Advertisement

ಇಪ್ಪತ್ತರ ಯುವಕರ ನಾಚಿಸುವ ತೊಂಬತ್ತೂಂದರ ನಿವೃತ್ತ ಶಿಕ್ಷಕ

09:47 PM Jun 29, 2021 | Team Udayavani |

ವರದಿ: ಸದಾಶಿವ ಹಿರೇಮಠ

Advertisement

ಬಂಕಾಪುರ: ಇವರನ್ನು ಕಂಡರೆ ಇಪ್ಪತ್ತರ ಯುವಕರೂ ಸಹ ನಾಚಿ ನೀರಾಗಬೇಕು. ಇವರ ಚಲನವಲನಗಳನ್ನು ಕಂಡು ಪ್ರತಿಯೊಬ್ಬರೂ ಬೆರಗಾಗಬೇಕು.

ಹೌದು. ಇವರೇ 91ರ ಇಳಿ ವಯಸ್ಸಿನಲ್ಲೂ ಸೈಕಲ್‌ ಏರಿ ನೀರು ತರುವ ಶಿಸ್ತಿನ ಶಿಪಾಯಿ, ನಿವೃತ್ತ ಶಿಕ್ಷಕ ಈಶ್ವರ ಅಗಡಿ. ನೌಕರಿ ಮಾಡುವಾಗ ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ ಸೈಕಲ್‌ ಅನ್ನೇ ಇಂದಿಗೂ ಜೋಪಾನವಾಗಿಟ್ಟುಕೊಂಡು ಬಳಸುತ್ತಿರುವ ಇವರು ಸೈಕಲ್‌ ಏರಿ ಹೊರಟರೆ ಎಂತಹವರೂ ಕೂಡ ಇವರನ್ನು ನೋಡದೇ ಇರಲಾರರು.

ಬಾಲ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪನವರ ಧರ್ಮ ಪತ್ನಿ ಸಿದ್ದಮ್ಮನವರ ಕೈಯಲ್ಲಿ ಆಡಿ ಬೆಳೆದ ಇವರು 12ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ್ದರು. ಹಿರೆಕೇರೂರ ತಾಲೂಕು ಚಿನ್ನಮುಳಗುಂದ ಗ್ರಾಮದ ಶಾಲೆಯಲ್ಲಿ ಶಿಕ್ಷಣದೊಂದಿಗೆ ಲೇಜಿಂ, ಡೆಂಬಲ್ಸ್‌, ಹಗ್ಗ ಜಗ್ಗಾಟ, ಕವಾಯತ್‌, ಲಾಠಿ ಬಳಕೆ, ಕಬಡ್ಡಿ ಸೇರಿದಂತೆ ಇತರೆ ಕಲೆಗಳನ್ನು ಕರಗತ ಮಾಡಿಕೊಂಡು ಇವರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ನೌಕರಿ ಮಾಡಿ ನಿವೃತ್ತಿ ಹೊಂದಿದ್ದಾರೆ.

2017-18 ರಲ್ಲಿ ವಿಶ್ವ ಹಿರಿಯ ದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರಿಕೆಟ್‌ ಬಾಲ್‌ ಎಸೆತದಲ್ಲಿ ಪ್ರಥಮ, 100 ಮೀ. ಓಟದಲ್ಲಿ ಪ್ರಥಮ, ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next