Advertisement
-ಡಿಎನ್‌ಎ ವರದಿ ಮುಖ್ಯಎಸ್.ಕೆ.ಉಮೇಶ್, ನಿವೃತ್ತ ಪೊಲೀಸ್ ಅಧಿಕಾರಿ
Related Articles
ರೇವಣಸಿದ್ದಯ್ಯ, ನಿವೃತ್ತ ಪೊಲೀಸ್ ಮಹಾನಿರ್ದೇಶಕ
ಕಾನೂನು ಪ್ರಕಾರ ಕೊಲೆಯಾದ ವ್ಯಕ್ತಿಯ ಮೃತದೇಹ ಸಿಗಬೇಕು. ಜತೆಗೆ ನಾಪತ್ತೆಯಾಗಿರುವ ಅಥವಾ ನಿರ್ದಿಷ್ಟ ವ್ಯಕ್ತಿಯೇ ಕೊಲೆಯಾದಿದ್ದಾನೆಯೇ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕು. ಕೊಲೆಯಾದ ವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗೆ ಸಂಬಂಧಿಸಿದ ವಸ್ತುಗಳು, ಸಾಕ್ಷಿಗಳು, ಆತನ ಮುಖಚಹರೆ, ರಕ್ತದ ಮಾದರಿ ಎಲ್ಲವನ್ನು ಪತ್ತೆ ಹಚ್ಚಬೇಕು.
Advertisement
ಇದರೊಂದಿಗೆ ಕೊಲೆಯಾದ ವ್ಯಕ್ತಿ, ಈತನೇ ಎಂದು ದೃಢಪಡಿಸಲು ಆತನ ಕೂದಲು, ಮಲಗಿದ್ದಾಗ ಬಟ್ಟೆ ಮೇಲೆ ಬಿದ್ದಿದ್ದ ಜೋಲು(ಕೆಲ ಸಂದರ್ಭದಲ್ಲಿ) ಕೂಡ ವ್ಯಕ್ತಿಯನ್ನು ದೃಢಪಡಿಸುವ ಸಾಧ್ಯತೆಯಿದೆ. ಕೆಲ ಸಂದರ್ಭದಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದರೆ, ಆಗ ಮರಣೋತ್ತರ ಪರೀಕ್ಷೆ ಮುಖ್ಯವಾಗುತ್ತದೆ. ಈ ಮೂಲಕ ವ್ಯಕ್ತಿಯ ಒಂದಷ್ಟು ಅಂದಾಜು ಮಾಹಿತಿ ಲಭ್ಯವಾಗುತ್ತದೆ.
ಕೊಲೆ ಪ್ರಕರಣಗಳಲ್ಲಿ ದೇಹವನ್ನು ಎಷ್ಟು ತುಂಡು ಮಾಡಿದರೂ, ಎಲ್ಲೆ ಬಿಸಾಡಿದರೂ ಬಹುತೇಕ ಪ್ರಕರಣಗಳಲ್ಲಿ ಪತ್ತೆಯಾಗುತ್ತದೆ. ಆಗ ದೇಹದ ಭಾಗಗಳು ಮಾತ್ರವಲ್ಲ, ಮೂಳೆ, ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿ, ಮಾಂಸದ ಚೂರು, ಬಟ್ಟೆ, ಉಗುರು ಹೀಗೆ ಮೃತ ವ್ಯಕ್ತಿಯ ದೇಹಕ್ಕೆ ಪೂರಕವಾದ ಎಲ್ಲವೂ ಸಾಕ್ಷ್ಯಗಳಾಗುತ್ತವೆ. ಅವುಗಳನ್ನು ಸಂಗ್ರಹಿಸುವ ಹೊಣೆ ತನಿಖಾಧಿಕಾರಿಗಳ ಮೇಲೆ ಇರುತ್ತದೆ. ಇಂತಹ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ತನಿಖಾಧಿಕಾರಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಆರೋಪಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಕೊಡಿಸುವ ಅವಕಾಶಗಳು ಇರುತ್ತದೆ.
