Advertisement

“ಕೈ’-ಜೆಡಿಎಸ್‌ಗೆ ಸಂಕಷ್ಟ ತಂದ ರೇವಣ್ಣ “ಸ್ಪೀಚ್‌’

01:16 AM Mar 13, 2019 | |

ಬೆಂಗಳೂರು: ಗಂಡ ಸತ್ತು ತಿಂಗಳಾಗಿಲ್ಲ ಆಗಲೇ ಸುಮಲತಾ ಚುನಾವಣೆಗೆ ಬಂದಿದ್ದಾರೆ ಎಂಬ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಮಾತು ಜೆಡಿಎಸ್‌ ಅಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾ ರದ ಪಾಲುದಾರ ಪಕ್ಷ ಕಾಂಗ್ರೆಸ್‌ಗೂ ತೀವ್ರ ಇರಿಸು ಮುರಿಸು ಉಂಟು ಮಾಡಿದೆ.ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರೇವಣ್ಣ ಅವರ ಮಾತು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರಿಗೆ ನುಂಗಲಾರದ ತುತ್ತಾಗಿದ್ದು, ಕೆಲವರು ಆ ರೀತಿ ಮಾತನಾಡಬಾರದಿತ್ತು ಎಂದು ತೇಪೆ ಹಾಕಲು ಪ್ರಯತ್ನಿಸಿದರೆ ಮತ್ತೆ ಕೆಲವರುಸಮರ್ಥಿಸಿಕೊಳ್ಳಲು ಪರದಾಡು ವಂತಾಗಿದೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ,ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌,ಮಂಡ್ಯ ಜೆಡಿಎಸ್‌ ಸಂಭವನೀಯ ಅಭ್ಯರ್ಥಿ ನಿಖೀಲ್‌ ಕ್ಷಮೆಯಾಚನೆ ಮಾಡಿದರೂ ರೇವಣ್ಣ ನಾನು ತಪ್ಪು ಅಭಿಪ್ರಾಯ ಬರುವ ಮಾತನಾಡಿಲ್ಲ. ಹಿಂದೂ ಸಂಸ್ಕೃತಿ ಬಗ್ಗೆ ಹೇಳಿದ್ದೇನೆ ಅಷ್ಟೆ. ನಾನು ಕ್ಷಮೆ ಕೇಳಲ್ಲ ಎಂದುಹೇಳಿದ್ದಾರೆ.ಈ ಹೇಳಿಕೆಯೂ ಪಕ್ಷದಲ್ಲೇ ಸಾಕಷ್ಟುಬೇಸರಕ್ಕೂ ಕಾರಣವಾಗಿದೆ ಎಂದು
ಹೇಳಲಾಗಿದೆ.

ಸುಮಲತಾ ಬಗ್ಗೆ ರೇವಣ್ಣ ನೀಡಿರುವ ಹೇಳಿಕೆ ದುರಾದೃಷ್ಟಕರ. ರಾಜಕೀಯಕ್ಕೆ ಮಹಿಳೆ ಯಾವ ಸಂದರ್ಭದಲ್ಲಿ ಬರಬೇಕು ಎನ್ನುವುದು ಅವರ ಹಕ್ಕು. ರಾಜಕೀಯಕ್ಕೆ ಬರುವಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸುಮಲತಾಗೆ ಬಿಟ್ಟಿದ್ದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.
● ಲಕ್ಷ್ಮೀ ಹೆಬ್ಟಾಳ್ಕರ್‌, ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಶಾಸಕಿ.

ಪ್ರತಾಪ ಸಿಂಹ ಮಾಡಿದ್ದ ಎಡವಟ್ಟು
ಸಂಸದ ಪ್ರತಾಪಸಿಂಹ ಅವರು ಈ ಹಿಂದೆ ಎಸ್‌.ಎಸ್‌.ಮಹದೇವಪ್ರಸಾದ್‌ ಅವರು ನಿಧನರಾಗಿ ಉಪಚುನಾವಣೆಯಲ್ಲಿ ಅವರ ಪತ್ನಿ ಕಣಕ್ಕಿಳಿದಾಗ “ಗೀತಾ ಅವರು ಕ್ಲಬ್‌ ಹಾಗೂ ಬಾರ್‌ ಗಳಲ್ಲಿ ಕುಡಿಯುತ್ತಾ ಕೂರುತ್ತಾರೆ. ಅವರಿಗೆ ಮತ ಹಾಕಿದರೆ ಏನು ಪ್ರಯೋಜನ?. ಪತಿ ವಿಧಿವಶರಾಗಿ ಸ್ವಲ್ಪ ದಿನವೂ ಆಗಿಲ್ಲ, ಆಗಲೇ ಚುನಾವಣೆಗೆ ಸ್ಪರ್ಧಿಸಿದ್ದಾರೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸುಮಲತಾ ಒಬ್ಬ ಮಹಿಳೆಯಾಗಿ ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಸ್ವಾತಂತ್ರ್ಯ ಅವರಿಗಿದೆ. ಸುಮಲತಾಗೆ ಈಗಿರುವ ಪರಿಸ್ಥಿತಿಯಲ್ಲಿ ಇಡೀ ಸಮಾಜ ಅವರಿಗೆ ಬೆಂಬಲವಾಗಿ ನಿಲ್ಲಬೇಕು.

Advertisement

● ಡಾ. ಪುಷ್ಪಾ ಅಮರನಾಥ್‌, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ.

ಸುಮಲತಾ ರೇವಣ್ಣ ಆಡಿದ ಮಾತು ಟಂಗ್‌ಸ್ಲಿಪ್‌ ಎಂದು ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದ್ದಾರೆ. ಆದರೆ, ಅದು ಟಂಗ್‌ ಸ್ಲಿಪ್‌ ಆಲ್ಲ, ರೇವಣ್ಣ ಅವರ ವ್ಯಕ್ತಿತ್ವವೇ ಸ್ಲಿಪ್‌ ಆಗಿದೆ. ರೇವಣ್ಣ ಕ್ಷಮೆ ಕೇಳಲೂ ಅರ್ಹರಲ್ಲ.
● ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next