Advertisement

ಕೇಂದ್ರ ಸಶಸ್ತ್ರ ಪಡೆ ವೈದ್ಯರ ನಿವೃತ್ತಿ ವಯಸ್ಸು 65ಕ್ಕೆ ಏರಿಕೆ

03:52 PM Jul 12, 2017 | udayavani editorial |

ಹೊಸದಿಲ್ಲಿ : ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ನಂತಹ ಕೇಂದ್ರೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರ ನಿವೃತ್ತಿ ವಯಸ್ಸನ್ನು ಈಗಿನ 60ರಿಂದ 65ಕ್ಕೇರಿಸಲಾಗಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 

ಕೇಂದ್ರ ಸಶಸ್ತ್ರ ಪಡೆ ಮತ್ತು ಅಸ್ಸಾಂ ರೈಫ‌ಲ್‌ನಲ್ಲಿ ದುಡಿಯುತ್ತಿರುವ ವಿಶೇಷ ಪರಿಣತ ವೈದ್ಯಕೀಯ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಕೂಡ 60ರಿಂದ 75ಕ್ಕೆ ಏರಿಸಲಾಗಿದೆ. 

ಕೇಂದ್ರ ಪೊಲೀಸ್‌ ಪಡೆಗಳೆಂದರೆ : ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎನ್‌ಡಿಆರ್‌ಎಫ್, ಎನ್‌ಎಸ್‌ಜಿ ಮತ್ತು ಎಸ್‌ಎಸ್‌ಬಿ.

Advertisement

Udayavani is now on Telegram. Click here to join our channel and stay updated with the latest news.

Next