಶನ್‌ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಲು ಶೇ.50 ಅಥವಾ ಹೆಚ್ಚಿನ ಅಂಕಗಳನ್ನು ಪ್ರತೀ 4 ಪೇಪರ್‌ನಲ್ಲಿ ಗಳಿಸಬೇಕು ಮತ್ತು ಪ್ರತೀ ತಪ್ಪಾದ MCQ ಉತ್ತರಕ್ಕೆ 0.25 ಅಂಕವನ್ನು ಕಡಿತ ಮಾಡಲಾಗುವುದು.

2)ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆ: ಈ ಕೋರ್ಸ್‌ ತೆಗೆದುಕೊಳ್ಳಲು, ಹಿಂದಿನ ಅರ್ಹತೆಗಳ ಅಗತ್ಯವಿರುತ್ತದೆ. ನೇರ ಪ್ರವೇಶ ಆಯ್ಕೆ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅರ್ಹತೆ ಪಡೆಯಲು 8 ತಿಂಗಳು ಅಧ್ಯಯನಕ್ಕೆ ಮೀಸಲಿಡಬೇಕು ಹಾಗೂ ಕನಿಷ್ಠ ಶೇ. 55 ಅಂಕ ಗಳನ್ನು ಪದವೀಧರರು ಪಡೆದಿರಬೇಕು. ಈ ಕೋರ್ಸ್‌ಗೆ ನೋಂದಣಿಯು ಈಗ 4 ರ ಬದಲಿಗೆ 5 ವರ್ಷಗಳ ಅವಧಿಗೆ ಮಾನ್ಯವಾಗಿದೆ ಮತ್ತು ವಿದ್ಯಾರ್ಥಿಗಳು ಒಮ್ಮೆ ಮಾತ್ರ ಅಗತ್ಯ ಶುಲ್ಕವನ್ನು ಪಾವತಿಸುವ ಮೂಲಕ ತಮ್ಮ ನೋಂದಣಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಈ ಕೋರ್ಸ್‌ ಅನ್ನು 6 ಪೇಪರ್‌ಗಳಿಗೆ ಇಳಿಸಲು ಐಸಿಎಐ ಪ್ರಸ್ತಾವಿಸಿದೆ ಹಾಗೂ ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಗಳ ನಿಯಮಾವಳಿಗಳನ್ನು ಬದಲಾಯಿಸಲಾಗಿದ್ದು ಎಲ್ಲ 6 ಪತ್ರಿಕೆಗಳಲ್ಲಿ ಶೇ. 30 ಪ್ರಶ್ನೆಗಳು MCQ ಆಧಾ ರಿತ ಪ್ರಶ್ನೆಗಳಾಗಿವೆ. ಹೆಚ್ಚುವರಿಯಾಗಿ ಪ್ರತೀ ತಪ್ಪಾದ ಉತ್ತರಕ್ಕೆ 0.25 ರ ಋಣಾತ್ಮಕ ಅಂಕವಿರಲಿದೆ.

3)ಸಿಎ ಆರ್ಟಿಕಲ್‌ಶಿಪ್‌ ತರಬೇತಿ: ಸಿಎ ಆರ್ಟಿಕಲ್‌ಶಿಪ್‌ ತರಬೇತಿಯನ್ನು ಪ್ರಾರಂಭಿಸಲು ವಿದ್ಯಾರ್ಥಿಗಳು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯ ಎರಡೂ ಗುಂಪುಗಳಲ್ಲಿ ಉತ್ತೀರ್ಣ ರಾಗಬೇಕಾಗುತ್ತದೆ ಹಾಗೂ ಕಾರ್ಯಕ್ರಮದ ಅವಧಿಯನ್ನು 3 ರಿಂದ 2 ವರ್ಷಗಳಿಗೆ ಇಳಿಸ ಲಾಗಿದೆ. ಇದರಿಂದಾಗಿ ಸಿಎ ಆಕಾಂಕ್ಷಿಗಳು ವೇಗ ವಾಗಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಬಹುದು. ಅಸಮರ್ಪಕ ಸಿಎ ಆರ್ಟಿಕಲ್‌ಶಿಪ್‌ ಸ್ಟೈಫ‌ಂಡ್‌ ಮೊತ್ತವನ್ನು ದುಪ್ಪಟ್ಟು ಮಾಡುವ ನಿರ್ಧಾರವನ್ನು ಐಸಿಎಐ ಕೈಗೊಂಡಿದೆ.
ಪ್ರಾಯೋಗಿಕ ತರಬೇತಿಯ ಸಮಯದಲ್ಲಿ ಪರೀಕ್ಷೆ ಇಲ್ಲದಿರುವ ಕಾರಣದಿಂದ ಐಸಿಎಐ, ವಿದ್ಯಾರ್ಥಿಗಳಿಗೆ ಒಂದೇ ವರ್ಷದಲ್ಲಿ 12 ದಿನಗಳ ರಜೆ ಅಥವಾ ಎರಡು ವರ್ಷಗಳಲ್ಲಿ ಒಟ್ಟು 24 ದಿನಗಳನ್ನು ಮಾತ್ರ ತೆಗೆದುಕೊಳ್ಳಲು ಅವಕಾಶವಿದೆ.

