Advertisement
ಆ. 20ರಂದು ಸಂಜೆ 4.30ರಿಂದ 5 ಗಂಟೆ ಅವಧಿಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಒಬ್ಬರೇ ಇದ್ದು, ಕೃತ್ಯ ನಡೆಸಿದ ಬಳಿಕ ಮನೆಯಿಂದ ಯಾವುದೇ ಸೊತ್ತುಗಳು ಕಳ್ಳತನ ನಡೆದಿಲ್ಲ. ಮೃತರ ಕೈಯಲ್ಲಿದ್ದ ಚಿನ್ನದ ಉಂಗುರ ಹಾಗೆಯೇ ಇದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಯಾವುದೋ ಮಾರಾಕಾಸ್ತ್ರದಿಂದ ಕೊಲೆ ನಡೆಸಲಾಗಿದ್ದು, ಯಾವ ಉದ್ದೇಶದಿಂದ ಕೊಲೆ ನಡೆದಿದೆ ಎಂಬುದು ತನಿಖೆಯಿಂದಷ್ಟೆ ತಿಳಿದುಬರಬೇಕಿದೆ. ಮೇಲ್ನೋಟಕ್ಕೆ ದ್ವೇಷದಿಂದ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಧರ್ಮಸ್ಥಳ ಸಹಿತ ಬೆಳ್ತಂಗಡಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಉಪನಿರೀಕ್ಷಕರ ತಂಡ ಹಾಗೂ ಮತ್ತೂಂದು ತಂಡದಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ದ.ಕ. ಎಸ್ಪಿ ಯತೀಶ್ ಎನ್. ಸೂಚನೆ ನೀಡಿದ್ದಾರೆ.
Related Articles
ಘಟನೆಗೆ ಸಂಬಂಧಿಸಿದಂತೆ ಮೃತರ ಕಿರಿಯ ಪುತ್ರನ ಮೇಲೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದ ಘಟನೆಯೂ ನಡೆದಿತ್ತು. ಆದರೆ ಮನೆ ಕೆಲಸ ಮುಗಿಸಿ ಕೆಲಸದ ನಿಮಿತ್ತ ಪುತ್ತೂರು ತೆರಳಿದ್ದು, ಸಂಜೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ದ.ಕ. ಎಸ್ಪಿ ಯತೀಶ್ ಎನ್. ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆ. 21ರಂದು ಮಧ್ಯಾಹ್ನ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯವರಿಂದ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಬಳಿಕ ತನಿಖಾ ತಂಡದ ಜತೆ ಐಜಿಪಿ ಚರ್ಚಿಸಿದರು.
Advertisement