Advertisement

ರೇವಾ ವಿವಿ ಸಂಸ್ಥಾಪಕರ ದಿನಾಚರಣೆ

12:24 AM Jan 15, 2020 | Lakshmi GovindaRaj |

ಬೆಂಗಳೂರು: ಯಲಹಂಕದ ರೇವಾ ವಿಶ್ವವಿದ್ಯಾಲಯದ ಸಂಸ್ಥಾಪಕರ ದಿನಾ ಚರಣೆಯನ್ನು ಇತ್ತೀಚೆಗೆ ರೇವಾ ಕ್ಯಾಂಪಸ್‌ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಮತ್ತು ರಾಜಸ್ತಾನ ಸೆಂಟ್ರಲ್‌ ವಿವಿ ಕುಲಾಧಿಪತಿ ಪದ್ಮವಿಭೂಷಣ ಡಾ. ಕೆ. ಕಸ್ತೂರಿ ರಂಗನ್‌ ಹಾಗೂ ತೆಲುಗು ಚಿತ್ರರಂಗದ ಖ್ಯಾತ ಸಿನಿಮಾ ನಿರ್ದೇಶಕ, ನಿರ್ಮಾಪಕ ಡಾ. ಕೆ. ರಾಘವೇಂದ್ರ ರಾವ್‌ ಅವರಿಗೆ ರೇವಾ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿದರೆ, ಕೇಂದ್ರ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸತೀಶ್‌ ರೆಡ್ಡಿ ಅವರಿಗೆ ರೇವಾ ಎಕ್ಸಲೆನ್ಸ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಸತೀಶ್‌ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಡಾ. ಸುಧೀರ್‌ ಕಾಮತ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ನಂತರ ಮಾತನಾಡಿದ ಡಾ. ಕೆ. ಕಸ್ತೂರಿ ರಂಗನ್‌, ವಿಶ್ವವಿದ್ಯಾಲಯ ಪ್ರಗತಿ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಂಶೋಧನೆ ಯತ್ತ ಹೆಚ್ಚು ಒತ್ತು ನೀಡಲು ಸಲಹೆ ನೀಡಿದ್ದಲ್ಲದೆ, ವಿದ್ಯಾರ್ಥಿಗಳು, ವ್ಯವಸ್ಥಾಪಕರು, ಬೋಧಕ, ಬೋಧಕೇತರ ಸಿಬ್ಬಂದಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಸಂಸ್ಥಾಪಕರ ದಿನಾಚರಣೆ ಅಧ್ಯಕ್ಷತೆ ವಹಿಸಿದ್ದ ರೇವಾ ವಿವಿ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಅವರು ಮಾತನಾಡಿ, ಕಲಿಕೆ ನಿರಂತರವಾದದ್ದು, ಕಲಿಯುವುದು ಬಹಳವಿದೆ. ರೇವಾ ಈ ಹಂತಕ್ಕೆ ಬೆಳೆಯುವುದರಲ್ಲಿ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾಲು ಸಾಕಷ್ಟಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next