Advertisement
ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುತ್ತೂರು ನಗರಸಭೆಯು ಪೌರ ಕಾರ್ಮಿಕರಿಗಾಗಿ ಈ ನಿರ್ಮಾಣ ಯೋಜನೆ ಹಮ್ಮಿಕೊಂಡಿದ್ದು, ಅಗತ್ಯ ಬಿದ್ದಲ್ಲಿ ಬೇರೆ ಕಡೆಗೂ ಸ್ಥಳಾಂತರ ಮಾಡಬಹುದಾದ ಕಂಟೈನರ್ ಮಾದರಿಯ ಪೌರಬಂಧು ವಿಶ್ರಾಂತಿ ಗೃಹ ಇದಾಗಿದೆ.
Related Articles
Advertisement
ದಿನನಿತ್ಯ ನಗರದ ಸ್ವಚ್ಛತೆಗಾಗಿ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆ, ವಿಶ್ರಾಂತಿಗಾಗಿ ಪರದಾಡುವ ಸನ್ನಿವೇಶವಿದೆ. ಇದನ್ನು ನೀಗಿಸಲು ಈ ಕಂಟೈನರ್ ಸಹಕಾರಿಯಾಗಲಿದೆ. ಇದರಲ್ಲಿ ಕಾರ್ಮಿಕರು ವಿಶ್ರಾಂತಿ ಪಡೆಯುವ ವ್ಯವಸ್ಥೆಯಿದೆ. ಕುಡಿಯುವ ನೀರಿನ ಪೂರೈಕೆ ಇದೆ. ಇದಲ್ಲದೆ ಸ್ನಾನ ಗೃಹ, ಶೌಚಾಲಯ ಇತ್ಯಾದಿ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಪೌರಾಡಳಿತ ಸಂಸ್ಥೆಯಲ್ಲೂ ಈ ವ್ಯವಸ್ಥೆ ಇಲ್ಲ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿದೆ. ಪೌರ ಕಾರ್ಮಿಕರ 100 ಹುದ್ದೆಗಳು ಇಲ್ಲಿಗೆ ಮಂಜೂರಾಗಿದ್ದರೂ, ಪ್ರಸ್ತುತ ಕೇವಲ 11 ಹುದ್ದೆಗಳು ಭರ್ತಿಯಾಗಿ ನಗರ ಸ್ವಚ್ಛತೆ, ಗುಡಿಸುವಿಕೆ, ಗಿಡಗಳ ಕಟ್ಟಿಂಗ್ ಮುಂತಾದ ಕೆಲಸಗಳಿಗೆ ತಾತ್ಕಾಲಿಕ ನೆಲೆಯಲ್ಲಿ 44 ಕಾರ್ಮಿಕರು ಕಾರ್ಯನಿರ್ವಹಿಸುತ್ತಿ¨ªಾರೆ. ಈ ವರೆಗೆ ಪೌರಕಾರ್ಮಿಕರು ವಿಶ್ರಾಂತಿಗಾಗಿ ನಗರದೊಳಗಿನ ಮರದಡಿ, ಬಸ್ ನಿಲ್ದಾಣ, ರಸ್ತೆ ಬದಿಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಜಿಲ್ಲೆಯಲ್ಲೇ ಪ್ರಥಮ
ಅಮೃತ ನಿರ್ಮಲ ನಗರ ಯೋಜನೆಯಡಿ ಸರಕಾರದಿಂದ ಮಂಜೂರಾದ ಅನುದಾನದಲ್ಲಿ ದ.ಕ. ಜಿಲ್ಲೆಯಲ್ಲೇ ಪ್ರಥಮ ಯೋಜನೆಯಾಗಿ ಪೌರಬಂಧು ವಿಶ್ರಾಂತಿ ಗೃಹ ಅನುಷ್ಠಾನಗೊಳ್ಳುತ್ತಿದೆ. -ಜೀವಂಧರ್ ಜೈನ್, ಪುತ್ತೂರು ನಗರಸಭೆ ಅಧ್ಯಕ್ಷ.
ಪ್ರಕ್ರಿಯೆ ಪ್ರಗತಿಯಲ್ಲಿ
ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಪೌರಬಂಧು ವಿಶ್ರಾಂತಿ ಗೃಹ ಎಂಬ ವಿಶಿಷ್ಟ ಕಂಟೈನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವಾರದೊಳಗೆ ಬಿಇಒ ಕಚೇರಿ ಸನಿಹದ ಸರಕಾರಿ ಜಾಗದಲ್ಲಿ ಇರಿಸುವ ನಿಟ್ಟಿನಲ್ಲಿ ಪ್ರಯತ್ನ ಪ್ರಗತಿಯಲ್ಲಿದೆ. -ಮಧು ಎಸ್. ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