Advertisement

ಆರೋಗ್ಯ ಸಚಿವರ ಜವಾಬ್ದಾರಿ ಮತ್ತೂಬ್ಬರಿಗೆ ಹಂಚಿಕೆ

04:24 PM May 07, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಮತ್ತು ದೇಶ ಮಾತ್ರವಲ್ಲದೆವಿಶ್ವವನ್ನೇ ತಲ್ಲಣಗೊಳ್ಳಿಸಿರುವ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣವನ್ನುಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಹೆಚ್ಚಿನಅಧಿ ಕಾರ ನೀಡುವ ಬದಲಿಗೆ ಅವರ ಜವಾಬ್ದಾರಿಗಳನ್ನು ಬೇರೆಯವರೆಗೆ ಹಂಚಿಕೆ ಮಾಡಿರುವ ಕ್ರಮಸರಿಯಿಲ್ಲವೆಂದು ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ ತೀವ್ರ ಅಸಮಾಧಾನವ್ಯಕ್ತಪಡಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ನಗರಸಭೆಗೆ ಜಕ್ಕಲಮಡುಗುಜಲಾಶಯದಿಂದ ಕುಡಿಯುವ ನೀರು ಪೂರೈಕೆಮಾಡುವ ಪೈಪ್‌ಲೈನ್‌ ದುರಸ್ತಿ ಕಾರ್ಯವನ್ನುವೀಕ್ಷಿಸಿ ಮಾತನಾಡಿದ ಅವರು, ಚಾಮರಾಜನಗರಮತ್ತು ಕೋಲಾರದಲ್ಲಿ ಯಾವ ರೀತಿಯಲ್ಲಿಕೊರೊನಾ ಸೋಂಕಿತರು ಮೃತಪಟ್ಟರು ಎಂದುಸ್ವತಃ ಆರೋಗ್ಯ ಸಚಿವರು ಆಯಾ ಜಿಲ್ಲೆಗಳಿಗೆ ಭೇಟಿನೀಡಿ ಸ್ಪಷ್ಟಪಡಿಸಿದ್ದಾರೆ.

ಹೀಗಿರುವಾಗ ಆರೋಗ್ಯಸಚಿವರು ಖಾತೆಯನ್ನು ಉತ್ತಮವಾಗಿ ನಿರ್ವಹಣೆಮಾಡುತ್ತಿದ್ದರೂ ಅದರಲ್ಲಿ ಕೆಲವೊಂದುಜವಾಬ್ದಾರಿಗಳನ್ನು ಬೇರೆಯವರಿಗೆ ಹಂಚಿಕೆ ಮಾಡಿರುವುದು ಸರಿಯಿಲ್ಲ ಎಂದು ತಿಳಿಸಿದರು.

ಎಲ್ಲರಿಗೂ ಅರಿವು ಇದೆ: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಕೇಂದ್ರದೊಂದಿಗೆ ಸತತಸಂಪರ್ಕ ಸಾಧಿ ಸಿ ಲಸಿಕೆಯನ್ನು ತಂದು ಅದನ್ನುಸಮರ್ಪಕವಾಗಿ ಹಂಚಿಕೆ ಮಾಡಲು ಕ್ರಮಕೈಗೊಂಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಕಾರ್ಯವೈಖರಿಯನ್ನು ಪಕ್ಷದ ಮುಖಂಡರು ಪ್ರಶಂಸಿದ್ದಾರೆ.

ಜೊತೆಗೆ ಜನರಆರೋಗ್ಯವನ್ನು ಕಾಪಾಡುವ ಸಲುವಾಗಿ ಅವರುಏನು ಮಾಡುತ್ತಿದ್ದಾರೆ. ಎಲ್ಲರಿಗೂ ಅರಿವು ಇದೆಎಂದು ಹೇಳಿದರು.ಹಾಸಿಗೆ ಮೀಸಲಿಟ್ಟಿದ್ದಾರೆ: ಯಾವ ಜಿಲ್ಲೆಯಲ್ಲಿವೈದ್ಯಕೀಯ ಕಾಲೇಜುಗಳಿಲ್ಲವೋ ಅಲ್ಲಿ ಆಯಾವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೋವಿಡ್‌ಸೋಂಕಿತರಿಗೆ ಅನುಕೂಲ ಕಲ್ಪಿಸಲು ಹಾಸಿಗೆಗಳನ್ನುಮೀಸಲಿಟ್ಟಿದ್ದಾರೆ.

Advertisement

ಹಾಗೆಯೇ ಚಿಕ್ಕಬಳ್ಳಾಪುರಜಿಲ್ಲೆಯ ಕೋವಿಡ್‌ ಸೋಂಕಿತರಿಗೆ ಬೆಂಗಳೂರಿನಹೆಬ್ಟಾಳದ ಕೊಲಂಬಿಯಾ ಆಸ್ಪತ್ರೆ, ಬ್ಯಾಪ್ಟಿಸ್ಟ್‌ ಸಹಿತಮೂರು ಆಸ್ಪತ್ರೆಗಳಲ್ಲಿ ಶೇ.15 ಹಾಸಿಗೆಗಳನ್ನುಮೀಸಲಿಟ್ಟು ಆದೇಶವನ್ನು ಹೊರಡಿಸಿದ್ದಾರೆ. ಇದುಜನಪರ ಕಾಳಜಿ ಅಲ್ಲವೇ? ಎಂದು ಪ್ರಶ್ನಿಸಿದರು.

ತೆಜೋವಧೆ ಸರಿಯಲ್ಲ: ಆರೋಗ್ಯ ಸಚಿವರುಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು ಅವರಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೂರಿಸಿತೇಜೋವಧೆ ಮಾಡುವ ಹುನ್ನಾರವನ್ನುಸಹಿಸುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ನೀರು ಪೂರೈಕೆಯಲ್ಲಿ ವ್ಯತ್ಯಯ: ನಗರದಜಕ್ಕಲಮಡುಗು ಜಲಾಶಯದಲ್ಲಿ ಪೈಪ್‌ಲೈನ್‌ದುರಸ್ತಿ ಕಾರ್ಯವನ್ನು ನಡೆಯುತ್ತಿರುವುದರಿಂದಎರಡು ದಿನಗಳ ಕಾಲ ನಗರದಲ್ಲಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next