ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮೂವರು ಮಹಿಳೆಯರನ್ನು ಬಂಧಿಸಿ, ಅವರ ಖಾಸಗಿ ವಿಡಿಯೋಗಳನ್ನು ಹಾಗೂ ತನಿಖೆಗೆ ಸಂಬಂಧಿಸಿದ ವಿಡಿಯೋಗಳನ್ನು ಪೊಲೀಸರು ಬಿಡುತ್ತಿರುವುದು ಅಹಸ್ಯ ಎನಿಸುತ್ತದೆ ಎಂದು ನಟಿ ಪಾರುಲ್ ಯಾದವ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪಾರುಲ್ ಯಾದವ್, ದೊಡ್ಡ ರಾಜಕಾರಣಿಗಳು ಮತ್ತು ನಟರ ಹೆಸರು ಆಗಾಗ ಕೇಳಿ ಬರುತ್ತಿದ್ದರೂ ಅವರನ್ನು ಪೊಲೀಸರು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಜತೆಗೆ ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ನ್ಯೂಸ್ ಚಾನೆಲ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿರುವ ಪಾರುಲ್, ವಿಡಿಯೊವೊಂದರಲ್ಲಿ ಮಹಿಳಾ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ಸಂಜನಾರನ್ನು ಸೆರೆ ಹಿಡಿಯುತ್ತಿರುವುದು ಗೊತ್ತಾಗುತ್ತಿದೆ. ಇದು ಯಾಕೆ? ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಸಂಸ್ಥೆ ಆಗಿರಬೇಕು ಎಂದು ಪಾರುಲ್ ಯಾದವ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: “ ಮಾಲು ಬೇಕು ಪ್ಲೀಸ್” ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು