Advertisement
ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಪ್ರತಿಭಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ನಡೆದ ಅಂಕಣಕಾರ ಡಾ.ಕೆ.ಪಿ.ಪುತ್ತೂರಾಯರ “ಬಾಗಿನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿರುವ ರಾಜ್ಯ ಸರ್ಕಾರ ತನ್ನ ನಿಲುವು ಸಮಂಜಸವಲ್ಲ.
Related Articles
Advertisement
ಅಧ್ಯಯನಶೀಲರಲ್ಲಿ ಕೆ.ಪಿ.ಪುತ್ತೂರಾಯರು ಒಬ್ಬರಾಗಿದ್ದು, ಅವರ ಬಾಗಿನ ಕೃತಿಯ ವಿಚಾರಗಳಲ್ಲಿ ಅವರ ಅಧ್ಯಯನ ಆಳ ತಿಳಿಯುತ್ತದೆ. 5000 ವರ್ಷಗಳ ಹಿಂದಿನ ವೇದ ಉಪನಿಷತ್ತಿನಿಂದ ಹಿಡಿದು 20ನೇ ಶತಮಾನದ ಕುವೆಂಪು-ಕಾರಂತರ ಬರಹಗಳ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.
ಕೃತಿಯಲ್ಲಿ 12ನೇ ಶತಮಾನದ ವಚನಕಾರರು, ಸರ್ವಜ್ಞನ ತ್ರಿಪದಿಗಳು, ದಾಸರ ಪದಗಳು, ಗೋವಿಂದ ಪೈ, ಕುವೆಂಪು,ಕಾರಂತರ ಸಾಹಿತ್ಯದ ಪ್ರಮುಖ ಅಂಶಗಳನ್ನು ಬಳಸಿಕೊಂಡು ಉದಾಹರಣೆಗಳ ಮೂಲಕ ಸೊಗಸಾಗಿ ವಿವರಿಸಿದ್ದಾರೆ.
ಈ ಕೃತಿ 100ಕ್ಕೂ ಹೆಚ್ಚು ಲೇಖನ ಬರಹಗಳನ್ನು ಹೊಂದಿದ್ದು, ಶಿಕ್ಷಣ, ಸಾಮಾಜಿಕ ಕಳಕಳಿ, ಸಂಸಾರ, ಆರೋಗ್ಯ, ವ್ಯಕ್ತಿತ್ವ ವಿಕಸನ, ಪರಿಸರ ಕಾಳಜಿ, ಸಂಸ್ಕೃತಿ, ಸಂಸ್ಕಾರದಂತಹ ಸಾಕಷ್ಟು ವಿಚಾರಗಳನ್ನು ಕೃತಿ ಒಳಗೊಂಡಿದೆ. ಕನ್ನಡ ಮಾತ್ರವಲ್ಲದೇ ಸಂಸ್ಕೃತ, ಹಿಂದಿ, ತೆಲುಗು, ತಮಿಳಿನ ನಾನ್ನುಡಿ ಬಳಸಿದ್ದಾರೆ ಎಂದು ತಿಳಿಸಿದರು.
ಕವಿ ಎಚ್.ಡುಂಡಿರಾಜ್ ಮಾತನಾಡಿ, ಕೆ.ಪಿ.ಪುತ್ತೂರಾಯರು ಬರಹ ಹಾಗೂ ಭಾಷಣ ಎರಡರಲ್ಲೂ ಯಶಸ್ಸು ಪಡೆದಿದ್ದಾರೆ. ದಕ್ಷಿಣ ಕನ್ನಡ ಮೂಲದವರಾಗಿದ್ದು, ಇಂದು ಹಾಸ್ಯ ಭಾಷಣ, ಅಂಕಣ ಬರಹದ ಮೂಲಕ ಕರ್ನಾಟಕದಲ್ಲಿ ಹೆಸರು ಪಡೆದಿರುವುದು ಸಂತಸದ ವಿಚಾರ.
ಬಾಗಿನ ಎಂದರೆ ಉಡುಗೊರೆ ಎಂದರ್ಥವಾಗಿದ್ದು, ಈ ಕೃತಿಯು ಸಾಕಷ್ಟು ಸಂದೇಶಗಳ ಮೂಲಕ ಯುವಜನತೆಗೆ ಉಪಯುಕ್ತ ಉಡುಗೊರೆಯಾಗಲಿದೆ ಎಂದ ಅವರು “ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಕೊಂಡೋದಿರಿ’ ಎಂಬ ಹಾಸ್ಯ ಚುಟಾಕಿಯೊಂದಿಗೆ ಕಿವಿಮಾತನ್ನು ಹೇಳಿದರು.
ಕೃತಿಕಾರ ಕೆ.ಪಿ.ಪುತ್ತೂರಾಯರು ಮಾತನಾಡಿ, ನನ್ನ ಮಾತೃ ಭಾಷೆ ತುಳು. ಪಕ್ಕದ ಊರಿನ ಭಾಷೆ ಮಲಯಾಳಂ, ದ್ವಿತೀಯ ಭಾಷೆಯಾಗಿ ಕಲಿತದ್ದು ಹಿಂದಿ. ಆದರೆ ನನ್ನ ಹೃದಯದಲ್ಲಿರುವ ಭಾಷೆ ಮಾತ್ರ ಕನ್ನಡವಾಗಿದೆ. ಕನ್ನಡ ಅರ್ಥ ಮಾಡಿಕೊಳ್ಳದವರಿಗೆ ಕಲ್ಲು, ಅರ್ಥ ಮಾಡಿಕೊಂಡವರಿಗೆ ಅದು ಕಲ್ಲು ಸಕ್ಕರೆ. ಇದುವೇ ನಮ್ಮ ಕನ್ನಡದ ವೈಶಿಷ್ಟ.
ಸಾಹಿತ್ಯ ಕೃಷಿಗೆ ದೊಡ್ಡ ಗದ್ದೆ ಬೇಕಿದೆ. ಆದರೆ, ನನ್ನಲ್ಲಿ ಗದ್ದೆಯಿಲ್ಲ. ಸಾಹಿತ್ಯದ ಸಂತೆಯಲ್ಲಿ ನನ್ನದೊಂದು ಚಿಲ್ಲರೆ ಅಂಗಡಿಯಾಗಿದ್ದು ವ್ಯಾಪಾರ ಚೆನ್ನಾಗೇ ಇದೆ ಎಂದು ಸಂತಸವ್ಯಕ್ತಪಡೆಸಿದರು. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ, ಕರ್ನಾಟಕ ಪ್ರತಿಭಾ ಕೇಂದ್ರ ಅಧ್ಯಕ್ಷ ಪಾನ್ಯಂ ನಟರಾಜ್ ಉಪಸ್ಥಿತರಿದ್ದರು.