Advertisement

ಕಂದಾಯ ಅರ್ಜಿಗಳು ಸ್ಥಳದಲ್ಲೇ ವಿಲೇವಾರಿ

02:48 PM Mar 20, 2022 | Team Udayavani |

ಬೀದರ: ರಾಜ್ಯ ಸರ್ಕಾರದ ಮಹತ್ವದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮ ಶನಿವಾರ ಹುಲಸೂರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ನಡೆಯಿತು.

Advertisement

ಜನರ ಮನೆ ಬಾಗಿಲಿಗೆ ಆಡಳಿತ ಎನ್ನುವ ಆಶಯದಡಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಗಡಿ ತಾಲೂಕಿನ ಗ್ರಾಮವಾದ ಹಾಲಹಳ್ಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರಿಂದ ಮನವಿಗಳನ್ನು ಸ್ವೀಕರಿಸಿ ಜನತೆಗೆ ಸ್ಪಂದಿಸಿದರು.

ಬಿಸಿಲಿನ ತಾಪದ ಮಧ್ಯೆಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿ, ಸಾರ್ವಜನಿಕರು ಹಲವಾರು ಮನವಿಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪ್ರತಿಕ್ರಿಯಿಸುವ ಈ ಕಾರ್ಯಕ್ರಮವು ಅತ್ಯಂತ ಮಹತ್ವ ಪೂರ್ಣದ್ದಾಗಿದೆ. ಜನತೆಗೆ ಸ್ಪಂದನೆ ನೀಡುವಂತಹ ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಇನ್ನೂ ಅರ್ಥಪೂರ್ಣವಾಗಿ ನಡೆಸಲಾಗುವುದು ಎಂದರು.

ಹಾಲಹಳ್ಳಿಯ ಗ್ರಾಮ ವಾಸ್ತವ್ಯದ ಕಾರ್ಯಕ್ರಮದಲ್ಲಿ ಸ್ವೀಕೃತವಾದ 132 ಅರ್ಜಿಗಳ ಪೈಕಿ 92 ಅರ್ಜಿಗಳು ವಸತಿಗೆ ಸಂಬಂಧಿಸಿವೆ. ಸರ್ಕಾರ ನೀಡುವ ಗುರಿಯನುಸಾರ ಹಂತ ಹಂತವಾಗಿ ಆದ್ಯತೆ ಮೇರೆಗೆ ಮನೆಗಳ ಮಂಜೂರಾತಿಗೆ ಒತ್ತು ಕೊಡಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿಗೊಳಿಸಲಾಗಿದೆ ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ಜಿಲ್ಲಾಧಿ ಕಾರಿಗಳು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಕಾಳಜಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇದೆ ರೀತಿ ಅಧಿಕಾರಿಗಳು ಜನತೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

Advertisement

ಆಯುಕ್ತ ರಮೇಶ ಕೋಲಾರ, ಐಎಎಸ್‌ ಪ್ರೋಷನರಿ ಅಧಿಕಾರಿ ಕೀರ್ತನಾ, ಹುಲಸೂರು ತಹಶೀಲ್ದಾರ್‌ ಶಿವಾನಂದ ಮೇತ್ರೆ ಮಾತನಾಡಿದರು. ಸಿಪಿಐ ಗೋಪಾಲ ನಾಯಕ, ಸಿಡಿಪಿಓ ಶ್ರೀಕಾಂತ, ಜೆಸ್ಕಾಂ ಅಧಿಕಾರಿ ಗಣಪತಿ, ಪಿಆರ್‌ಇ ಶಿವರಾಜ ಪಲೇರಿ, ಪಶು ವೈದ್ಯಾಧಿಕಾರಿ ಡಾ| ರವೀಂದ್ರ, ಕೃಷಿ ಅಧಿಕಾರಿ ಮಾರ್ಥಂಡ, ಸಮಾಜ ಕಲ್ಯಾಣಾ ಧಿಕಾರಿ ಲಿಂಗರಾಜ ಅರಸ್‌, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಶೈಲ ಖಾಶಾಪೂರ, ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂತೋಷ ತಾಂಡೂರೆ, ಬಿಇಓ ಅಂಬಾದಾಸ್‌ ಜಮಾದಾರ ಇನ್ನಿತರರಿದ್ದರು.

ಈ ಸಂದರ್ಭದಲ್ಲಿ ಕೆಲವು ಫಲಾನುಭವಿಗಳಿಗೆ ಸ್ಥಳದಲ್ಲೇ ಪಿಂಚಣಿ, ಆದಾಯ ಮತ್ತು ಜಾತಿ ಪ್ರಮಾಣ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಆಯುಷ್ಮಾನ ಆರೋಗ್ಯ ಕಾರ್ಡುಗಳನ್ನು ಕೂಡ ಸ್ಥಳದಲ್ಲೇ ಮುದ್ರಿಸಿ ವಿತರಿಸಿದ್ದು ವಿಶೇಷವಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next