Advertisement
ಆದರೆ, ಆ ಟವರ್‌ಗಳಿಂದ ಈವರೆಗೆ ಬಿಬಿಎಂಪಿಗೆ ಯಾವುದೇ ಆದಾಯ ಬಂದಿಲ್ಲ. ಹೀಗಾಗಿ ಟವರ್‌ಗಳಿಂದ ತೆರಿಗೆ ವಸೂಲಿಗೆ ಮುಂದಾಗಿರುವ ಬಿಬಿಎಂಪಿ ಪ್ರತಿ ಟವರ್ ಅಳವಡಿಕೆಗೆ 50 ಸಾವಿರ ರೂ. ಅಳವಡಿಕೆ ಶುಲ್ಕ ಹಾಗೂ ಪ್ರತಿ ವರ್ಷ 12 ಸಾವಿರ ತೆರಿಗೆ ವಸೂಲಿ ಮಾಡಲು ಉದ್ದೇಶಿಸಿದೆ. ಈ ಸಂಬಂದ ನಿರ್ಣಯ ಕೈಗೊಂಡು ಆಯುಕ್ತರಿಗೆ ಕಳುಹಿಸಲಾಗಿದೆ, ಆಯುಕ್ತರಿಂದ ಅಂತಿಮ ಆದೇಶ ಹೊರಬಂದ ನಂತರ ಟವರ್‌ಗಳಿಂದ ಶುಲ್ಕ ವಸೂಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
ಮೊಬೈಲ್ ಟವರ್ ಅಳವಡಿಕೆ ಮಾಡಿಕೊಂಡಿರುವ ಸಂಸ್ಥೆಗಳಿಗೂ ಟವರ್‌ಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ. ಅದರಂತೆ ಇಂಡಸ್ ಮತ್ತು ರಿಲಾಯನ್ಸ್ ಜಿಯೋ ಸಂಸ್ಥೆಗಳು ಟವರ್‌ಗಳ ಮಾಹಿತಿಯನ್ನು ಬಿಬಿಎಂಪಿಗೆ ನೀಡಿವೆ. ಅದರಂತೆ ಇಂಡಸ್ ಸಂಸ್ಥೆ 2,300 ಹಾಗೂ ರಿಲಾಯನ್ಸ್ ಜಿಯೋ ಸಂಸ್ಥೆ 1 ಸಾವಿರ ಟವರ್ ಅಳವಡಿಸಿರುವುದಾಗಿ ತಿಳಿಸಿವೆ. ಈ ಮಧ್ಯೆ ಅಕ್ರಮ ಮೊಬೈಲ್ ಟವರ್‌ಗಳ ಪತ್ತೆಗಾಗಿ ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.