Advertisement

4)ಸ್ವಯಂ ಗತಿಯ ಮಾಡ್ನೂಲ್‌: ಸ್ವಯಂ ಗತಿಯ ಮಾಡ್ನೂಲ್‌ಗ‌ಳನ್ನು ಈ ಹೊಸ ಯೋಜನೆ ಒಳಗೊಂಡಿರಲಿದೆ. ವಿದ್ಯಾರ್ಥಿಗಳು ಈ ಮಾಡ್ನೂ ಲ್‌ಗ‌ಳ ಮೂಲಕ ತಮ್ಮದೇ ಆದ ವೇಗ ದಲ್ಲಿ ಅಧ್ಯಯನ ಮಾಡಬಹುದು ಮತ್ತು ಆನ್‌ಲೈನ್‌ ಪರೀಕ್ಷೆಗಳನ್ನು ನೀಡಬಹುದು. ಸಿಎ ಅಂತಿಮ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಪ್ರತಿಯೊಂದರಲ್ಲೂ ಶೇ.50ಕ್ಕಿಂತ ಹೆಚ್ಚು ಅಂಕಗ ಳೊಂದಿಗೆ ನಾಲ್ಕು ಸೆಟ್‌ಗಳಲ್ಲಿ ಉತ್ತೀರ್ಣರಾಗಿರಬೇಕು.

ಆರ್ಟಿಕಲ್‌ಶಿಪ್‌ ತರಬೇತಿಯಲ್ಲಿ ಭಾಗವಹಿಸುವಾಗ ಅವರು ಆನ್‌ಲೈನ್‌ನಲ್ಲಿ ಈ ಸ್ವಯಂ ಗತಿಯ ಮಾಡ್ನೂಲ್‌ಗ‌ಳಿಗಾಗಿ ಅಧ್ಯಯನ ಮಾಡಬಹುದು ಮತ್ತು ಅದೇ ಸಮಯದಲ್ಲಿ ತಮ್ಮ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಸಿಎ ಅಂತಿಮ ಕೋರ್ಸ್‌ನ ನೋಂದಣಿಗಾಗಿ ಅರ್ಹತೆ ಪಡೆಯಲು, ವಿದ್ಯಾರ್ಥಿಗಳು ಸಿಎ ಇಂಟರ್‌ಮೀಡಿಯೇಟ್‌ ಪರೀಕ್ಷೆಯ ಎರಡೂ ಗುಂಪುಗಳಲ್ಲಿ ಉತ್ತೀರ್ಣರಾಗಿರಬೇಕು ಮತ್ತು ICITSS ತರಬೇತಿಯನ್ನು ಪೂರ್ಣಗೊಳಿಸಿರಬೇಕು.

5)ಸಿಎ ಫೈನಲ್‌ ಪರೀಕ್ಷೆ: ಸಿಎ ಅಂತಿಮ ಹಂತಕ್ಕೆ ಅರ್ಹರಾಗಲು, ವಿದ್ಯಾರ್ಥಿಗಳು ತಮ್ಮ ಸಿಎ ಇಂಟರ್‌ಮೀಡಿಯೇಟ್‌ ಎರಡೂ ಗುಂಪುಗಳಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಾಯೋಗಿಕ ತರಬೇತಿ ಮುಗಿದ ಅನಂತರ 6 ತಿಂಗಳ ಅಧ್ಯಯ ನದ ಅವಧಿ ಇರಬೇಕು. ಸಿಎ ಅಂತಿಮ ನೋಂದ ಣಿಯು 10 ವರ್ಷಗಳ ಮಾನ್ಯತೆಯ ಅವಧಿ ಯನ್ನು ಹೊಂದಿದೆ. ತಮ್ಮ ನೋಂದಣಿಯನ್ನು ಮುಂದುವರಿಸಲು ಬಯಸುವವರು 10 ವರ್ಷ ಗಳ ಅನಂತರ ಅಗತ್ಯ ಶುಲ್ಕವನ್ನು ಪಾವತಿಸುವ ಮೂಲಕ ಅದನ್ನು ನವೀಕರಿಸಬೇಕು. ಸಿಎ ಫೈನಲ್‌ ಹೊಸ ಯೋಜನೆ 2023 ರ ಅಡಿಯಲ್ಲಿ, ಐಸಿಎಐ ಸಿಎ ಅಂತಿಮ ಪತ್ರಿಕೆಗಳ ಸಂಖ್ಯೆಯನ್ನು 8 ರಿಂದ 6 ಕ್ಕೆ ಇಳಿಸಿದೆ. ಪ್ರತಿಯೊಂದರಲ್ಲೂ ಮೂರು ಪೇಪರ್‌ಗಳನ್ನು ಹೊಂದಿರುವ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಭವಿಷ್ಯದ ಚಾರ್ಟರ್ಡ್‌ ಅಕೌಂಟೆಂಟ್‌ಗಳಿಗೆ ಅಪ್‌  ಟು  ಡೇಟ್‌ ಶಿಕ್ಷಣವನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ಲಭಿಸುವಂತೆ ಈ ಹೊಸ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗೆ ಭೇಟಿ ನೀಡಿ : https://www.icai.org/

ಸಿಎ ನರಸಿಂಹ ನಾಯಕ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next