ಕೆಂಪೇಗೌಡರ ಪ್ರತಿಮೆ; ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ “ಪ್ರಗತಿಯ ಪ್ರತಿಮೆ’ ನ.12ರಂದು ಅನಾವರಣಗೊಂಡಿತು. ಪ್ರಧಾನಿ ಮೋದಿಯ ವರೇ ಇದನ್ನು ಲೋಕಾರ್ಪಣೆ ಗೊಳಿಸಿದರು. ನಗರ ನಿರ್ಮಾತೃವೊಬ್ಬರ ಇಷ್ಟೊಂದು ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದ್ದು ಇದೇ ಮೊದಲು ಎಂಬ ವಿಶ್ವದಾಖಲೆಯನ್ನೂ ಇದು ಬರೆಯಿತು.
108 ಅಡಿ ಎತ್ತರ, 98 ಟನ್ ಕಂಚು, 120 ಟನ್ ಉಕ್ಕು ಬಳಕೆ.
ಆದಿ ಶಂಕರ-ರಾಮಾನುಜ ಪ್ರತಿಮೆ; ಉತ್ತರಾಖಂಡದ ಕೇದಾರನಾಥದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಆದಿ ಶಂಕಾರಾಚಾರ್ಯರ ಪುತ್ಥಳಿ ನ.6ರಂದು ಲೋಕಾರ್ಪಣೆಗೊಂಡಿತು. ಕುಳಿತ ಭಂಗಿಯಲ್ಲಿರುವ ಈ ಪುತ್ಥಳಿ 12 ಅಡಿ ಎತ್ತರವಿದೆ. ಹೆಗ್ಗಡದೇವನಕೋಟೆ ಯಿಂದ 120 ಟನ್ ಕೃಷ್ಣಶಿಲೆ ತಂದು ಇದನ್ನು ನಿರ್ಮಿಸಲಾಗಿದೆ. ಇನ್ನು, ಶ್ರೀ ರಾಮಾನುಜಾಚಾರ್ಯ ಅವರ 1,000ನೇ ಜನ್ಮದಿನದ ಸ್ಮರಣಾರ್ಥ ಹೈದರಾಬಾದ್‌ನಲ್ಲಿ “ಸಮಾನತೆಯ ಪ್ರತಿಮೆ’ ನಿರ್ಮಿಸಲಾಗಿದೆ. ಫೆ.5ರಂದು ಲೋಕಾರ್ಪಣೆ ಮಾಡಲಾಗಿದೆ.
ಪಂಚಮುಖಿ ಆಂಜನೇಯ:ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ತಲೆಎತ್ತಿ ನಿಂತಿದೆ 161 ಅಡಿ ಎತ್ತರದ ಪಂಚಮುಖಿ ಆಂಜನೇಯ ಮೂರ್ತಿ. ಲೋಹ ಮತ್ತು ಸಿಮೆಂಟ್ ಬಳಸಿ ನಿರ್ಮಿಸಿದ ಈ ಮೂರ್ತಿಯನ್ನು ಏ.11ರ ರಾಮನವಮಿ ದಿನದಂದೇ ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. 2014ರಲ್ಲಿ ತಮಿಳುನಾಡಿನ ಕುಂಭಕೋಣಂನ 50 ಮಂದಿ ಶಿಲ್ಪಿಗಳು ಇದರ ನಿರ್ಮಾಣ ಕಾರ್ಯ ಆರಂಭಿಸಿದ್ದರು.
161 ಅಡಿ ಎತ್ತರ, 108 ಅಡಿ ಅಗಲ, ನಿರ್ಮಾಣ ವೆಚ್ಚ 10 ಕೋಟಿ ರೂ.
ಅಟಲ್ ಪ್ರತಿಮೆ
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆಯನ್ನು ಡಿ.25ರಂದು ಬೆಂಗಳೂರಿನ ಪದ್ಮನಾಭನಗರದಲ್ಲಿ ಸಿಎಂ ಬೊಮ್ಮಾಯಿ ಅನಾವರಣಗೊಳಿಸಿದರು. ಅಟಲ್ ಅವರ 98ನೇ ಜನ್ಮದಿನದಂದೇ 12 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಗೊಂಡಿತು. 1 ಟನ್ ತೂಕದ ಪ್ರತಿಮೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
Related Articles
12 ಅಡಿ ಎತ್ತರ, 1ಟನ್ ತೂಕ, 2ಕೋ.ರೂ. ನಿರ್ಮಾಣ ವೆಚ್ಚ
ನೇತಾಜಿ ಪ್ರತಿಮೆ; ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಮೋದಿ ಸೆ.8 ರಂದು ಇಂಡಿಯಾ ಗೇಟ್ ಬಳಿ ಅನಾವರಣಗೊಳಿಸಿದರು. ತೆಲಂಗಾಣದ ಖಮ್ಮಾಮ್‌ನಿಂದ ತರಿಸಲಾದ 280 ಮೆ.ಟನ್ ಏಕಶಿಲೆಯಲ್ಲಿ, ಕರ್ನಾಟಕದ ಶಿಲ್ಪಿ ಅರುಣ್ ಯೋಗಿ ರಾಜ್ ನಿರ್ಮಾಣ ಮಾಡಿದ್ದಾರೆ.
28 ಅಡಿ ಎತ್ತರ, 65 ಮೆಟ್ರಿಕ್ ಟನ್ ತೂಕ, ಬಳಸಲಾದ ಏಕಶಿಲೆ 280 ಮೆಟ್ರಿಕ್ ಟನ್.