ನವದೆಹಲಿ: ಸೀರೆ ಭಾರತದ ವಿಶೇಷ ಉಡುಗೆ. ಆದರೆ ಅದೇ ಸೀರೆ ಧರಿಸಿ ಹೋಗಿದ್ದಕ್ಕೆ ರೆಸ್ಟಾರೆಂಟ್ ಒಂದರಲ್ಲಿ ಮಹಿಳೆಯೊಬ್ಬರಿಗೆ ಪ್ರವೇಶ ನಿರಾಕರಿಸಲಾಗಿದೆ.
ನವದೆಹಲಿಯ ದಕ್ಷಿಣ ಭಾಗದ ಅನ್ಸಲ್ ಪ್ಲಾಜಾದಲ್ಲಿರುವ ರೆಸ್ಟಾರೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ.
ಪತ್ರಕರ್ತೆ ಅನಿತಾ ಚೌಧರಿ ಸೀರೆಯನ್ನಟ್ಟು ರೆಸ್ಟಾರೆಂಟ್ ಒಳಗೆ ಪ್ರವೇಶಿಸಲು ಮುಂದಾದಾಗ ಅಲ್ಲಿನ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ.
ನೀವು “ಸ್ಮಾರ್ಟ್ ಕ್ಯಾಶ್ಯುಯಲ್’ ಧರಿಸಿಲ್ಲ. ಹಾಗಾಗಿ ನಿಮ್ಮನ್ನು ಒಳಗೆ ಬಿಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಾಫಿಗೂ ಬಂತು ಸ್ನಾತಕೋತ್ತರ ಪದವಿ!
ಈ ವಿಡಿಯೋವನ್ನು ಅನಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ದೇಶದಲ್ಲಿ ಈ ಸ್ಮಾರ್ಟ್ ಕ್ಯಾಶ್ಯುಯಲ್ ಎಂದರೇನು’ ಎಂದು ಪ್ರಶ್ನಿಸಿದ್ದಾರೆ.