Advertisement
ಸಾರಾಯಿಪಾಳ್ಯ ನಿವಾಸಿ, ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಆಲಿಯಾಸ್ ಬಾಬು ಮೇಲಿದ್ದ ಹಳೆದ್ವೇಷ ತೀರಿಸಿಕೊಳ್ಳಲು ಹಾಗೂ ಸಮಾಜಘಾತುಕ ಕೃತ್ಯ ಎಸಗಲು ಸಿದ್ಧತೆ ಮಾಡಿಕೊಂಡಿದ್ದ ಮುಖ್ಯ ಆರೋಪಿ ಫಯಾಜ್ ಸಹಚರರಾದ ಸೈಯದ್ ಅಸ್ಕರ್ ಹಾಗೂ ಮುನ್ನಾವರ್‌ನನ್ನು ಬಂಧಿಸಿ ಒಂದು ನಾಡಪಿಸ್ತೂಲ್, ಜೀವಂತ ಗುಂಡು, 10 ಪೆಟ್ರೋಲ್ ಬಾಂಬ್‌ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳೆಲ್ಲರೂ ಹೆಗಡೆನಗರ ನಿವಾಸಿಗಳಾಗಿದ್ದಾರೆ.
Related Articles
Advertisement
ಈ ಸಂಬಂಧ ಪ್ರತಿಕ್ರಿಯಿಸಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಆರೋಪಿಗಳಿಗೆ ಸೇರಿದ್ದ ಮನೆಯನ್ನು ರೌಡಿಶೀಟರ್ ಮೊಹಮ್ಮದ್ ಫಯಾಜ್ ಖಾಲಿ ಮಾಡಿಸಿದ್ದ. ಇದರಿಂದ ಫಯಾಜ್ 10 ಲಕ್ಷ ರೂ. ಹಣ ಕಳೆದುಕೊಂಡಿದ್ದ. ಈ ಕಾರಣಕ್ಕೆ ಬಾಬು ಮೇಲೆ ಸೇಡಿಗೆ ಆರೋಪಿಗಳು ಯೋಜನೆ ರೂಪಿಸಿದ್ದರು. ಹಿಂದೂ ಕಾರ್ಯಕರ್ತರ ಕೊಲೆಗೆ ಸಂಚು ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ, ಆರೋಪಿಗಳ ದುಷ್ಕೃತ್ಯದ ಹಿಂದೆ ಯಾವುದೇ ರೀತಿಯ ಪ್ಲ್ಯಾನ್ ಇರಲಿಲ್ಲ. ಅಲ್ಲದೆ ಹಿಂದೂ ಕಾರ್ಯಕರ್ತರ ಹತ್ಯೆ ಅಥವಾ, ಗಲಭೆಯ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾರೆ.