Advertisement

ಶಿಡ್ಲಘಟ್ಟ: ಕಂದಾಯ ಇಲಾಖೆಯಲ್ಲಿಸಿಬ್ಬಂದಿ ಕೊರತೆ : ಕೆಲಸಕಾರ್ಯಗಳಿಗೆ ಜನಸಾಮಾನ್ಯರ ಪರದಾಟ

11:11 AM Dec 05, 2020 | sudhir |

ಚಿಕ್ಕಬಳ್ಳಾಪುರ: ಜಿಲ್ಲೆಯ ರೇಷ್ಮೆ ನಗರ ಎಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಕೆಲಸ ಕಾರ್ಯಗಳಿಗಾಗಿ ಅಲೆದಾಡುವಂತಾಗಿದ್ದು, ನೌಕರರು ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಬಂದೂದಗಿದೆ.

Advertisement

ನಗರದಲ್ಲಿರುವ ಮಿನಿ ವಿಧಾನಸೌಧ (ಕಂದಾಯ ಇಲಾಖೆ) ಆಶ್ರಯಿಸಿಕೊಂಡು ಪ್ರತಿನಿತ್ಯ ನೂರಾರು ಮಂದಿ ವಿವಿಧ ರೀತಿಯ
ಸರ್ಕಾರಿ ಸೌಲಭ್ಯ ಪಡೆಯಲು ಬರುತ್ತಾರೆ. ಆದರೆ ಇಲ್ಲಿ ಅಗತ್ಯ ಸಿಬ್ಬಂದಿ ಮತ್ತು ಅಧಿಕಾರಿ ಗಳ ಕೊರತೆಯಿಂದ ಒಂದೆಡೆ ಸಾರ್ವಜನಿಕರ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದ್ದರೆ, ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಅಧಿಕ ಕೆಲಸದ
ಒತ್ತಡದಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.

ಅವಧಿಯೊಳಗೆ ಮುಗಿಯಲ್ಲ: ತಾಲೂಕು ಕಚೇರಿಯಲ್ಲಿ ಸಾಮಾನ್ಯವಾಗಿ ಜಮೀನುಗಳಿಗೆ ಸಂಬಂಧಿಸಿದ ವಿಚಾರಗಳನ್ನು
ಮುಂದಿಟ್ಟು ಕೊಂಡು ತಾಲೂಕಿನ ವಿವಿಧ ಭಾಗಗಳಿಂದ ರೈತರು,ಕೃಷಿಕಾರ್ಮಿಕರು ಮತ್ತು ನಾಗರಿಕರು ಆಗಮಿಸುತ್ತಾರೆ.
ಆದರೆ ಕಂದಾಯ ಇಲಾಖೆಯಲ್ಲಿ ಸುಮಾರು ಅರ್ಧಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿ ಕರಕೆಲಸ
ಕಾರ್ಯಗಳು ನಿಗದಿತ ಅವಧಿಯೊಳಗೆ ಆಗದೆ ವಿಳಂಬವಾಗುತ್ತಿವೆ.

ಕೆಲವೊಮ್ಮೆ ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ನಾಗರಿಕರ ನಡುವೆ ವಾಗ್ವಾದ ನಡೆದಿರುವ
ಪ್ರಸಂಗಗಳು ಸಹ ನಡೆದಿವೆ.

41 ಹುದ್ದೆಗಳು ಖಾಲಿ: ಶಿಡ್ಲಘಟ್ಟ ತಾಲೂಕು ಕಚೇರಿಗೆ 94 ಹುದ್ದೆ ಮಂಜೂರಾಗಿದೆ. ಆದರೇ ಇನ್ನೂ 41 ಹುದ್ದೆಗಳು ಖಾಲಿಯಿದ್ದು ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಖಾಲಿ ಇರುವ 41 ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯಾಭಾರ ನಿಭಾಯಿಸುವಂತಾಗಿದೆ. ತಹಶೀಲ್ದಾರ್‌ ಗ್ರೇಡ್‌-1 ಮತ್ತು2 ಹುದ್ದೆಗಳು ಭರ್ತಿಯಾಗಿದೆ. ಆದರೆಶಿರಸ್ತೇದಾರ/ಉಪತಹಶೀಲ್ದಾರ್‌
ಶ್ರೇಣಿಯ 3 ಹುದ್ದೆಗಳು ಖಾಲಿಯಿದ್ದು, ಸಾರ್ವಜನಿಕರ ಕೆಲಸ ನಿಭಾಯಿ ಸಲು ತೊಡಕಾಗಿದೆ. 48 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಮಂಜೂರಾಗಿ ದ್ದರೂ ಸಹ ಇನ್ನೂ 19 ಖಾಲಿಯಾಗಿವೆ.

Advertisement

ಇದರಿಂದ ಸರ್ಕಾರದ ಯೋಜನೆಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನ ಗೊಳಿಸಲು ಇರುವ ಅಧಿಕಾರಿಗಳು ಮತ್ತು
ಸಿಬ್ಬಂದಿ ಹೆಚ್ಚುವರಿಯಾಗಿ ಸೇವೆ ಸಲ್ಲಿಸುವಂತಾಗಿದೆ.

ತಾಲೂಕುಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳಕೊರತೆ ಇರುವುದು ಸತ್ಯ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಸೇವೆ ಯಲ್ಲಿ ತೊಂದರೆ ಆಗದಂತೆಕ್ರಮಕೈಗೊಳ್ಳಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಿದರೆ ಕೆಲಸ ಕಾರ್ಯಗಳು ಬೇಗ ಆಗಲಿವೆ.
– ಕೆ.ಅರುಂಧತಿ, ತಹಶೀಲ್ದಾರ್‌ ಶಿಡ್ಲಘಟ್ಟ

ಶಿಡ್ಲಘಟ್ಟ ತಾಲೂಕುಕಚೇರಿ ಸಹಿತಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದು,ಕೆಲಸ  ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಗಗೊಳಿಸಿರುವ ಅವಧಿಯಲ್ಲಿಕಡತ ವಿಲೇವಾರಿಗೆ ವಿಳಂಬವಾಗುತ್ತದೆ. ಹುದ್ದೆ ಭರ್ತಿ ಮಾಡಲು ಹಿರಿಯ ಅಧಿಕಾರಿಗಳ
ಗಮನಕ್ಕೆ ತರಲಾಗಿದೆ.
– ಮಂಜುನಾಥ್‌, ಅಧ್ಯಕ್ಷ, ಕಂದಾಯ ಇಲಾಖೆ ನೌಕರರ ಸಂಘ ಶಿಡ್ಲಘಟ್ಟ

ಶಿಡ್ಲಘಟ್ಟ ತಾಲೂಕುಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು, ರೈತರುಕೆಲಸ ಕಾರ್ಯಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾ ಗಿದೆ.ಕೆಲವೊಮ್ಮೆ ತಾಂತ್ರಿಕ ಅಡಚಣೆಯಿಂದಕಿರಿಕಿರಿ ಅನುಭವಿಸುವಂತಾಗಿದೆ. ಸರ್ಕಾರಕೂಡಲೇಕಂದಾಯ ಇಲಾಖೆಯಲ್ಲಿಖಾಲಿ ಇರುವ ಹುದ್ದೆ ಭರ್ತಿಗೊಳಿಸಬೇಕು.
– ಕದಿರಿನಾಯಕನಹಳ್ಳಿ ನಾರಾಯಣಸ್ವಾಮಿ, ಹಿರಿಯ ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next