ಮೃತನ ತಲೆ ಸಿಗಬೇಕು!ಟೈಗರ್ ಅಶೋಕ್‌ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ
ದೆಹಲಿಯಲ್ಲಿ ನಡೆದ ಕೊಲೆಗಳು ಭೀಕರವಾಗಿವೆ. ಈ ಪ್ರಕರಣಗಳು ಬೇರೆ ಕೊಲೆ ಪ್ರಕರಣಗಳ ರೀತಿ ಅಲ್ಲ. ಸಾಮಾನ್ಯ ಕೊಲೆ ಪ್ರಕರಣದಲ್ಲಿ ಮೊದಲಿಗೆ ಮೃತದೇಹಗಳ ಗುರುತು ಪತ್ತೆ ಆಗುತ್ತದೆ. ಅನಂತರ ಆರೋಪಿಗಳು ಪತ್ತೆಯಾಗುತ್ತದೆ. ಆದರೆ, ದೆಹಲಿ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿ ಈತನೇ ಎಂದು ದೃಢಪಡಿಸಬೇಕು. ಮೊದಲಿಗೆ ಡಿಎನ್‌ಎಂ ಪರೀಕ್ಷೆ ನಡೆಸಿ, ಈತನೇ ಕೊಲೆಯಾಗಿದ್ದಾನೆ ಎಂಬುದು ದೃಢಪಡಿಸಿಕೊಳ್ಳಬೇಕು. ಈ ಮೂಲಕವೇ ಶೇ.70ರಷ್ಟು ಪ್ರಕರಣದ ತನಿಖೆ ಮುಕ್ತಾಯವಾಗುತ್ತದೆ. ಕೊಲೆಯಾದವರ ಕೈ, ಕಾಲುಗಳು ಸಿಗುವುದು ಮಾತ್ರವಲ್ಲ, ತಲೆ ಸಿಗಬೇಕು. ಬಳಿಕ ಕೊಲೆಯಾದ ವ್ಯಕ್ತಿ ಎಷ್ಟು ದಿನಗಳಿಂದ ನಾಪತ್ತೆಯಾಗಿದ್ದ? ಈ ಕುರಿತು ಯಾವ ದಿನ ಕೇಸ್ ದಾಖಲಿಸಲಾಗಿದೆ? ದೂರು ನೀಡಲು ತಡ ಮಾಡಿದ್ದೇಕೆ? ಕುಟುಂಬ ಸದಸ್ಯರಿಗಿಂತ, ಆತನ ಮನೆ ಅಕ್ಕ-ಪಕ್ಕದ ವ್ಯಕ್ತಿಗಳು ನೀಡುವ ಹೇಳಿಕೆ ಮುಖ್ಯವಾಗುತ್ತದೆ. ಯಾಕೆಂದರೆ, ಕೆಲವೊಮ್ಮೆ ಕುಟುಂಬ ಸದಸ್ಯರೇ ಕೊಲೆಗೈದು “ಬುದ್ದಿವಂತಿಕೆ’ ಪ್ರದರ್ಶಿಸುತ್ತಾರೆ. ಆಗ ಸ್ಥಳೀಯರು ಅಥವಾ ಕೊಲೆಯಾದವ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿದಾಗ ಕೆಲವೊಂದು ಪೂರಕ ಸಾಕ್ಷ್ಯಗಳು ದೊರೆಯುತ್ತದೆ. ಹಾಗೆಯೇ, ಮೃತದೇಹ ದೇಹದ ಭಾಗಗಳು ಪತ್ತೆಯಾದ ಸ್ಥಳಗಳಿಗಿಂತ ಕೊಲೆಯಾದ ಸ್ಥಳವೇ ಪ್ರಮುಖ ಸಾಕ್ಷ್ಯವಾಗುತ್ತದೆ. ಮೃತಪಟ್ಟ ಬಳಿಕ ಮಾರಕಾಸ್ತ್ರಗಳಿಂದ ದೇಹವನ್ನು ತುಂಡು ಮಾಡುತ್ತಾರೆ. ಆದರೆ, ಅದಕ್ಕೂ ಮೊದಲು ಯಾವ ರೀತಿ ಕೊಲೆ ಮಾಡಿದ್ದಾರೆ? ಉಸಿರುಗಟ್ಟಿಸಿ, ವಿಷಊಣಿಸಿ, ನಿದ್ದೆ ಮಾತ್ರೆ ಹಾಕಿ ಹಾಗೂ ಚಾಕುವಿನಿಂದ ಕೊಲೆಗೈದಿದ್ದಾರೆಯೇ? ಎಂಬುದು ಪತ್ತೆ ಹಚ್ಚಬೇಕು. ದೆಹಲಿ ಎರಡು ಕೊಲೆ ಪ್ರಕರಣಗಳಲ್ಲಿ ಮೃತದೇಹದ ಭಾಗಗಳನ್ನು ದಿನಗಟ್ಟಲೇ ಫ್ರೀಡ್ಜ್ನಲ್ಲಿ ಇಡಲಾಗಿತ್ತು. ಹೀಗಾಗಿ ಆ ಫ್ರೀಡ್ಜ್ನ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷಿಸುತ್ತಾರೆ. ಆಗ ಎಷ್ಟು ದಿನ ಇಡಲಾಗಿತ್ತು ಎಂಬುದು ಪತ್ತೆಯಾಗುತ್ತದೆ. ಜತೆಗೆ ಫ್ರೀಡ್ಜ್ನಲ್ಲಿರುವ ರಕ್ತದ ಮಾದರಿಗಳು ಹಾಗೂ ಭಾಗಗಳು ಸಿಕ್ಕ, ಅದರಲ್ಲಿರುವ ರಕ್ತದ ಮಾದರಿಗಳು ಒಂದೆಯೇ ಎಂಬುದು ದೃಢವಾಗುತ್ತದೆ. ಯಾಕೆಂದರೆ, ಹಂತಕ ಮತ್ತೂಬ್ಬ ವ್ಯಕ್ತಿಯನ್ನು ಕೊಲೆಗೈದಿರುವ ಸಾಧ್ಯತೆಯಿದೆ. ಹೀಗಾಗಿ ಕೊಲೆಯಾದ ಸ್ಥಳ ಮತ್ತು ದೇಹದ ಭಾಗಗಳು ಸಿಕ್ಕ ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿಯಿಂದ ಎಲ್ಲ ರೀತಿಯ ಸಾಕ್ಷ್ಯಾಗಳು ಮುಖ್ಯವಾಗುತ್ತವೆ. – ಮೋಹನ್ ಭದ್ರಾವತಿ