Advertisement

ಅಧಿಕಾರಿಗಳ ನಿರ್ಲಕ್ಷ್ಯ : ಮಗಳ ವಿದ್ಯಾಭ್ಯಾಸದ ದಾಖಲೆಗಾಗಿ ಮಳೆಯಲ್ಲೇ ತಂದೆಯ ಪ್ರತಿಭಟನೆ

12:30 PM Sep 03, 2020 | sudhir |

ಮುಳಬಾಗಿಲು: ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗಳ ಬಿಎಸ್‌ಸಿ ಕೃಷಿ ವ್ಯಾಸಂಗಕ್ಕೆ ಅಗತ್ಯ ವ್ಯವಸಾಯಗಾರರ ಪತ್ರ ಸಿಗದೆ ಶಿಕ್ಷಣದಿಂದ ವಂಚಿತಗೊಂಡಿದ್ದು, ಮನನೊಂದ ತಂದೆಯೊಬ್ಬ ಕಣ್ಣೀರು ಹಾಕುತ್ತ, ಮಳೆಯಲ್ಲಿಯೇ ವಿಷ ಸೇವಿಸುವುದಾಗಿ ಪ್ರತಿಭಟನೆ ನಡೆಸಿದ ದಾರುಣ ಘಟನೆ ನಗರದಲ್ಲಿ ನಡೆಯಿತು.

Advertisement

ನಗರದ ಮುತ್ಯಾಲಪೇಟೆ ಸ್ಟಾಂಪ್‌ ವೆಂಡರ್‌ ವೆಂಕಟಾಚಲಪತಿ ತನ್ನ ಪುತ್ರಿ ಚಂದನಳನ್ನು ಬಿಎಸ್ಸಿ ಕೃಷಿ ವ್ಯಾಸಂಗಕ್ಕೆ ಕಳುಹಿಸಬೇಕೆಂದು ವ್ಯವಸಾಯಗಾರರ ಪತ್ರಕ್ಕಾಗಿ ವಂಶವೃಕ್ಷ ಮತ್ತು ವಾಸಸ್ಥಳ ಪತ್ರಕ್ಕಾಗಿ ಆ.13 ರಂದು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿನಿತ್ಯ
ಕಚೇರಿಗೆ ಅಲೆದಾಡಿದರೂ ಕೊನೆಗೆ ಉಪತಹಶೀಲ್ದಾರ್‌ ನಾಗಮಣಿ ಗುರುತಿನ ಚೀಟಿ ಲಗತ್ತಿಸಿಲ್ಲವೆಂದು ಸಬೂಬು ನೀಡಿ ಅರ್ಜಿ ಸೆ.1 ರಂದು ರದ್ದುಗೊಳಿಸಿದ್ದಾರೆ.

ನಿಗದಿತ ಕಾಲಾವಧಿಯಲ್ಲಿ ದಾಖಲೆಗಳ ಸಿಗದೇ ತನ್ನ ಮಗಳ ಬಿಎಸ್‌ಸಿ ಕೃಷಿ ವ್ಯಾಸಂಗದ ಕನಸು ನುಚ್ಚುನೂರಾಗಿದೆ. ಇದರಿಂದ ಬೇಸತ್ತ ತಂದೆಯು ತಹಶೀಲ್ದಾರ್‌ ರಾಜಶೇಖರ್‌ ಬಳಿ ತನ್ನ ಮನದಾಳ ತೋಡಿಕೊಂಡಾಗ ಮತ್ತೂಂದು ಅರ್ಜಿ ಸಲ್ಲಿಸಿ ಇತರೇ ತಾಂತ್ರಿಕ ಶಿಕ್ಷಣಕ್ಕಾದರೂ (ಸಿಇಟಿಗೆ) ಅನು ಕೂಲವಾದೀ ತೆಂದು ತಿಳಿಸಿ ಕೂಡಲೇ ಅರ್ಜಿಯಾನು ಸಾರ ದಾಖಲೆ ನೀಡು ವಂತೆ ಸ್ವತಃ ತಹಶೀಲ್ದಾರ್‌ ಅವರೇ ಉಪ ತಹಶೀಲ್ದಾರ್‌ಗೆ
ಸೂಚಿಸಿದ್ದರು.ವಂಶವೃಕ್ಷ ಮತ್ತು ವಾಸಸ್ಥಳ ಪತ್ರ ನೀಡಲು ಒಪ್ಪದೇ ಹೋದಾಗ ವಿದ್ಯಾರ್ಥಿನಿಯ ತಂದೆ ಅಳುತ್ತ, ಜೋರು ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದರು. ಮುಖಂಡರು ರೊಚ್ಚಿಗೆದ್ದಿದ್ದರಿಂದ ದಾಖಲೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next