Advertisement

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ; ಎಂ.ಪಿ. ರೇಣುಕಾಚಾರ್ಯ

05:24 PM Aug 25, 2022 | Team Udayavani |

ಹೊನ್ನಾಳಿ: ಮಾಜಿ ಶಾಸಕರು ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದೇನೆಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಹೊಸದೇವರಹೊನ್ನಾಳಿ, ಹಳೇದೇವರಹೊನ್ನಾಳಿ, ತಕ್ಕನಹಳ್ಳಿ, ಕಮ್ಮಾರಘಟ್ಟೆ, ಕಮ್ಮಾರಘಟ್ಟೆ ತಾಂಡಾ, ಘಂಟ್ಯಾಪುರ ಗ್ರಾಮಗಳಿಗೆ ಅ ಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆ ಹಾನಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

ಕಳೆದೊಂದು ತಿಂಗಳಿನಿಂದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಾದ್ಯಂತ ಅಧಿ ಕಾರಿಗಳೊಂದಿಗೆ ಮಳೆ ಹಾನಿ ಗ್ರಾಮಗಳಿಗೆ ಹಗಲು ರಾತ್ರಿ ಎನ್ನದೆ, ಊಟ
ಉಪಾಹಾರ ಲೆಕ್ಕಿಸದೆ ಜನರ ಸಂಕಷ್ಟ ಆಲಿಸುವ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳೊಂದಿಗೆ ಪಾರದರ್ಶಕವಾಗಿ ಪಕ್ಷಪಾತ ಮಾಡದೆ, ಜಾತಿ, ಧರ್ಮ ನೋಡದೆ ಎಲ್ಲಾ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದ್ದೇನೆ. ಮನೆ ಹಾನಿಯಾದವರು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅವರ ಮನೆಗಳಿಗೆ ಭೇಟಿ ನೀಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಕಣ್ಣೀರು ಒರೆಸುವುದು ಶಾಸಕನಾಗಿ ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದ ಮಾಜಿ ಶಾಸಕರು ಬಿಜೆಪಿಯವರಿಗೆ ಮಾತ್ರ ಮನೆ ಹಾನಿ ಪರಿಹಾರ ಕೊಡುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾನು ಭೇದಭಾವ ಮಾಡಿದ್ದರೆ ಅದನ್ನು ಅವರು ಸಾಬೀತು ಮಾಡಬೇಕು. ಒಂದು ವೇಳೆ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ತಿಳಿಸಿದರು.

ನಾನು ಬಡವರ ಹೊಟ್ಟೆಯ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಎಂದಿಗೂ ಮಾಡಿಲ್ಲ. ಹಾಗೇನಾದರೂ ಮಾಡಿದ್ದರೆ ಮಾಜಿ ಶಾಸಕರು ಸವಾಲು ಸ್ವೀಕರಿಸಿ ಚರ್ಚೆಗೆ ಬರಲಿ ಎಂದು ಗುಡುಗಿದರು. ನೀವು ಶಾಸಕರಾಗಿದ್ದಾಗ ಮರಳನ್ನು ಲೂಟಿ ಹೊಡೆದಿರಿ. ನನ್ನ ಅವಧಿಯಲ್ಲಿ ಮರಳು ಮುಕ್ತವಾಗಿ ಸಿಗುತ್ತಿದೆ ಎಂದು ಕುಟುಕಿದರು.

Advertisement

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಮುಖಂಡರಾದ ಡಿ.ಕೆ.ಶಿವಕುಮಾರ್‌ ಸೇರಿದಂತೆ ಮತ್ತೀತರರು ಇದ್ದರು.

ಅತಿವೃಷ್ಟಿಯಿಂದ ಹೊನ್ನಾಳಿ-ನ್ಯಾಮತಿ ತಾಲೂಕಿನ ಜನರು ಸಂಕಷ್ಟದಲ್ಲಿದ್ದಾರೆ. ಮಾಜಿ ಶಾಸಕರು ಸುಳ್ಳು, ಕಪಟ ನಾಟಕವಾಡುವುದನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವುದನ್ನು ಕಲಿಯಲಿ.
ಎಂ.ಪಿ. ರೇಣುಕಾಚಾರ್ಯ,
ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next