Advertisement

ಧರ್ಮಸಮ್ಮೇಳನ ರದ್ದು ನಿರ್ಧಾರ ಮರುಪರಿಶೀಲಿಸಿ: ಮಡ್ತಿಲ

03:09 PM Dec 08, 2017 | Team Udayavani |

ಸುಳ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವ ಸಂದರ್ಭ ನಡೆಯುವ ಧರ್ಮ ಸಮ್ಮೇಳನ ಸಭೆ ಹಿಂದಿನಿಂದಲೂ ಸಂಪ್ರದಾಯದಂತೆ ನಡೆದು ಬರುತ್ತಿರುವ ಧಾರ್ಮಿಕ ಕಾರ್ಯಕ್ರಮ. ಈ ಬಾರಿ ಇದನ್ನು ನಡೆಸದಿರುವ ನಿರ್ಧಾರವನ್ನು ಪರಾಮರ್ಶಿಸಿ, ಧರ್ಮಸಮ್ಮೇಳನ ವನ್ನು ಆಯೋಜಿಸುವಂತೆ ದೇಗುಲ ಆಡಳಿತ ಮಂಡಳಿಗೆ ಮಾಜಿ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್‌ ಮಡ್ತಿಲ ಸಲಹೆ ನೀಡಿದ್ದಾರೆ.

Advertisement

ಬಿಜೆಪಿ ಶಾಸಕ ಮತ್ತು ದಲಿತ ಸಮುದಾಯದ ವ್ಯಕ್ತಿ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿದ್ದಾರೆ ಎಂಬ ಕಾರಣದಿಂದಾಗಿ ಸಮ್ಮೇಳನವನ್ನು ಹೀಗೆ ಕೈಬಿಟ್ಟಿರುವುದು ಶುದ್ಧ ತಪ್ಪು. ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರ ಧರ್ಮಸಮ್ಮೇಳನ ಕೈಬಿಡುವ ಮೂಲಕ ಮತ್ತೂಮ್ಮೆ ತನ ನೀತಿಯನ್ನು ಪ್ರಕಟಪಡಿಸಿದೆ ಎಂದು ಅವರು ಟೀಕಿಸಿದ್ದಾರೆ. 

ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಹಿಂದು ಸಮಾಜಕ್ಕೆ ಹೊಸ ಸಂದೇಶ ನೀಡುವ ಧರ್ಮಸಮ್ಮೇಳನದಂತಹ
ಸಭೆ ಅಗತ್ಯವಾಗಿ ನಡೆಯಲೇಬೇಕು. ಈಗ ಅದನ್ನು ಕೈಬಿಟ್ಟಿರುವ ನಿರ್ಧಾರವನ್ನು ಪರಿಶೀಲಿಸಿ, ಸಮ್ಮೇಳನ ಆಯೋಜಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಆಡಳಿತ ಮಂಡಳಿಯೇ ನೇರ ಹೊಣೆಯಾಗಬೇಕಾದೀತು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಹಿಂದೆ ತನ್ನ ಆಡಳಿತ ಮಂಡಳಿಯ ಅವಧಿಯಲ್ಲಿ ಶಾಸಕರ ಹೆಸರನ್ನು ಕೈಬಿಟ್ಟಿರುವುದಾಗಿ ಕಾಂಗ್ರೆಸ್‌ ಗುಲ್ಲೆಬ್ಬಿಸಿತ್ತು. ಅಂದಿನ ಕಾರ್ಯಕ್ರಮದಲ್ಲಿ ತನಗೆ ಉಪಸ್ಥಿತರಿರಲು ಅಸಾಧ್ಯವಾದ್ದ ರಿಂದ ಹೆಸರು ಕೈಬಿಡುವಂತೆ ಸ್ವತಃ
ಶಾಸಕರೇ ತಿಳಿಸಿದ್ದರಿಂದ ಅಂತೆಯೇ ನಡೆದುಕೊಂಡಿದ್ದೆವು. ಹೆಸರು ಕೈಬಿಟ್ಟದ್ದಕ್ಕೆ ಅನ್ಯ ಕಾರಣವಿರಲಿಲ್ಲ. ಆದರೆ
ಸಮ್ಮೇಳನ ರದ್ದುಗೊಳಿಸುವುದನ್ನು ಹಿಂದು ವಿರೋಧಿ ನೀತಿಯ ಭಾಗವಾಗಿ ಅಳವಡಿಸಿಕೊಳ್ಳಲಾಗಿದೆ ಎಂದು
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next