36 ವರ್ಷದ ಡೇವಿಡ್ ಮಲಾನ್ ಇಂಗ್ಲೆಂಡ್ ಪರ ಮೂರೂ ಮಾದರಿಗಳಲ್ಲಿ ಶತಕ ಸಿಡಿಸಿದ ಸಾಧಕರಾಗಿದ್ದರು. “ದಿ ಟೈಮ್ಸ್ ಆಫ್ ಲಂಡನ್’ ಪತ್ರಿಕೆಯೊಂದಿಗೆ ಮಾತಾಡಿದ ಮಲಾನ್, “ಸೀಮಿತ ಓವರ್ಗಳ ಕ್ರಿಕೆಟ್ನಲ್ಲೇನೋ ನಿರೀಕ್ಷಿತ ಪ್ರದರ್ಶನ ನೀಡಿದ್ದೇನೆ. ಆದರೆ ಟೆಸ್ಟ್ ಕ್ರಿಕೆಟ್ನ ತೀವ್ರತೆಯನ್ನು ನಿಭಾಯಿಸಲಾಗಲಿಲ್ಲ. ಸುದೀರ್ಘ ಟೆಸ್ಟ್ ಸರಣಿಯ ಕೊನೆಯ ಹಂತದಲ್ಲಿ ನನ್ನ ಸಾಧನೆಯ ಮಟ್ಟ ಕುಸಿಯುತ್ತಿತ್ತು’ ಎಂದಿದ್ದಾರೆ.
Advertisement
ಕಳೆದ ಏಕದಿನ ವಿಶ್ವಕಪ್ನಲ್ಲಿ ಅವರು ಕೊನೆಯ ಸಲ ಇಂಗ್ಲೆಂಡ್ ಪರ ಆಡಿದ್ದರು. ಮುಂಬರುವ ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಗೆ ಪರಿಗಣಿಸದ ಕಾರಣ ನಿವೃತ್ತಿ ಪ್ರಕಟಿಸಿದರು.