ರಾಣಿಬೆನ್ನೂರು: ರೈಲ್ವೆ ಖಾಸಗೀಕರಣದಿಂದ ಆದಾಯ ಕುಸಿತವಾಗುವುದರ ಜೊತೆಗೆ ಗುಣಮಟ್ಟದ ಮೇಲೆ ಅಡ್ಡ ಪರಿಣಾಮ ಉಂಟಾಗಲಿದೆ. ಸಾರ್ವಜನಿಕರಿಗೆ ಟಿಕೆಟ್ ಸೇರಿದಂತೆ ಇನ್ನಿತರ ಸೌಲಭ್ಯಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ಕಾರ್ಯದರ್ಶಿ ವಿಜಯಕುಮಾರ ಹೇಳಿದರು.
ನಗರದ ರೈಲ್ವೆ ನಿಲ್ದಾಣದ ಬಳಿ ಏರ್ಪಡಿಸಲಾಗಿದ್ದ ರೈಲ್ವೆ ಖಾಸಗೀ ಕರಣದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಪ್ರಯಾಣಿಕರ ಸುರಕ್ಷತೆ ಯನ್ನು ಪರಿಗಣಿಸದೇ ದೇಶದ ಭವಿಷ್ಯಕ್ಕೆ ಮಾರಕವಾದ ಖಾಸಗೀಕರಣ ಮಾಡಲು ಹೊರಟಿದೆ.
ಖಾಸಗಿಕರಣದಿಂದ ರೈಲ್ವೆ ಉದ್ಯೋಗಿಗಳು ಕೆಲಸ ಕಳೆದು ಕೊಳ್ಳಬೇಕಾಗುತ್ತದೆ. ಇದಲ್ಲದೇ, ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಸಿಗುವ ಮಾರ್ಗಗಳಲ್ಲಿ ರೈಲ್ವೆ ಸಂಚರಿಸುವಂತಾಗುತ್ತದೆ. ಪ್ರಯಾಣಿಕರ ಕುಂದು ಕೊರತೆಗಳಿಗೆ ಸ್ಪಂದನೆ ಇಲ್ಲವಾಗುತ್ತದೆ. ಆದ್ದರಿಂದ, ಕೇಂದ್ರ ಸರಕಾರ ರೇಲ್ವೆಯನ್ನು ಖಾಸಗಿಕರಣ ಮಾಡಲು ಅವಕಾಶ ನೀಡಬಾರದು. ಇದಕ್ಕೆ ರೈಲ್ವೆಯ ಸಮಸ್ತ ಉದ್ಯೋಗಿಗಳು ಬೆಂಬಲ ನೀಡಬೇಕು ಎಂದರು.
ಇದನ್ನೂ ಓದಿ:ರಾಷ್ಟ್ರದ ಆರ್ಥಿಕ ಪ್ರಗತಿಗೆ ಕೈಜೋಡಿಸಿ: ನಾಡಗೌಡ್ರ
ಮಾಲತೇಶ ಟಿ.ಸಿ. ಅಧ್ಯಕ್ಷತೆ ವಹಿಸಿದ್ದರು. ಬಸವರಾಜಕೆ.ಸಿ., ನಾಗರಾಜ ಹಾರೋಗೊಪ್ಪ, ರವಿ ಗೋಣೆಪ್ಪನವರ, ರಾಮಣ್ಣ ಲಮಾಣಿ, ಸಂತೋಷ ಯಾದವಾಡ, ಕೆ. ಮಂಜುನಾಥ, ಚಂದ್ರು ಲಮಾಣಿ, ಡೇವಿಡ್‌ಎನ್., ಸಂತೋಷ ಸಿದ್ಧನಕೋಟೆ ಮತ್ತಿತತರಿದ್ದರು.