Advertisement

ಹೊಲದ ದಾರಿ ಸಮಸ್ಯೆ ಇತ್ಯರ್ಥಕ್ಕೆ ಕಂದಾಯ ಸಚಿವರ ಸ್ಪಂದನೆ

02:39 PM Apr 06, 2022 | Shwetha M |

ವಿಜಯಪುರ: ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಶೀಘ್ರದಲ್ಲಿ ತಹಶೀಲ್ದಾರರಿಗೆ ಅನುಭೋಗದ ಹಕ್ಕಿನಡಿ ದಾರಿ ಮಾಡಿ ಕೊಡುವ ಅಧಿಕಾರವನ್ನು ವಹಿಸಿಕೊಡುವುದಾಗಿ ಕಂದಾಯ ಸಚಿವ ಆರ್‌. ಅಶೋಕ ಭರವಸೆ ನೀಡಿದ್ದಾರೆ.

Advertisement

ಅಖಂಡ ಕರ್ನಾಟಕ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ರೈತರು ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಕಂದಾಯ ಸಚಿವ ಆರ್‌.ಅಶೋಕ, ರೈತರ ಬೇಡಿಕೆಯನ್ನು ಸಹಾನುಭೂತಿಯಂದ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತರು ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ತೀವ್ರವಾಗುತ್ತಿದೆ. ದಾರಿ ಇಲ್ಲದ ಕಾರಣ ಜಮೀನುಗಳಿಗೆ ಮಳೆಯಾದರೂ ಬಿತ್ತನೆಗಾಗಿ ಹೊಲಕ್ಕೆ ಹೋಗುವುದು ತೊಂದರೆಯಾಗುತ್ತಿದೆ. ಆದ್ದರಿಂದ ಹಳ್ಳಿಗಳಲ್ಲಿ ರೈತರ ಮಧ್ಯೆ ಹೊಡೆದಾಟಗಳು, ಪೊಲೀಸ್‌ ಪ್ರಕರಣಗಳು, ಕೋರ್ಟ್‌ ಕಚೇರಿ ಅಲೆದಾಟಗಳು ನಡೆಯುತ್ತಿವೆ ಎಂದು ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಮಳೆಯಾದರೂ ದಾರಿಯ ಸಮಸ್ಯೆಯ ಕಾರಣ ಜಮೀನು ಹೂಳು ಬಿದ್ದು ರೈತ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೊಲಗಳಿಗೆ ಹೋಗುವ ದಾರಿ ಸಮಸ್ಯೆ ಇತ್ಯರ್ಥ ಅಧಿಕಾರ ಈ ಹಿಂದೆ ತಹಶೀಲ್ದಾರರಿಗೆ ಇತ್ತು. ಹೀಗಾಗಿ ಮೊದಲಿದ್ದಂತೆ ಹೊಲದ ದಾರಿ ಸಮಸ್ಯೆ ಪರಿಹಾರದ ಅಕಾರವನ್ನು ತಹಶೀಲ್ದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಇದಲ್ಲದೇ ರಾಜ್ಯಾದ್ಯಂತ ಜಮೀನುಗಳನ್ನು ಪುನಃ ಮೋಜಣಿ ಮಾಡಿಸಿ ಹದ್ದಿ ಗುರುತಿಸಬೇಕು. ಇದರಿಂದ ಖರಾಬು ಕ್ಷೇತ್ರ ಗುರುತಿಸಿ ಅದನ್ನೇ ವಹಿವಾಟು ದಾರಿ ಎಂದು ಪರಿಗಣಿಸಬೇಕು. ಖರಾಬು ಕ್ಷೇತ್ರವಿಲ್ಲದ ಜಮೀನುಗಳಲ್ಲಿ ತಹಶೀಲ್ದಾರರು ಇಜಿಲೆಂಟ್‌ ಕಾಯ್ದೆ ಒಳಗಡೆ ದಾರಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರೈತರ ಸಮಸ್ಯೆ ಆಲಿಸಿದ ಕಂದಾಯ ಸಚಿವ ಆರ್‌.ಅಶೊಕ, ರೈತರ ಜಮೀನು ದಾರಿ ಸಮಸ್ಯೆ ಸರ್ಕಾರದ ಗಮನಕ್ಕಿದ್ದು ಇದು ರಾಜ್ಯಾದ್ಯಂತ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಆದ್ದರಿಂದ ಶೀಘ್ರದಲ್ಲಿ ದಾರಿ ಸಮಸ್ಯೆ ಇತ್ಯರ್ಥಪಡಿಸಲು ಜಮೀನು ಮೋಜಣಿ ಮಾಡಿಸುವುದಾಗಿ ಭರವಸೆ ನೀಡಿದರು. ಸದಾಶಿವ ಬರಟಗಿ, ಹೊನಕೇರೆಪ್ಪ ತೆಲಗಿ, ಚಂದ್ರಾಪ ಹಿಪ್ಪಲಿ, ಶಕೀಲದಾರ ಕರ್ಜಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next