Advertisement

Arrested: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿವೃತ್ತ ಪಿಎಸ್‌ಐ ಬಂಧನ

11:14 AM Aug 16, 2023 | Team Udayavani |

ಬೆಂಗಳೂರು: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಿವೃತ್ತ ಪಿಎಸ್‌ಐಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶಿವಾಜಿ ನಗರ ನಿವಾಸಿ ಅಬ್ದುಲ್‌ ಹಫೀಜ್‌ (74) ಬಂಧಿತ.

ಆ.13 ರಂದು 7 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸ ಲಾಗಿದೆ. ಆರೋಪಿ ಶಿವಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಹೊಂದಿದ್ದು, ಈ ಪೈಕಿ ಒಂದು ಮಹಡಿಯಲ್ಲಿ ಬಾಲಕಿ ಪೋಷಕರ ಜತೆ ವಾಸವಾಗಿ ದ್ದಳು. ಆ.13 ರಂದು ರಾತ್ರಿ 8.30 ರಲ್ಲಿ ಸಂತ್ರಸ್ತೆ ಕಲರ್‌ ಜೆರಾಕ್ಸ್‌ ನೋಟು ಗಳನ್ನು ಇಟ್ಟು ಕೊಂಡು ಆಟವಾಡುತ್ತಿದ್ದಳು. ಆಗ ಕೆಲ ನೋಟುಗಳು ಕೆಳಗೆ ಬಿದ್ದಿವೆ. ಹೀಗಾಗಿ ನೋಟುಗಳನ್ನು ಎತ್ತಿ ಕೊಂಡು ಹೋ ಗಲು ಕೆಳಗೆ ಬಿದ್ದ ಬಾಲಕಿಗೆ, ಆರೋಪಿ  ಪುಸಲಾ ಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  ಬಾಲಕಿಗೆ ನೋವು ಹೆಚ್ಚಾಗಿ ಅಳುತ್ತಿದ್ದರಿಂದ ಪೋಷಕರು ಪ್ರಶ್ನಿಸಿದಾಗ ದೌರ್ಜನ್ಯ ವಿವರಿಸಿದ್ದಾಳೆ. ತಡ ರಾತ್ರಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next