Advertisement

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

11:10 AM Dec 02, 2024 | Team Udayavani |

ಮುಂಬೈ: 12th ಫೇಲ್ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿದ ವಿಕ್ರಾಂತ್ ಮಾಸ್ಸಿ, ತನ್ನ 37 ನೇ ವಯಸ್ಸಿಗೆ ನಟನೆಗೆ ನಿವೃತ್ತಿ ಘೋಷಿಸುವುದಾಗಿ ಹೇಳಿಕೆ ನೀಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ವಿಕ್ರಾಂತ್, ನನ್ನನ್ನು ಈ ಹಂತದ ವರೆಗೆ ಬೆಳೆಸಿದ ನನ್ನ ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು, ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು. ಆದರೆ ನನಗೆ ನೀಡಿದ ನಿಮ್ಮ ಬೆಂಬಲವನ್ನು ಯಾವತ್ತೂ ಮರೆಯಲಾಗದು ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಜೀವನ ಮುಂದೆ ಹೋದಂತೆ ಪತಿಯಾಗಿ, ತಂದೆ ಮತ್ತು ಮಗನಾಗಿ ಮನೆಗೆ ಹಿಂತಿರುಗಲು ಇದು ಸರಿಯಾದ ಸಮಯ ಎಂದು ವಿಕ್ರಾಂತ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಸದ್ಯ ಎರಡು ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಕ್ರಾಂತ್ 2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗೋಣ ಎಂದು ಹೇಳಿಕೊಂಡು ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ವಿಕ್ರಾಂತ್ ಟಿವಿಯಲ್ಲಿ ಧೂಮ್ ಮಚಾವೋ ಧೂಮ್ ಕಾರ್ಯಕ್ರಮದೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. ಇದಾದ ಬಳಿಕ 2013ರಲ್ಲಿ ‘ಲೂಟೆರಾ’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿರಿಸಿದ ವಿಕ್ರಾಂತ್ ‘12th ಫೇಲ್’ ಸಿನಿಮಾ ಮೂಲಕ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದರು ಇದಾದ ಬಳಿಕ ಇತ್ತೀಚಿಗೆ ಬಿಡುಗಡೆಯಾದ ‘ದಿ ಸಾಬ್ರಮತಿ ರಿಪೋರ್ಟ್’ ಚಿತ್ರದಲ್ಲಿ ನಟಿಸಿದ್ದು ಇದರಿಂದ ಬೆದರಿಕೆಗಳನ್ನು ಎದುರಿಸಬೇಕಾಯಿತು.

 

Advertisement

ಅಭಿಮಾನಿಗಳಿಗೆ ಶಾಕ್
ನಟನ ದಿಢೀರ್ ನಿರ್ಧಾರದಿಂದ ವಿಕ್ರಾಂತ್ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ ಅಲ್ಲದೆ ನಟನ ಹೇಳಿಕೆ ಸುಳ್ಳಾಗಿರಲಿ ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ, ನಿಮ್ಮ ಸಿನಿಮಾಕ್ಕಾಗಿ ನಾವು ಕಾಯುತ್ತಿದ್ದೇವೆ ನೀವು ಅಭಿಮಾನಿಗಳಿಗೆ ಹೀಗೆ ಶಾಕ್ ನೀಡಬೇಡಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next