ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಉದಯಪುರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡ ಗುದ್ದಲಿ ಪೂಜೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಉದ್ಘಾಟನೆಗಾಗಿ ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ತಾಯಿ, ತಂಗಿಯೊಂದಿಗೆ ಚಾಪರ್‌ನಲ್ಲಿ ಆಗಮಿಸಿ ಪಟ್ಟಣದಲ್ಲಿಯೇ ಅವರಿಬ್ಬರನ್ನು ಬಿಟ್ಟು ಉದಯಪುರಕ್ಕೆ ತೆರಳಿದರು.
ಶುಕ್ರವಾರ ಶೃಂಗೇರಿಗೆ ತೆರಳಲು ಬೆಂಗಳೂರಿ ನಿಂದ ತಾಯಿ ಚನ್ನಮ್ಮ ಹಾಗೂ ಸಹೋದರಿ ಶೈಲಜಾ ಅವರೊಂದಿಗೆ ಚಾಪರ್‌ನಲ್ಲಿ ಆಗಮಿಸಿದ್ದರು. ಉದಯಪುರದಲ್ಲಿ ಸರ್ಕಾರಿ ಕಾರ್ಯಕ್ರಮ ಇದುದ್ದರಿಂದ ಜಿಲ್ಲಾ ಮಂತ್ರಿ ಆಗಮಿ ಸುವ ವಿಷಯ ತಿಳಿದ ತಾಲೂಕು ಆಡಳಿತ ಹೆಲಿಪ್ಯಾಡ್ ನಿರ್ಮಾಣ ಮಾಡಿದರು.
ಹೆಲಿಪ್ಯಾಡಿನಲ್ಲಿ ವಿಮಾನ ನಿಲ್ಲಿಸಿ ಅಲ್ಲಿಂದ ಉದಯಪುರಕ್ಕೆ ತೆರಳಿದರು. ಮಗ ಬರುವವರಗೆ ತಾಯಿ ಚನ್ನಮ್ಮ ಚಾಪರ್‌ನಲ್ಲಿ ಕುಳಿತು ಕಾಯು ತ್ತಿದ್ದರು. ಇದೇ ವಿಮಾನದಲ್ಲಿ ಸಚಿವರ ಸಹೋ ದರಿ ಶೈಲಜಾ ಇದ್ದರು. ಅವರು ತಮ್ಮ ಅಣ್ಣ ಬರುವವರೆಗೆ ಮೋಬೈಲ್ ಹಿಡಿದರು ಸುಮಾರು ಅರ್ಧಗಂಟೆ ಕಾಲ ಕಳೆದರು.
ಉದಯಪುರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ದಂಡಿಗನಹಳ್ಳಿ ಹೋಬಳಿಯ ಅನೇಕ ಗ್ರಾಮಗಳ ಫಲಾನುಭವಿಗಳಿಗೆ ಮಾಶಾಶನ ಹಕ್ಕು ಪತ್ರ ವಿತರಣೆ ಮಾಡಿದರು. ಸರ್ಕಾರಿ ಕೈಗಾರಿಕಾ ತರಬೇತಿ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು, ಪ್ರಥಮ ದರ್ಜೆ ಕಾಲೇಜಿನ ಕೊಠಡಿ ಉದ್ಘಾಟಿಸಿದರು.
ನಂತರ ಪಟ್ಟಣದ ಹೆಲಿಪ್ಯಾಡ್‌ಗೆ ಹಿರಿಯಪುತ್ರ ಡಾ. ಸೂರಜ್ ಅವರೊಂದಿಗೆ ರೇವಣ್ಣ ಆಗಮಿಸಿ ಚಾಪರ್‌ನಲ್ಲಿ ಶೃಂಗೇರಿಗೆ ತೆರಳಿದರು. ಹಾಸನ ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮಿ,ಎಪಿಎಂಸಿ ನಿರ್ದೇಶಕ ರಂಗಸ್ವಾಮಿ ಇದ್ದರು.